ಬಸ್ಗೆ ಕಾಯುತ್ತಾ ನಿಂತ ನಿಲ್ದಾಣದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ ಮುಂಗಟ್ಟುಗಳ ಮುಂದೆ ಅತ್ಯಂತ ಕಿರಿಕಿರಿಗೊಳಿಸುವ ವಿಷಯ ಎಂದರೆ ಧೂಮಪಾನದ ಹೊಗೆ. ಹೇಳಲು ಆಗದೆ, ಉಸಿರಾಡಲು ಆಗದೆ ನಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕಾದ ಪರಿಸ್ಥಿತಿ. ಸಿಗರೇಟು ಬೀಡಿಗಳನ್ನು ಮಾರುವವರನ್ನು ದೂರಬೇಕೊ, ಇಲ್ಲಾ ಅದರ ತಯಾರಕರಿಗೋ, ಇಲ್ಲ ಅನುಮತಿ ನೀಡಿದ ಸರ್ಕಾರಕ್ಕೊ ಅಥವಾ ಅದನ್ನ ಖರೀದಿಸಿ ಸೇದುವವರಿಗೋ ಗೊತ್ತಾಗೊಲ್ಲ. ಒಟ್ಟಿನಲ್ಲಿ ಧೂಮಪಾನ ಸೇವಿಸುವವರು ಮಾತ್ರವಲ್ಲ ಅವರ ಅಕ್ಕಪಕ್ಕದಲ್ಲಿ ಇರುವವರು ಕೂಡ ಅನಾರೋಗ್ಯಕ್ಕೆ ತುತ್ತಾಗುವುದು ಗ್ಯಾರಂಟಿ. ಕೆಲವರಿಗಂತೂ ಬೆಳಿಗ್ಗೆ ಎದ್ದ ತಕ್ಷಣ ನೀರು, ಕಾಫಿ ಕುಡಿಯುವ ಬದಲು ಧೂಮಪಾನ ಕುಡಿಯುವ ಪರಿಪಾಠ ಹೊಂದಿರುತ್ತಾರೆ. ಇದು ಅವರ ಅತಿರೇಕದ ಚಟ ಆಗಿದ್ದು ಅದರ ಪರಿಣಾಮಗಳ ಅರಿವಿದ್ದರೂ ಅದನ್ನು ಬಿಡಲೊಲ್ಲರು.
ಧೂಮ ಎಂದರೆ ಹೊಗೆ, ಪಾನ ಎಂದರೆ ಸೇವನೆ. ಅಂದರೆ ತಂಬಾಕನ್ನು ಉರಿಸಿ ಅದರ ರುಚಿಯನ್ನು ಬಾಯಿ ಹಾಗೂ ಮೂಗಿನ ಮೂಲಕ ಉಸಿರು ತೆಗೆದುಕೊಳ್ಳುವುದನ್ನು ಧೂಮಪಾನ ಎನ್ನಲಾಗುತ್ತದೆ.
