ಪಾಲಿಬೆಟ್ಟ, ಮಾ. ೧೪: ಪಾಲಿಬೆಟ್ಟದ ದೃಶ್ಯ ಪಿ.ಸಿ. ಅವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಎಂ.ಎ. ಪದವಿಯಲ್ಲಿ ೨೦೨೩-೨೪ನೇ ಸಾಲಿನ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವುದರಿಂದ ಸಿ.ಎನ್. ಸಂಜಯ್ ದ್ವನ್ಯಲೋಕ ದತ್ತಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕ ನೀಡಿ ಗೌರವಿಸಿದರು. ದೃಶ್ಯ ಪಾಲಿಬೆಟ್ಟದ ಚಂದ್ರ ಮತ್ತು ಪ್ರಿಯ ದಂಪತಿಗಳ ಪುತ್ರಿ.