ಬೆಂಗಳೂರು, ಮಾ. ೧೨: ಸೋಮವಾರ ಸುಪ್ರೀಂಕೋರ್ಟ್ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐಗೆ ಚುನಾವಣಾ ಬಾಂಡ್‌ಗಳ ಪೂರ್ಣ ವಿವರವನ್ನು ಮಂಗಳವಾರ ಸಂಜೆಯೊಳಗೆ ಒದಗಿಸಬೇಕೆಂದು ತಾಕೀತು ಮಾಡಿತು. ಇದರ ನಂತರ ದೇಶಾದ್ಯಂತ ಈ ಬಾಂಡ್‌ಗಳ ಕುರಿತು ಚರ್ಚೆಗಳಾಗುತ್ತಿವೆ.

ಚುನಾವಣಾ ಬಾಂಡ್ ಎಂದರೆ ರಾಜಕೀಯ ಪಕ್ಷಗಳಿಗೆ ಹಣವನ್ನು ದೇಣಿಗೆ ನೀಡುವ ಗೌಪ್ಯ ವಿಧಾನವಲ್ಲದೆ ಬೇರೇನೂ ಅಲ್ಲ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರು ನಿಗದಿತ ಬ್ಯಾಂಕ್‌ಗೆ ತೆರಳಿ ಹಣ ನೀಡಿ ಬಾಂಡ್ ಖರೀದಿಸಬೇಕು. ನೀವು ಹೇಗೆ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಪಡೆದುಕೊಳ್ಳುತ್ತೀರೋ ಅದೇ ರೀತಿಯ ಚುನಾವಣಾ ಬಾಂಡ್ ಅನ್ನೂ ಕೂಡ ಖರೀದಿಸಬಹುದು. ಡಿಮ್ಯಾಂಡ್ ಡ್ರಾಫ್ಟ್ ಮತ್ತು ಚುನಾವಣಾ ಬಾಂಡ್ ನಡುವಿನ ವ್ಯತ್ಯಾಸವೆಂದರೆ ಡಿಮ್ಯಾಂಡ್ ಡ್ರಾಫ್ಟ್ ಪಾವತಿದಾರ ಮತ್ತು ಪಾವತಿಸುವವರ ಹೆಸರನ್ನು ಹೊಂದಿರುತ್ತದೆ. ಆದರೆ, ಚುನಾವಣಾ ಬಾಂಡ್ ಈ ಎರಡನ್ನೂ ಹೊಂದಿರುವುದಿಲ್ಲ. ಒಂದು ವೇಳೆ ಡ್ರಾಫ್ಟ್ನ್ನು ನೀವು ಕಳೆದುಕೊಂಡರೆ ಬ್ಯಾಂಕಿನಿAದ ಮತ್ತೊಂದು ಡಿಮಾಂಡ್ ಡ್ರಾಫ್ಟ್ ಪಡೆದುಕೊಳ್ಳಬಹುದು. ಆದರೆ ಬ್ಯಾಂಕು ನೀಡಿರುವ ಚುನಾವಣಾ ಬಾಂಡ್ ಅನ್ನು ಕಳೆದುಕೊಂಡರೆ ಅದನ್ನು ಪುನಃ ಪಡೆಯಲು ಅಥವಾ ನಕಲು ಪಡೆಯಲು ಸಾಧ್ಯವಿಲ್ಲ. ಇದು ಅಕ್ಷರಶಃ ಹಣವನ್ನೇ ಕಳೆದುಕೊಂಡAತೆಯೇ.

೨೦೧೭ರಲ್ಲಿ ಈ ಚುನಾವಣಾ ಬಾಂಡ್‌ಗಳ ಬಿಡುಗಡೆಗೆ ಕೇಂದ್ರ ಸರ್ಕಾರ ಎಸ್‌ಬಿಐಗೆ ಅನುಮತಿಯನ್ನು ನೀಡಿತ್ತು. ಆಗ ಸಿಪಿಐ ಹೊರತು ಪಡಿಸಿ ಯಾವುದೇ ರಾಜಕೀಯ ಪಕ್ಷಗಳು ಇದನ್ನು ವಿರೋಧಿಸಲಿಲ್ಲ ಎನ್ನುವುದು ಗಮನಾರ್ಹ. ಬಾಂಡ್‌ಗಳನ್ನು ಖರೀದಿಸಿದ ನಂತರ, ವ್ಯಕ್ತಿಯು ಬ್ಯಾಂಕ್‌ನಿAದ ಹೊರನಡೆದು ತನ್ನ ನೆಚ್ಚಿನ ರಾಜಕೀಯ ಪಕ್ಷದ ಕಚೇರಿಗೆ ಹೋಗುತ್ತಾನೆ. ಇಲ್ಲಿ ವ್ಯಕ್ತಿಯು ಬಾಂಡ್‌ಗಳನ್ನು ಹಸ್ತಾಂತರಿಸಿ ಅಲ್ಲಿಂದ ಹೊರನಡೆಯುತ್ತಾನೆ. ಪಕ್ಷದ ಯಾರೋ ಒಬ್ಬರು ನಂತರ ಎಸ್‌ಬಿಐಗೆ ಹೋಗುತ್ತಾರೆ ಮತ್ತು ಬಾಂಡ್ ಅನ್ನು ಪಕ್ಷದ ಖಾತೆಯ ವಿವರಗಳೊಂದಿಗೆ ಠೇವಣಿ ಮಾಡುತ್ತಾರೆ. ನಂತರ ಬ್ಯಾಂಕು ಆ ಪಕ್ಷದ ಖಾತೆಗೆ ಮೊತ್ತವನ್ನು ಜಮಾ ಮಾಡುತ್ತದೆ.

ಚುನಾವಣಾ ಬಾಂಡ್ ಆರಂಭವಾದ ನಾಲ್ಕು ವರ್ಷಗಳಲ್ಲಿ ಸುಮಾರು ೨೨,೨೧೭ ಬಾಂಡ್‌ಗಳನ್ನು ಎಸ್‌ಬಿಐ ಬಿಡುಗಡೆ ಮಾಡಿದೆ. ಇದರರ್ಥ ಒಟ್ಟು ವಹಿವಾಟುಗಳು ಸಾವಿರಾರು ಸಂಖ್ಯೆಯಲ್ಲಿರಬಹುದು. ಅಂದರೆ ಒಬ್ಬ ವ್ಯಕ್ತಿ ಖರೀದಿಸಿದ ಬಾಂಡ್‌ಗಳಿಗೆ ಅನುಗುಣವಾಗಿ ವಹಿವಾಟುಗಳ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಪ್ರತಿಯೊಂದು ವಹಿವಾಟನ್ನು ಬೇರೆ ಬೇರೆ ಲಕೋಟೆಯಲ್ಲಿ ದಾಖಲಿಸಲಾಗುತ್ತದೆ ಮತ್ತು ಇದು ಕಂಪ್ಯೂಟರಿನಲ್ಲಿ ದಾಖಲಾಗಿರುವುದಿಲ್ಲ.

ಚುನಾವಣಾ ಬಾಂಡ್‌ಗಳ ಪ್ರಮುಖ ಲಕ್ಷಣವೆಂದರೆ ದಾನಿಗೆ ಅವರು ನೀಡಿದ ಅನಾಮಧೇಯತೆ. ಒಬ್ಬ ವ್ಯಕ್ತಿ ಅಥವಾ ಘಟಕವು ಈ ಬಾಂಡ್‌ಗಳನ್ನು ಖರೀದಿಸಿದಾಗ, ಅವರ ಗುರುತು ಗೌಪ್ಯವಾಗಿ ಉಳಿಯುತ್ತದೆ, ರಾಜಕೀಯ ನಿಧಿಯ ಪ್ರಕ್ರಿಯೆಯು ಯಾವುದೇ ಸಂಭಾವ್ಯ ಪಕ್ಷಪಾತಗಳು ಅಥವಾ ಪ್ರಭಾವಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸುತ್ತದೆ. ಹಣಕಾಸು ಕಾಯಿದೆಯ ಮೂಲಕ ಭಾರತದಲ್ಲಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಯಿತು.

"ಜನತಾ ಪ್ರಾತಿನಿಧ್ಯ ಕಾಯಿದೆ, ೧೯೫೧ (೧೯೫೧ರ ೪೩) ಸೆಕ್ಷನ್ ೨೯ರ ಅಡಿಯಲ್ಲಿ ನೋಂದಾಯಿಸಲಾದ ರಾಜಕೀಯ ಪಕ್ಷಗಳು ಮತ್ತು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅಥವಾ ಶಾಸಕಾಂಗಕ್ಕೆ ಪಡೆದ ಮತಗಳಲ್ಲಿ ಶೇಕಡಾ ಒಂದಕ್ಕಿAತ ಕಡಿಮೆಯಿಲ್ಲದ ಮತಗಳನ್ನು ಪಡೆದುಕೊಂಡಿರುವ ಎಲ್ಲಾ ರಾಜಕೀಯ ಪಕ್ಷಗಳು ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹವಾಗಿರುತ್ತದೆ. ಈ ಬಾಂಡ್‌ಗಳು ಬಹು ಮೌಲ್ಯಗಳಲ್ಲಿ ಲಭ್ಯವಿದ್ದು, ಕನಿಷ್ಟ ೧,೦೦೦ ರೂ.ಗಳಿಂದ ೧ ಕೋಟಿ ರೂಪಾಯಿಗಳ ವರೆಗೂ ಇದೆ. ಇದು ಪ್ರಾಮಿಸರಿ ನೋಟ್‌ನಂತೆಯೇ ಇದೆ.

