ಮಡಿಕೇರಿ, ಮಾ. ೧೨: ಕೊಟ್ಟಗೇರಿ ಸಮುದಾಯ ಭವನದಲ್ಲಿ ಕಾಫಿ ಮಂಡಳಿ ಗೊಣಿಕೊಪ್ಪಲು ಆಶ್ರಯದಲ್ಲಿ ಲಕ್ಷö್ಮಣತೀರ್ಥ ಸಂಘದ ಸಹಕಾರದೊಂದಿಗೆ ಮಣ್ಣು ಪರೀಕ್ಷಾ ಅಭಿಯಾನ ನಡೆಸಲಾಯಿತು. ಈ ಸಂದರ್ಭ ನಲುವತ್ತಮೂರು ಬೆಳೆಗಾರರಿಗೆ ಸ್ಥಳದಲ್ಲೇ ಸುಣ್ಣದ ಪ್ರಮಾಣದ ಶಿಫಾರಸಿನ ಫಲಿತಾಂಶ ನೀಡಲಾಯಿತು.

ಮಣ್ಣು ಪರೀಕ್ಷಾ ವಿಜ್ಞಾನಿ ಪ್ರಪುಲಾ ಕುಮಾರಿ ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಗೊಬ್ಬರದ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಾಫಿ ಮಂಡಳಿಯ ಕಿರಿಯ ಸಂಪರ್ಕ ಅಧಿಕಾರಿಗಳಾದ ಮುಖಾರಿಬ್ ಮಾತನಾಡಿ ಕಾಫಿ ಬೆಳೆಗಾರರಿಗೆ ಕಾಫಿ ಗಿಡಗಳಿಗೆ ಬೇಕಾದ ನೀರಿನ ಪ್ರಮಾಣದ ಬಗ್ಗೆ , ಸುಣ್ಣದ ಮತ್ತು ಗೊಬ್ಬರದ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು. ಲಕ್ಷö್ಮಣ ತೀರ್ಥ ಸಂಘದ ಅಧ್ಯಕ್ಷ ಮಚ್ಚಮಾಡ ಅಯ್ಯಪ್ಪ, ಕಾರ್ಯದರ್ಶಿಗಳಾದ ಮಾಚಂಗಡ ಸುಬ್ರಮಣಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರಮಣಮಾಡ ಸತೀಶ್ ದೇವಯ್ಯ ಸೇರಿದಂತೆ ಲಕ್ಷö್ಮಣತೀರ್ಥ ಸಂಘದ ಸದಸ್ಯರು ಮತ್ತು ಕಾಫಿ ಬೆಳೆಗಾರರು ಹಾಜರಿದ್ದರು