ಮಡಿಕೇರಿಯ ತನಲ್ ಆಶ್ರಮದಲ್ಲಿ ಒಬ್ಬೊಬ್ಬರದ್ದು ಒಂದೊAದು ಕಥೆ

ಕುಟುಂಬದಿAದ ಕಡೆಗಣಿಸಲ್ಪಟ್ಟು ಊರವರಿಂದ ದೂರವಾಗಿ ಒಟ್ಟಿನಲ್ಲಿ ಯಾರೂ ಇಲ್ಲದೆ ಪೂವಮ್ಮ ಎಂಬ ಈ ವೃದ್ಧೆ ಅನಾಥರಾಗಿಯೇ ತನಲ್ ಮನೆಗೆ ದಾಖಲಾಗಿದ್ದರು.

೨೦೨೧ ಮಾರ್ಚ್ ೩ ರಂದು ಹಾತೂರು ಪಂಚಾಯಿತಿ ಕಚೆೆÃರಿಯಿಂದ ಯಾರೂ ಇಲ್ಲದ ಅನಾಥರು ಎಂಬ ದೃಢೀಕರಣ ಪತ್ರದ ಮೂಲಕ ದಾಖಲಾಗುವಾಗ ಪ್ರಾಯ ಸುಮಾರು ೬೫.

ಜೀವನದ ಕೊನೆಯ ಕಾಲಘಟ್ಟದಲ್ಲಿ ಈಕೆಯನ್ನು ವಿವಾಹವಾಗಿ ಮೂರು ತಿಂಗಳ ಕಾಲದ ದಾಂಪತ್ಯ ಜೀವನದಲ್ಲಿ ರೋಗಿಯಾಗಿದ್ದ ಪತಿಯು ಒಂದು ದಿನ ಈಕೆಯನ್ನು ಬಿಟ್ಟಗಲಿದ್ದರು.

ಒಂಟಿ ಜೀವನ

ಗಂಡನ ಕಾಲಾನಂತರ ಸ್ವಂತ ಮಕ್ಕಳೂ ಇಲ್ಲದೇ ಸುಮಾರು ೨೦ ವರ್ಷಗಳ ಕಾಲ ಒಂಟಿಯಾಗಿ ಜೀವನ ನಡೆಸಿದ ಈಕೆ ವಯಸ್ಸಾದಾಗ ಸ್ವತಃ ದುಡಿಯಲು ಆಗದೆ ಸಂಕಷ್ಟಕ್ಕೆ ಸಿಲುಕಿ ಎಲ್ಲರಿಗೂ ಬಾರವಾದರು.

ಗಂಡನ ಮೊದಲ ಸಂಸಾರದಲ್ಲಿ ಮಕ್ಕಳು, ಮರಿ ಮಕ್ಕಳು ಇದ್ದರೂ ಈಕೆಗೆ ಆಶ್ರಯ ನೀಡಲು ಮುಂದೆ ಬರಲು ಒಪ್ಪದೆ ಇದ್ದರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈ ಒಂಟಿ ಜೀವ ಸೋತು ಹೋಗಿತ್ತು.

ತನಲ್ ಆಶ್ರಮಕ್ಕೆ ಬಂದಾಗ...

ಗ್ರಾಮದ ಸ್ಥಳೀಯರು, ಪಂಚಾಯಿತಿ ಅಧ್ಯಕ್ಷೆ ರೂಪಾ ಅವರಿಗೆ ಈ ಅಮ್ಮನ ಸ್ಥಿತಿಯ ಬಗ್ಗೆ ತಿಳಿಸಿ ಪಂಚಾಯಿತಿ ಕಚೇರಿಯು ಮಡಿಕೇರಿ ತನಲ್ ಆಶ್ರಮದ ಮೇಲ್ವಿಚಾರಕರಿಗೆ ಮಾಹಿತಿ ನೀಡುತ್ತಾರೆ. ನಂತರ ಪಂಚಾಯಿತಿಯ ದೃಢೀಕರಣ ಪತ್ರದೊಂದಿಗೆ ಮಡಿಕೇರಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಆಶ್ರಮಕ್ಕೆ ಸೇರಿಸಲಾಯಿತು.

ಸೂಕ್ತ ಚಿಕಿತ್ಸೆ ಉತ್ತಮ ಆರೈಕೆ

ಆಶ್ರಮಕ್ಕೆ ದಾಖಲಾಗುವಾಗ ರೋಗಿಯಾಗಿದ್ದ ಈಕೆಗೆ ಒಂದು ವರ್ಷದ ಹಿಂದೆ ಸೊಂಟದ ಶಸ್ತç ಚಿಕಿತ್ಸೆ ಮಾಡಲಾಗಿತ್ತು. ವಿಶೇಷ ಕಾರ್ಯಕ್ರಮಗಳು ಇದ್ದಾಗ ವೀಲ್‌ಚೇರ್ ಮೂಲಕ ಸಾಗಿಸುವುದು ಸಾಮಾನ್ಯವಾಗಿತ್ತು.

