ಮಡಿಕೇರಿ, ಮಾ. ೧೨: ಹಲವು ವರ್ಷಗಳ ಅಂತರದ ಬಳಿಕ ಇದೀಗ ಈ ಹಿಂದೆ ನೆಸ್ಲೆ ಕೊಡಗು ಕಪ್ಗೆ ಬದಲಾಗಿ ನೆಸ್ಲೆ ಇಂಡಿಯಾ ಪ್ರಾಯೋಜಕತ್ವದಲ್ಲಿ ಹೊಸ ಸ್ವರೂಪದೊಂದಿಗೆ ಆರಂಭ ಗೊಳ್ಳುತ್ತಿರುವ ನೆಸ್ಕೆಫೆ ಕೊಡಗು ಕಪ್ ಹಾಕಿ ಪಂದ್ಯಾವಳಿಗೆ ಭರದ ಸಿದ್ಧತೆ ನಡೆಯುತ್ತಿದೆ. ಹಾಕಿ ಕೂರ್ಗ್ನ ಆಶ್ರಯದಲ್ಲಿ ತಾ. ೧೫ರಿಂದ ೧೭ರವರೆಗೆ ಈ ಪ್ರತಿಷ್ಠಿತ ಪಂದ್ಯಾಟ ಇದೀಗ ಕಾಕೋಟುಪರಂಬು ಮೈದಾನದಲ್ಲಿ ಆರಂಭಗೊಳ್ಳುತ್ತಿದೆ. ವ್ಯವಸ್ಥಿತ ರೀತಿಯಲ್ಲಿ ಈ ಪಂದ್ಯಾವಳಿಯನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಹಾಕಿ ಕೂರ್ಗ್ನ ಪದಾಧಿಕಾರಿಗಳು ಮುಂದಾಗಿದ್ದಾರೆ. ಪಂದ್ಯಾವಳಿಗಾಗಿ ಕಾಕೋಟುಪರಂಬು ಮೈದಾನ ಆಕರ್ಷಕ ರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ. ಕ್ರೀಡಾಂಗಣವನ್ನು ಸಮತಟು ್ಟಗೊಳಿಸುವುದು, ಸುತ್ತಳತೆಗೆ ಸಂಬAಧಿಸಿದAತೆ, ಫೈಂಟಿAಗ್ ಮಾಡಿ ಗುರುತಿಸುವುದು, ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಹಾಕಿ ಕೂರ್ಗ್ನ ಮೂಲಕ ನಡೆಯುವ ಜಿಲ್ಲಾಮಟ್ಟದ ಹಾಕಿ ಲೀಗ್ನಲ್ಲಿ ಮೊದಲ ೮ ಸ್ಥಾನಗಳಿಸಿರುವ ತಂಡಗಳಿಗೆ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶವಿದ್ದು ಐವರು ಅತಿಥಿ ಆಟಗಾರರನ್ನು ಎಲ್ಲಾ ತಂಡಗಳು ಬಳಸಿಕೊಳ್ಳಬಹುದಾಗಿದೆ. ಬ್ಲೇಜ್, ಮೂರ್ನಾಡು, ಬೊಟ್ಟಿಯತ್ ನಾಡ್ ಕುಂದ, ಬೇರಳಿನಾಡ್ ಕಂಡAಗಾಲ, ಮಲ್ಮ ಕಕ್ಕಬೆ, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್, ಕೋಣನಕಟ್ಟೆ ಇಲವೆನ್, ಎಂ.ಆರ್.ಎಫ್. ಮೂರ್ನಾಡು ಹಾಗೂ ಈಶ್ವರ
(ಮೊದಲ ಪುಟದಿಂದ) ಯೂತ್ ಕ್ಲಬ್ ಬೇಗೂರು ತಂಡಗಳು ಪ್ರಥಮ ನೆಸ್ಕೆಫೆ ಕೊಡಗು ಕಪ್ ಆಡಲು ಅರ್ಹತೆ ಗಳಿಸಿವೆ. ವಿಶೇಷವಾಗಿ ರಾಷ್ಟçದ ಖ್ಯಾತನಾಮ ಹಾಕಿ ಆಟಗಾರರು ವಿವಿಧ ತಂಡಗಳ ಪರ ಅತಿಥಿ ಆಟಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ. ಕೆಲವು ಆಟಗಾರರ ಪಾಲ್ಗೊಳ್ಳುವಿಕೆ ಖಚಿತವಾಗಿದ್ದರೂ ಯಾವ ತಂಡಗಳೂ ಈ ಗುಟ್ಟು ಬಿಟ್ಟು ಕೊಡುತ್ತಿಲ್ಲ.
ಹಾಕಿ ಕೂರ್ಗ್ನ ಅಧ್ಯಕ್ಷ ಪಳಂಗAಡ ಲವಕುಮಾರ್, ಕಾರ್ಯದರ್ಶಿ ಅಮ್ಮಂಡಿರ ಚೇತನ್ ಸೇರಿದಂತೆ ಪದಾಧಿಕಾರಿಗಳು ಪಂದ್ಯಾಟದ ಯಶಸ್ಸಿಗೆ ಯತ್ನಿಸುತ್ತಿದ್ದಾರೆ. ಉದ್ಘಾಟನೆ ಹಾಗೂ ಸಮಾರೋಪಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ನೆಸ್ಲೆ ಇಂಡಿಯಾದ ಪ್ರಮುಖರೂ ಪಾಲ್ಗೊಳ್ಳುತ್ತಿದ್ದಾರೆ. ಸದ್ಯದಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವವೂ ಆರಂಭಗೊಳ್ಳುತ್ತಿದ್ದು ಇದೀಗ ನೆಸ್ಕೆಫೆ ಕಪ್ನ ಮೂಲಕ ಜಿಲ್ಲೆಯಲ್ಲಿ ಹಾಕಿ ಕಲರವ ಆರಂಭಗೊಳ್ಳುತ್ತಿದೆ.