ಇತಿಹಾಸದ ಪುಟಗಳನ್ನು ಕೆದಕಿದಾಗ ಧೂಮಪಾನದ ಇತಿಹಾಸವು ಕ್ರಿಸ್ತಪೂರ್ವ ೫೦೦೦- ೩೦೦೦ದಷ್ಟು ಹಿಂದಕ್ಕೆ ದಕ್ಷಿಣ ಅಮೇರಿಕಾದಲ್ಲಿ ತಂಬಾಕನ್ನು ಕೃಷಿ ಉತ್ಪನ್ನದಂತೆ ಬೆಳೆಯುತ್ತಿದ್ದಾಗಿನ ದಿನಗಳಿಗೆ ಹೋಗುತ್ತದೆ. ಆ ಉತ್ಪನ್ನವನ್ನು ಔಷಧಿಗಾಗಿಯೂ ಉಪಯೋಗಿಸುತ್ತಿದ್ದರು. ಅಲ್ಲದೇ ಇದನ್ನು ಬ್ಯಾಬಿಲೋನಿಯನ್ನರು, ಭಾರತೀಯರು, ಚೀನೀಯರು, ಇಸ್ರೇಲೀಯರು ಮುಂತಾದ ಹಲವಾರು ನಾಗರಿಕತೆಗಳು ಧಾರ್ಮಿಕ ಆಚರಣೆಗಳ ಅಂಗವಾಗಿ ಧೂಪ ಹಾಕಲು ಬಳಸುತ್ತಿದ್ದರು. ಆದರೆ ಕಾಲಕ್ರಮೇಣ ಆ ಧೂಪವು ರೂಪಗೊಂಡು ಚಟವಾಗಿ ಪರಿವರ್ತನೆಯಾಯಿತು. ಉತ್ತರ ಅಮೇರಿಕಾದ ಪೂರ್ವಭಾಗದ ಬುಡಕಟ್ಟುಗಳ ಜನರು ತಂಬಾಕನ್ನು ಯಾವಾಗಲು ದೊಡ್ಡ ಗಂಟುಗಳಲ್ಲಿ ಕಟ್ಟಿಕೊಂಡು ವ್ಯಾಪಾರ ವಿನಿಮಯಕ್ಕಾಗಿ ಇಟ್ಟುಕೊಳ್ಳುತ್ತಿದ್ದುದಲ್ಲದೆ ಪವಿತ್ರವೆಂದು ಪರಿಗಣಿಸಲಾಗುವ ಸಮಾರಂಭಗಳಲ್ಲಿ ಮತ್ತು ವ್ಯಾಪಾರವೊಂದನ್ನು ಮುಗಿಸಿದ ಸಂಕೇತವಾಗಿ ಆಗಾಗ ಕೊಳವೆಗಳ ಮೂಲಕ ಸೇದುತ್ತಿದ್ದರು.
ಧೂಮಪಾನವು ಬಾಲ್ಯವನ್ನೂ ಒಳಗೊಂಡAತೆ ಜೀವನದ ಎಲ್ಲಾ ಹಂತಗಳಲ್ಲಿಯೂ ಬಳಸಲ್ಪಡುತ್ತಿತ್ತು. ಮಾದಕತೆಯನ್ನು ಹೆಚ್ಚಿಸುವಲ್ಲಿ ಧೂಮಪಾನವು ತನ್ನ ಪ್ರಸ್ತುತಿಯನ್ನು ಹೆಚ್ಚಿಸಿಕೊಂಡು ಮನುಕುಲವನ್ನು ತನ್ನ ಕಬಂಧ ಬಾಹುಗಳಲ್ಲಿ ಅಧೋಗತಿಗೆ ತೆಗೆದುಕೊಂಡು ಹೋಗುತ್ತಿರುವಾಗ ಅದರ ಬಳಕೆಗೆ ಕಡಿವಾಣ ಹಾಕುವುದು ಅನಿವಾರ್ಯವಾಗಬೇಕಾಯಿತು. ೧೯೨೦ರ ದಶಕದ ಅಂತ್ಯಭಾಗದಲ್ಲಿ ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವಿನ ಸಂಬAಧವನ್ನು ಪತ್ತೆಹಚ್ಚಿದ್ದರಿಂದ ಆಧುನಿಕ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಧೂಮಪಾನ-ವಿರೋಧಿ ಚಳವಳಿ ಪ್ರಾರಂಭವಾಯಿತೆAಬ ಉಲ್ಲೇಖವಿದೆ. ಮೊದಲ ಬಾರಿ ಈ ಆಚರಣೆಯನ್ನು ೧೯೮೪ನೇ ಮಾರ್ಚ್ ತಿಂಗಳಲ್ಲಿ ಎರಡನೇ ಬುಧವಾರದಂದು ಆಚರಿಸಲಾಗಿದ್ದು ಇಂಗ್ಲೆAಡ್ ದೇಶದಲ್ಲಿ ಆರಂಭವಾಗಿ ಬಳಿಕ ವಿಶ್ವದೆಲ್ಲೆಡೆ ವ್ಯಾಪಿಸಲು ಪ್ರಾರಂಭಿಸಿತು. ನಂತರದಲ್ಲಿ ಇದನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಬುಧವಾರದಂದು ವಿಶ್ವ ಧೂಮಪಾನ ರಹಿತ ದಿನವೆಂದು ಆಚರಿಸ ತೊಡಗಿದರು ಮತ್ತು ಆ ಬುಧವಾರವನ್ನು ಬೂದಿ ಬುಧವಾರ (ಂsh Weಜಟಿesಜಚಿಥಿ) ಎಂದು ಕರೆದಿದ್ದರು. ಆ ದಿನ ಜನರನ್ನು ಧೂಮಪಾನ ಬಿಡುವಂತೆ ಮನವೊಲಿಸುವ ಕೆಲಸ ಮಾಡಲಾಗುತ್ತದೆ. ೨೦೧೧ ರಲ್ಲಿ “ಸಿಗರೇಟು ಬಿಡುವ ಸಮಯ" ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲ್ಪಟ್ಟಿತ್ತು, ೨೦೧೦ ರಲ್ಲಿ ಸಿಗರೇಟು ಸಹವಾಸ ಬಿಡಿ' ಎಂಬ ಘೋಷ ವಾಕ್ಯ ಇದ್ದದ್ದು ೨೦೨೦ರಲ್ಲಿ ಸಿಗರೇಟು ಬಿಟ್ಟು ನೋಡಿ' ಎಂಬ ವಾಕ್ಯದೊಂದಿಗೆ ಆಚರಿಸಲಾಗಿತ್ತು. ಈ ವರ್ಷ ಮಾರ್ಚ್ ೧೩ನೇ ತಾರೀಕು ಬುಧವಾರ ಅಂದರೆ ಇಂದು ಧೂಮಪಾನ ರಹಿತ ದಿನವನ್ನು ಆಚರಿಸಲಾಗುತ್ತಿದೆ. ಸಿಗರೇಟು ಬಿಡುವುದರಿಂದ ವ್ಯಕ್ತಿಗೆ ಉಂಟಾಗುವ ಲಾಭಗಳು ಮತ್ತು ಅನುಕೂಲಗಳ ಬಗ್ಗೆ ಅರಿವು ಮೂಡಿಸಿ ಸಿಗರೇಟಿನಿಂದ ದೇಹಕ್ಕೆ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ.
ಧೂಮಪಾನವು ಆಗಾಗ್ಗೆ ಟೀಕೆಗೆ ಒಳಗಾದರೂ ಕೂಡ ಅದರ ಜನಪ್ರಿಯತೆ ಹೆಚ್ಚುತ್ತಲೇ ಹೋಗಿದೆ. ಜೊತೆಗೆ ಅದರ ಅರಿವು ಜನತೆಗೆ ಇದ್ದರೂ ಸಹ ಇದರ ಸೇವನೆ ಏನೂ ಕಡಿಮೆಯಾಗಿಲ್ಲ. ಬೇಡಿಕೆಗೆ ತಕ್ಕಂತೆ ರೈತರು ವಾಣಿಜ್ಯ ಬೆಳೆಯಾಗಿ ಉತ್ತಮ ಲಾಭಗಳಿಕೆಗಾಗಿಯೂ ತಂಬಾಕನ್ನು ಬೆಳೆಯುತ್ತಾರೆ.
