ಮಡಿಕೇರಿ, ಮಾ. ೧೨: ಸ್ವಸ್ತಿಕ್ ಎಂಟರ್ಟೈನ್ಮೆAಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದ ಕನ್ನಡ ಚಲನಚಿತ್ರ "ಕಂದೀಲು" ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ನಡೆದ ೧೫ನೇ ಬೆಂಗಳೂರು ಅಂತರರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗದಲ್ಲಿ ಆಯ್ಕೆಗೊಂಡು ೧೨ ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಂಡು ಅಂತಿಮ ಘಟ್ಟದಲ್ಲಿ "೨ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ"ಯನ್ನು ತನ್ನ ಮುಡಿಗೇರಿಸಿ ಕೊಂಡಿದೆ. ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಚಿತ್ರದ ನಾಯಕ ನಟ ಪ್ರಭಾಕರ್ ಬಿ.ಕುಂದರ್, ನಟಿ ಈರಮಂಡ ಹರಿಣಿ ವಿಜಯ್ ಉತ್ತಯ್ಯ, ಕಥೆ-ಸಂಕಲನಕಾರ ನಾಗೇಶ್ ಹಾಗೂ ವಿಜಯ್ ಉತ್ತಯ್ಯ ಹಾಜರಿದ್ದರು.