ಕೂಡಿಗೆ, ಮಾ. ೧೨: ಸುಂಟಿಕೊಪ್ಪ ಜೆಸಿಐ ವತಿಯಿಂದ ಸೋಮವಾರ ಪೇಟೆ ಪೊಲೀಸ್ ಉಪ ವಿಭಾಗದ ಸಹಕಾರದೊಂದಿಗೆ ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಗೆ ಒತ್ತಡ ನಿರ್ವಹಣೆ ಮತ್ತು ಸಮಯ ಪಾಲನೆ ಕುರಿತು ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಸೋಮವಾರ ಪೇಟೆ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ನೆರವೇರಿಸಿದರು. ನಂತರ ಮಾತನಾಡಿ ಸಮಾಜದಲ್ಲಿ ಪೊಲೀಸರು ಕಾನೂನು ಪರಿಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡಿ ಇಲಾಖೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

ಜೆಸಿಐ ಸಂಸ್ಥೆಯ ವಲಯ- ೧೪ರ ವಲಯಾಧ್ಯಕ್ಷೆ ಆಶಾ ಜೈನ್ ಮಾತನಾಡಿ, ಇಂತಹ ತರಬೇತಿಗಳು ಪೊಲೀಸರ ವೃತ್ತಿಪರತೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೆಸಿಐ ವಲಯದ ಮಾಜಿ ಅಧ್ಯಕ್ಷ ದೇವಿಪ್ರಸಾದ್, ವಲಯದ ಪೂರ್ವ ಉಪಾಧ್ಯಕ್ಷ ಕೆ. ಪ್ರವೀಣ್, ವಲಯ ಸಂಯೋಜಕ ಬಿ.ಕೆ. ಸತೀಶ್ ಕುಮಾರ್,ಜೆಸಿಐ ವಲಯದ ಮಾಜಿ ಅಧ್ಯಕ್ಷ ದೇವಿಪ್ರಸಾದ್, ವಲಯದ ಪೂರ್ವ ಉಪಾಧ್ಯಕ್ಷ ಕೆ. ಪ್ರವೀಣ್, ವಲಯ ಸಂಯೋಜಕ ಬಿ.ಕೆ. ಸತೀಶ್ ಕುಮಾರ್, ಜೆಸಿಐನ ನಿಕಟಪೂರ್ವ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಕಾರ್ಯದರ್ಶಿ ಮಂಜುನಾಥ್, ಯೋಜನಾ ನಿರ್ದೇಶಕ ನಿರಂಜನ್, ಜೇಸೀ ಸದಸ್ಯರಾದ ಡೆನಿಸ್ ಡಿಸೋಜ, ಜಾಯ್ದ್ ಅಹ್ಮದ್, ಎಸ್. ಮುರುಗೇಶ್, ಫೆಲ್ಸಿ ಡೆನಿಸ್, ಜಿ.ಬಿ. ಹರೀಶ್, ಇತರರು ಇದ್ದರು. ತರಬೇತಿ ಕಾರ್ಯಾಗಾರದಲ್ಲಿ ಇನ್ಸ್ಪೆಕ್ಟರ್ ಗಳಾದ ರಾಜೇಶ್ ಕೊಟ್ಯಾನ್, ವಸಂತಕುಮಾರ್, ಪಿಎಸ್‌ಐಗಳಾದ ಎಂ.ಸಿ. ಶ್ರೀಧರ್, ಮೋಹನ್ ರಾಜ್, ರವಿಶಂಕರ್, ಹೆಚ್. ಮಂಜುಳಾ, ಕಾಶೀನಾಥ್ ಬಗಲಿ, ಲೋಹಿತ್, ರಮೇಶ್ ಸೇರಿದಂತೆ ಎಎಸ್‌ಐಗಳು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಸುಂಟಿಕೊಪ್ಪ ಜೆಸಿಐ ವತಿಯಿಂದ ರಾಷ್ಟಿçÃಯ ಜೆಸಿಐ ಸಂಸ್ಥೆಯ ಪೂರ್ವಾಧ್ಯಕ್ಷ ಟಿ.ವಿ.ಎನ್. ಮೂರ್ತಿ, ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಜೆಸಿಐ ವಲಯಾಧ್ಯಕ್ಷೆ ಆಶಾಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.