೨೦೦೦ ದ ಅಂಕಿ ಅಂಶಗಳ ಪ್ರಕಾರ ಸುಮಾರು ೧.೨೨ ಬಿಲಿಯನ್ ಜನರು ಧೂಮಪಾನದ ರೂಢಿಯನ್ನಿಟ್ಟುಕೊಂಡಿದ್ದರು. ಹೆಂಗಸರಿಗಿAತ ಗಂಡಸರು ಧೂಮಪಾನ ಮಾಡುವ ಸಾಧ್ಯತೆಗಳು ಜಾಸ್ತಿ. ಆದರೆ ಇತ್ತೀಚೆಗೆ ಹೆಂಗಸರು ಧೂಮಪಾನದ ಬಳಕೆ ತಮ್ಮ ಅಂತಸ್ತು, ಪ್ರತಿಷ್ಠೆಗಾಗಿ ಎನ್ನುವಂತಿದೆ. ಧೂಮಪಾನವು ಶ್ರೀಮಂತವರ್ಗ ಬಡವರ್ಗ ಎಂಬ ಯಾವುದೇ ತಾರತಮ್ಯವಿಲ್ಲದೆ ಬೀಡಿ, ಸಿಗರೇಟು, ಪೈಪು ಸಿಗಾರುಗಳು ಹೀಗೆ ಅವರವರ ಹಂತಕ್ಕೆ ತಕ್ಕಂತೆ ಸಿಗುವ ಧೂಮಪಾನದ ವಸ್ತುವನ್ನು ಬಳಕೆ ಮಾಡುತ್ತಾರೆ.
ಹೆಚ್ಚಿನ ಧೂಮಪಾನಿಗಳು ಹದಿಹರೆಯ ಅಥವಾ ತರುಣಾವಸ್ಥೆಯಲ್ಲಿ ಆರಂಭ ಮಾಡುತ್ತಾರೆ. ಸಾಧಾರಣವಾಗಿ ಮೊದಮೊದಲ ಹಂತಗಳಲ್ಲಿ ಧೂಮಪಾನದಿಂದ ಆಹ್ಲಾದದ ಭಾವನೆಗಳು ಉಂಟಾಗುವ ಕಾರಣದಿಂದ ಅದನ್ನು ಹೆಚ್ಚು ಹೆಚ್ಚು ಬಳಕೆಯಲ್ಲಿ ಒಲವು ತೋರಿಸುತ್ತಾರೆ. ಕಾಲಕ್ರಮೇಣ ಅಭ್ಯಾಸವು ಹವ್ಯಾಸವಾಗಿ ಬಿಟ್ಟಿರಲಾರದಂತ ಸ್ಥಿತಿಗೆ ತಲುಪುತ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಮಾತಿನಂತೆ ಅದರ ಚಟವನ್ನು ಬಿಡಿಸಲು ಆಗದೆ ಶ್ವಾಸಕೋಶ ಸಂಬAಧಿ ಅನೇಕ ಕಾಯಿಲೆಗಳಿಗೆ ತುತ್ತಾಗಿ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಧೂಮಪಾನ ರಹಿತ ದಿನವಾದ ಇಂದು ಅದರ ಬಳಕೆಯಿಂದಾಗುವ ಹಲವಾರು ದುಷ್ಪರಿಣಾಮಗಳ ಬಗ್ಗೆಯೂ ತಿಳಿದುಕೊಳ್ಳುವ ಅಗತ್ಯತೆಯೂ ಇದೆ. ಧೂಮಪಾನ ಮಾಡುವುದರಿಂದ ಗಂಟಲು ಕ್ಯಾನ್ಸರ್ ಸಂಭವಿಸುವುದು. ಇದರ ಸೇವನೆಯಿಂದ ದೇಹಕ್ಕೆ ಆಮ್ಲಜನಕದ ಕೊರತೆಯುಂಟಾಗಿ ಮೆದುಳಿಗೆ ಹಾನಿ ತಟ್ಟುವುದು, ಹಸಿವು ಕಡಿಮೆಯಾಗಿ, ನಿದ್ರಾನಾಶವಾಗುವುದು. ಧೂಮಪಾನದ ಹೊಗೆ ಮೂಗಿನ ಮೂಲಕ ಬಿಡುವುದರಿಂದ ಘ್ರಾಣೇಂದ್ರಿಯದ ಸಂವೇದನಾಶಕ್ತಿ ಕುಗ್ಗುವುದು. ಹೊಗೆಸೊಪ್ಪಿನಲ್ಲಿರುವ ನಿಕೋಟಿನ್ ಎಂಬ ವಿಷವಸ್ತುವಿನ ಪ್ರಭಾವದಿಂದ ಜಠರದಲ್ಲಿ ಆಮ್ಲದ ಉತ್ಪತ್ತಿ ಹೆಚ್ಚುವುದು, ಇದರ ದೆಸೆಯಿಂದ ಹೊಟ್ಟೆ ಹುಣ್ಣು ಉಂಟಾಗುತ್ತದೆ. ಧೂಮಪಾನದ ದೆಸೆಯಿಂದ ರಕ್ತನಾಳಗಳು ಗಾತ್ರದಲ್ಲಿ ಕುಗ್ಗುತ್ತವೆ ಅಲ್ಲದೆ ವ್ಯಕ್ತಿಯು ಅಧಿಕ ರಕ್ತದ ಒತ್ತಡದಿಂದ ನರಳುವ ಸಂಭವವುAಟು ಹಾಗೂ ರಕ್ತದ ಒತ್ತಡ ಹೆಚ್ಚುವುದರಿಂದ ಹೃದಯದ ಕಾರ್ಯ ಕಠಿಣವಾಗಿ ಎದೆನೋವು ಕಾಣಿಸಿಕೊಳ್ಳುವುದು. ಈ ಪರಿಸ್ಥಿತಿ ಮೇರೆ ಮೀರಿದಾಗ ರಕ್ತ ಪರಿಚಲನೆಗೆ ಅಡ್ಡಿಯುಂಟಾಗಿ ವ್ಯಕ್ತಿಯು ಮರಣ ಹೊಂದುವ ಸಾಧ್ಯತೆಯುಂಟು. ಧೂಮಪಾನದಿಂದ ಬಳಕೆಯಿಂದ ಮೆದುಳಿನ ಕ್ರಿಯಾಶಕ್ತಿ ಹೆಚ್ಚುವುದು. ಈ ದೆಸೆಯಿಂದ ಕಾಲಾಂತರದಲ್ಲಿ ವ್ಯಕ್ತಿಯು ನರದೌರ್ಬಲ್ಯಕ್ಕೆ ಈಡಾಗುವನು.
ಈ ಎಲ್ಲಾ ಕಾರಣಾಂತರಗಳಿAದ ಧೂಮಪಾನದ ಬಳಕೆಯನ್ನು ನಿರ್ಬಂಧಿಸುವ ಪ್ರಯತ್ನವೂ ನಡೆಯುತ್ತಲೇ ಇದೆ. ಜುಲೈ ೧೨, ೧೯೯೯ ರಂದು ಭಾರತದಲ್ಲಿನ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠವು "ಸಾರ್ವಜನಿಕ ಧೂಮಪಾನವನ್ನು ಇಡೀ ಪ್ರಪಂಚದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾನೂನುಬಾಹಿರ, ಸಂವಿಧಾನದ ೨೧ನೇ ವಿಧಿಯ ಉಲ್ಲಂಘನೆ" ಎಂದು ಘೋಷಿಸುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿತು. ಡಾ. ನ್ಯಾಯಮೂರ್ತಿ ಕೆ. ನಾರಾಯಣ ಕುರುಪ್ ಅವರ ನೇತೃತ್ವದ ಪೀಠವು, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್, ಸಿಗಾರ್, ಬೀಡಿ ಅಥವಾ ಇತರ ರೂಪದಲ್ಲಿ "ತಂಬಾಕು ಸೇವನೆ" "ಸಾರ್ವಜನಿಕ ಉಪದ್ರವಕ್ಕೆ ಸಂಬAಧಿಸಿದ ದಂಡದ ನಿಬಂಧನೆಗಳ ದುಷ್ಕೃತ್ಯದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿತು. ಭಾರತೀಯ ದಂಡ ಸಂಹಿತೆಯಲ್ಲಿ ಮತ್ತು ಪರಿಸರದ ರಕ್ಷಣೆ ಮತ್ತು ಸಂರಕ್ಷಣೆಗೆ ಸಂಬAಧಿಸಿದ ಕಾನೂನುಗಳಲ್ಲಿ ಒಳಗೊಂಡಿರುವ ವಾಯು ಮಾಲಿನ್ಯದ ವ್ಯಾಖ್ಯಾನಕ್ಕೆ ಸಂಬAಧಿಸಿದAತೆಯು ಇದನ್ನು ಜಾರಿಗೆ ತರಲಾಯಿತು.
