ಮಡಿಕೇರಿ, ಮಾ. ೧೨: ಸಿವಿಲ್ ಸರ್ವಿಸ್ ಪರೀಕ್ಷೆಗಳಾದ ಕೆ.ಪಿ.ಎಸ್.ಸಿ, ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಿರುವ ತರಬೇತಿಯನ್ನು ಉಚಿತವಾಗಿ ನೀಡಲು ಶಾಸಕ ಎ.ಎಸ್. ಪೊನ್ನಣ್ಣ ಅವರು ಮುಂದಾಗಿದ್ದಾರೆ. ‘ನಮ್ಮ ಕೆ.ಪಿ.ಎಸ್.ಸಿ' ಸಂಸ್ಥೆಯ ಮೂಲಕ ಡಾ. ಅರ್ಜುನ್ ಬೋಪಣ್ಣ ಮಾರ್ಗದರ್ಶನದಲ್ಲಿ ಕೊಡಗಿನ ಅರ್ಹ ೧೦ ವಿದ್ಯಾರ್ಥಿಗಳಿಗೆ

`ಎ.ಕೆ ಸುಬ್ಬಯ್ಯ-ಪೊನ್ನಮ್ಮ ದತ್ತಿನಿಧಿ' ಅಡಿಯಲ್ಲಿ ಉಚಿತ ತರಬೇತಿ ದೊರಕಲಿದೆ.

೨೦೨೧ ಹಾಗೂ ನಂತರದಲ್ಲಿ ಪದವಿ ಶಿಕ್ಷಣ ಪೂರೈಸಿರುವವರು ಉಚಿತ ತರಬೇತಿ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಜಿದಾರರು 'hಣಣಠಿs://eviಜhಥಿಚಿ.ಛಿom/ಣesಣ/' ವೆಬ್‌ಸೈಟ್‌ನಲ್ಲಿ 'ಂಠಿಣiಣuಜe' ಆನ್ ಲೈನ್ ಪರೀಕ್ಷೆಯನ್ನು ಬರೆದ ನಂತರ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅಂಕಪಟ್ಟಿ ದೊರಕಲಿದೆ.

ಅರ್ಜಿದಾರರು ಈ ಅಂಕಪಟ್ಟಿಯ ಪ್ರತಿ, ಉಚಿತ ತರಬೇತಿ ಅಗತ್ಯತೆಯ ಕುರಿತ ಲಿಖಿತ ಅರ್ಜಿ, ಯಾವುದಾದರು ೨ ಗುರುತಿನ ಚೀಟಿಗಳ ಪ್ರತಿ ಹಾಗೂ ಪದವಿ ಅಂಕಪಟ್ಟಿಯ ಪ್ರತಿಯೊಂದಿಗೆ ‘ಊoತಿ ತಿiಟಟ ಥಿou ಛಿoಟಿಣಡಿibuಣe ಣo ಣhe gಡಿoತಿಣh oಜಿ ಏoಜಚಿgu?’ (ಕೊಡಗಿನ ಬೆಳವಣಿಗೆಗೆ ನೀವು ಯಾವ ರೀತಿಯ ಕೊಡುಗೆ ನೀಡುತ್ತೀರಿ?) ಎಂಬ ವಿಷಯದ ಕುರಿತು ೨೫೦ ಪದಗಳನ್ನು ಮೀರದೆ ಪ್ರಬಂಧ ರಚಿಸಿ shಚಿಞಣhiಜಚಿiಟಥಿ@gmಚಿiಟ.ಛಿomಗೆ ಮೇಲ್ ಮೂಲಕ ಅಥವಾ `ಶಕ್ತಿ ಕಾರ್ಯಾಲಯ, ಕೈಗಾರಿಕಾ ಬಡಾವಣೆ, ಮಡಿಕೇರಿ' ಇಲ್ಲಿಗೆ ಕಳುಹಿಸಬೇಕಾಗಿ ವಿನಂತಿ.

ಅರ್ಜಿದಾರರ ಅರ್ಜಿ ವಿವರ, ಚಿಂತನೆ, ಬರಹ ಎಲ್ಲವನ್ನೂ ಗಮನಿಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.