ಕೊಡವ ಕುಟುಂಬಕ್ಕೆ ಸೇರಿದವರಾಗಿದ್ದ ಪೂವಮ್ಮ ಕೆಲವೊಮ್ಮೆ ವಯೋ ಸಹಜವಾದ ಕೋಪ, ಸಿಡುಕನ್ನು ತೋರುತ್ತಿದ್ದರೂ ಆಶ್ರಮದ ಸೇವಕಿಯರು ಸಹನೆಯೊಂದಿಗೆ ಆಕೆಯನ್ನು ಶುಶ್ರೂಷೆ ಮಾಡುತ್ತಿದ್ದರು.

ಯಾರೊಂದಿಗೂ ಹೆಚ್ಚು ಮಾತನಾಡದೇ ಯಾವುದೋ ಚಿಂತೆಯಲ್ಲೇ ಮೌನವಾಗಿಯೇ ಇರುತ್ತಿದ್ದರು. ಇಳಿ ವಯಸ್ಸಿನವರಾಗಿದ್ದ ಪೂವಮ್ಮ ಎಂಬ ಒಂಟಿ ಜೀವದ ಪ್ರಾಣಪಕ್ಷಿ ಇತ್ತೀಚೆಗೆ ಮಲಗಿದಲ್ಲಿಯೇ ತಣ್ಣನೆ ಹಾರಿ ಹೋಗಿತ್ತು.

ಶವವನ್ನು ಸ್ವೀಕರಿಸಲು ಒಪ್ಪಲಿಲ್ಲ

ಕೊನೆಯ ಪ್ರಯತ್ನ ಎಂಬAತೆ ಕನಿಷ್ಟಪಕ್ಷ ಪ್ರಾರ್ಥಿವ ಶರೀರವನ್ನಾದರೂ ಸಂಬAಧಪಟ್ಟವರು ಸ್ವೀಕರಿಸಬಹುದು ಎಂಬ ನಿರೀಕ್ಷೆಯಲ್ಲಿ ಆಕೆಯ ಪತಿಯ ಮಕ್ಕಳನ್ನು ಸಂಪರ್ಕಿಸಲಾಗಿತ್ತು. ಆದರೆ ಶವವನ್ನು ಸ್ವೀಕರಿಸಲೂ ಯಾರೂ ಬರಲಿಲ್ಲ ಎಂದು ವ್ಯವಸ್ಥಾಪಕ ಮೊಹಮ್ಮದ್ ಬೇಸರ ವ್ಯಕ್ತಪಡಿಸುತ್ತಾರೆ.

ಕೊನೆಗೆ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಿಗೆ ಮಾಹಿತಿ ನೀಡಿ ಅಂತ್ಯಸAಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಯಿತೆಂದರು.

ಕೊನೆಯಲ್ಲಿ ಕೊಳ್ಳಿ ಇಟ್ಟವರು...

ಕೊನೆಯ ಕ್ಷಣದಲ್ಲಿ ಮಕ್ಕಳಿಲ್ಲದಿದ್ದರೇನು, ಕುಟುಂಬಸ್ಥರು ಕೈ ಬಿಟ್ಟರೇನು? ಅನಾಥ ಶವಗಳಿಗೆ ಅಂತ್ಯ ಸಂಸ್ಕಾರದೊAದಿಗೆ ಕೊಳ್ಳಿಯಿಡಲು ಸದಾ ಸೇವೆಗೆ ಸಿದ್ಧರಾಗಿರುವ ಹೈದಯವಂತರAತೂ ಇದ್ದಾರೆ ಎಂಬುದಕ್ಕೆ ಮಡಿಕೇರಿಯಲ್ಲಿರುವ ಈ ಯುವಕರ ತಂಡವೇ ಸಾಕು.

ಎಂದಿನAತೆ ಅದೇ ಯುವಕರಾದ ಸ್ಥಳೀಯರಾದ ವಾಜಿದ್ ಹಾಗೂ ಅಶ್ರಫ್ ಎಂಬವರ ಸಹಕಾರದಿಂದ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಸಾಗಿಸಿ ಅಂತ್ಯಸAಸ್ಕಾರ ನಡೆಸಿಕೊಡುತ್ತಾರೆ.

ಕೃತಜ್ಞತೆ ಭಾವ

ತನಲ್ ಆಶ್ರಮದಲ್ಲಿ ಮರಣಹೊಂದಿದ ಬಹುತೇಕ ಪಾರ್ಥಿವ ಶರೀರಗಳಿಗೆ ಸಾಮಾಜಿಕ ಕಾರ್ಯಕರ್ತರು ಮುಂದೆ ಬಂದು ಅಂತ್ಯಸAಸ್ಕಾರಕ್ಕೆ ಕೈಜೋಡಿಸಿ ಸಹಕರಿಸುತ್ತಿರುವ ನಲ್ಮೆಯ ಮನಸುಗಳಿಗೆ ತನಲ್ ಸಮಿತಿ ಎಂದಿಗೂ ಚಿರಋಣಿಯಾಗಿದೆ ಎಂದು ಮೊಹಮ್ಮದ್ ಕೃತಜ್ಞತೆ ಸಲ್ಲಿಸಲು ಮರೆಯಲಿಲ್ಲ..

- ಅಬ್ದುಲ್ಲಾ, ಮಡಿಕೇರಿ.