೨೦೦೩ ರಲ್ಲಿ ಭಾರತವು ರೆಸ್ಟೋರೆಂಟ್ಗಳು, ಸಾರ್ವಜನಿಕ ಸಾರಿಗೆ ಅಥವಾ ಶಾಲೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸುವ ಕಾನೂನನ್ನು ಪರಿಚಯಿಸಿತು.
ಅದೇ ಕಾನೂನು ಸಿಗರೇಟ್ ಅಥವಾ ಇತರ ತಂಬಾಕು ಉತ್ಪನ್ನಗಳನ್ನು ಜಾಹೀರಾತು ಮಾಡುವುದನ್ನು ಕಾನೂನುಬಾಹಿರವಾಗಿ ಮಾಡಿದೆ. ಪ್ರತಿ ಸಾರ್ವಜನಿಕ ಸ್ಥಳಗಳಲ್ಲಿ, ಚರ್ಚ್, ಮಸೀದಿ, ದೇವಸ್ಥಾನ, ಶಾಲಾ ಕಾಲೇಜಗಳಲ್ಲಿ ಅಲ್ಲದೆ ಇನ್ನೂ ಅನೇಕ ಗುಡಿ ಗೋಪುರಗಳ ಗೋಡೆಗಳಲ್ಲಿ ಧೂಮಪಾನ ನಿಷೇಧದ ಸೂಚನೆಗಳನ್ನು ಹಾಕಿದ್ದರೂ ಮಾತ್ರವಲ್ಲ ಪ್ರತಿ ಧೂಮಪಾನದ ಪ್ಯಾಕೆಟ್ಗಳ ಮೇಲೆ ಅದರ ಪರಿಣಾಮಗಳ ಬಗ್ಗೆ ಚಿತ್ರಸಹಿತ ಮಾಹಿತಿಗಳಿದ್ದರೂ ಧೂಮಪಾನಿಗಳ ಹಾವಳಿ ಸಂಪೂರ್ಣವಾಗಿ ಕೊನೆಗೊಂಡಿಲ್ಲ. ದಿನನಿತ್ಯ ಮೋಜಿಗಾಗಿ ಧೂಮವ್ಯಸನಕ್ಕೆ ದಾಸರಾಗಿ ಬಲಿಯಾಗುತ್ತಿರುವ ಯುವಕ ಯುವತಿಯರು ಎಚ್ಚೆತ್ತುಕೊಳ್ಳದಿದ್ದಲ್ಲಿ ತಮ್ಮ ಜೀವವನ್ನು ಅಡವಿಡಬೇಕಾಗುತ್ತದೆ.
“ನಾವು ನಿತ್ಯವೂ ಉರಿಸಬೇಕಾಗಿರುವುದು ಕ್ಯಾಲೋರಿಯನಷ್ಟೆ ಹೊರತು ಧೂಮವನ್ನಲ್ಲ”, “ಧೂಮಪಾನವನ್ನು ತೊರೆಯುವ ಪ್ರತಿಜ್ಞೆ ಮಾಡಿ, ಜೀವನವನ್ನು ಕಾಪಾಡಿ” ಎಂಬ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಧೂಮ ವ್ಯಸನದಿಂದ ನಾವು ಪಾರಾಗುವುದರೊಂದಿಗೆ ಇತರ ಅಮಾಯಕರನ್ನು ಉಳಿಸುವ. ಅಲ್ಲದೆ ಸದೃಢ ಆರೋಗ್ಯಪೂರ್ಣ ಸಮಾಜಕ್ಕೆ ನಾಂದಿ ಹಾಡುವ.
- ಮೀರ ಸುಮನ್ ಕ್ಯಾಸ್ತಲಿನ್, ಸಹ ಶಿಕ್ಷಕಿ, ಸರಕಾರಿ ಪ್ರೌಢಶಾಲೆ, ಹಂಡ್ಲಿ.