ಸರ್ಕಾರವು ಘೋಷಿಸಿದ ನಿರ್ದಿಷ್ಟ ಅವಧಿಗಳಲ್ಲಿ ಅಧಿಕೃತ ಬ್ಯಾಂಕ್‌ಗಳು ಗೊತ್ತುಪಡಿಸಿದ ಶಾಖೆಗಳಿಂದ ದಾನಿಗಳು ಈ ಬಾಂಡ್‌ಗಳನ್ನು ಖರೀದಿಸಲು ಸಾಧ್ಯವಿದ್ದರೂ ವರ್ಷವಿಡಿ ಖರೀದಿಸಲು ಅವಕಾಶವಿಲ್ಲ. ಬಾಂಡ್‌ಗಳು ವರ್ಷಕ್ಕೆ ನಾಲ್ಕು ಬಾರಿ ೧೦ ದಿನಗಳವರೆಗೆ ಖರೀದಿಗೆ ಲಭ್ಯವಿರುತ್ತವೆ, ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್‌ನಲ್ಲಿ ಮತ್ತು ಸಾರ್ವತ್ರಿಕ ಚುನಾವಣೆಯ ವರ್ಷಗಳಲ್ಲಿ ಹೆಚ್ಚುವರಿ ೩೦ ದಿನಗಳು ಮಾತ್ರ ಖರೀದಿಗೆ ಲಭ್ಯ.

ಚುನಾವಣಾ ಬಾಂಡ್‌ಗಳ ಬಗ್ಗೆ ಗಮನಿಸಬೇಕಾದ ಒಂದು ಪ್ರಮುಖ ಅಂಶವೆAದರೆ ಅವುಗಳ ಮುಕ್ತಾಯ ಅವಧಿ. ಈ ಬಾಂಡ್ ಗಳು ೧೫ ದಿನಗಳ ಮಾನ್ಯತೆಯನ್ನು ಹೊಂದಿರುತ್ತವೆ. ಅಷ್ಟರಲ್ಲಿ ಬ್ಯಾಂಕಿಗೆ ತೆರಳಿ ‘ಎನ್ ಕ್ಯಾಶ್' ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅದನ್ನು ಪ್ರಧಾನ ಮಂತ್ರಿಗಳ ರಾಷ್ಟಿçÃಯ ಪರಿಹಾರ ನಿಧಿಗೆ ಸೇರ್ಪಡೆ ಮಾಡಲಾಗುತ್ತದೆ.

ಆದರೆ ಈ ಬಾಂಡ್‌ಗಳ ಬಿಡುಗಡೆಯನ್ನು ಪ್ರಶಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದನ್ನು ಅಸಂವಿ ಧಾನಿಕ ಎಂದು ಪರಿಗಣಿಸಿದೆ. ಸುಪ್ರೀಂ ಆದೇಶದ ಅನ್ವಯ ಮಂಗಳ ವಾರ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಎಲ್ಲಾ ಮಾಹಿತಿಯನ್ನೂ ಚುನಾವಣಾ ಆಯೋಗಕ್ಕೆ ಸಂಜೆ ೫ ಗಂಟೆಗೆ ಸಲ್ಲಿಸಿದೆ. ಭಾರತೀಯ ಚುನಾವಣಾ ಆಯೋಗವು ಸಾರ್ವಜನಿಕರಿಗಾಗಿ ಮಾರ್ಚ್ ೧೫ ರ ಸಂಜೆ ೫ ಗಂಟೆ ಒಳಗೆ ತನ್ನ ವೆಬ್‌ಸೈಟ್‌ನಲ್ಲಿ ಎಲ್ಲಾ ಮಾಹಿತಿಯನ್ನೂ ಅಪ್‌ಲೋಡ್ ಮಾಡಲಿದೆ.

-ಕೋವರ್ ಕೊಲ್ಲಿ ಇಂದ್ರೇಶ್