ಶನಿವಾರಸಂತೆ : ರಸ್ತೆ ಕಾಮಗಾರಿಗೆ ಚಾಲನೆ

ಶನಿವಾರಸಂತೆ: ರೂ.೧೦ ಲಕ್ಷ ವೆಚ್ಚದಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆ ಮಾರುಕಟ್ಟೆ ರಸ್ತೆ ಡಾಂಬರೀಕರಣ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕಾಂಗ್ರೆಸ್ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ೫ ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ರೂ.೧೦ ಲಕ್ಷ ಅನುದಾನದಲ್ಲಿ ೩೫೦ ಮೀಟರ್ ಸಂತೆ ಮಾರುಕಟ್ಟೆ ರಸ್ತೆ ಅಭಿವೃದ್ಧಿ ಡಾಂಬರೀಕರಣ ಕಾಮಗಾರಿ ಕಳಪೆಯಾಗದೆ ಉತ್ತಮವಾಗಿ ನಡೆಯಬೇಕು ಎಂದು ಹೇಳಿದರು.

ಈ ಸಂದರ್ಭ ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷö್ಮಣ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೆ.ಎಲ್. ಜನಾರ್ಧನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಖಜಾಂಚಿ ಚೇತನ್, ಗ್ರಾ.ಪಂ. ಅಧ್ಯಕ್ಷೆ ಗೀತಾ ಹರೀಶ್, ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯರಾದ ಸರೋಜಾಶೇಖರ್, ಫರ್ಜಾನಾ ಶಾಹಿದ್, ಪಿಡಿಒ ಹರೀಶ್, ಎಂಜಿನಿಯರ್ ರಚಿತ್, ಪ್ರಮುಖರಾದ ಮಹಮ್ಮದ್ ಪಾಶ, ಎನ್.ಕೆ.ಅಪ್ಪಸ್ವಾಮಿ, ಶೇಷಗಿರಿ, ಅಕ್ಮಲ್, ಅಬ್ಬಾಸ್, ಉಸ್ಮಾನ್, ಮಂಜುನಾಥ್ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ವೀರಾಜಪೇಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆವೀರಾಜಪೇಟೆ : ವೀರಾಜಪೇಟೆ ಪಟ್ಟಣದ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾದ ರೂ. ೧೫ ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು.

ಪಾರ್ಕ್ ರಹಿತ ಪಟ್ಟಣ ಎಂಬ ಅಪಕೀರ್ತಿಗೆ ಒಳಗಾಗಿದ್ದ ವೀರಾಜಪೇಟೆ ಪಟ್ಟಣಕ್ಕೆ ರೂ. ೩.೧೬ ಕೋಟಿ ರೂಗಳ ಪಾರ್ಕ್ ನಿರ್ಮಾಣಕ್ಕೆ ತೆಲುಗರ ಬೀದಿಯ ಹತ್ತಿರ ನಿರ್ಮಾಣ ಮಾಡುವ ಉದ್ದೇಶ ದಿಂದ ಪಟ್ಟಣದ ಬಸವನ ಗುಡಿ ಬಳಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು ಕಾಮಗಾರಿಗಳು ಉತ್ತಮವಾಗಿ ನಡೆಯು ವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಸಹಕಾರ ನೀಡಬೇಕು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದರು.

ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಮಾಜಿ ಶಾಸಕ ಚೆಪ್ಪುಡೀರ ಅರುಣ್ ಮಾಚಯ್ಯ, ಮಾಜಿ ಎಂ.ಎಲ್.ಸಿ. ಶಾಂತೆಯAಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಪಟ್ಟಡ ರಂಜಿ ಪೂಣಚ್ಚ, ಪ್ರಮುಖರಾದ ನರೇಂದ್ರ ಕಾಮತ್, ತೆನ್ನಿರ ಮೈನಾ, ಕೆ.ಬಿ. ಶಾಂತಪ್ಪ, ಮಹಮದ್ ರಾಫಿ, ರಾಜೇಶ್ ಪದ್ಮನಾಭ, ಮಾದಂಡ ತಿಮ್ಮಯ್ಯ, ಪುರಸಭೆಯ ಮುಖ್ಯಾಧಿಕಾರಿ ಚಂದ್ರ ಕುಮಾರ್, ಇಂಜಿನಿಯರ್ ರಾಮಣ್ಣ ಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.ಮೆಟ್ಟಿಲು ನಿರ್ಮಾಣ - ದೇವಾಲಯ ಅಭಿವೃದ್ಧಿಗೆ ಶಂಕುಸ್ಥಾಪನೆವೀರಾಜಪೇಟೆ: ಗ್ರಾಮೀಣ ಮತ್ತು ನಗರಾಭಿವೃದ್ಧಿ ಇಲಾಖೆ ವತಿಯಿಂದ ಮಂಜೂರಾದ ರೂ. ೧೫.೫ ಕೋಟಿ ಅನುದಾನದ ಪೈಕಿ ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಅರಸುನಗರ ಬೆಟ್ಟಪ್ರದೇಶದಲ್ಲಿ ಮೆಟ್ಟಿಲು ನಿರ್ಮಾಣಕ್ಕೆ ರೂ. ೧.೭೨ ಕೋಟಿ ಹಾಗೂ ಅರಸುಗರ ಶ್ರೀಮುತ್ತಪ್ಪ ದೇವಸ್ಥಾನ ಅಭಿವೃದ್ಧಿಗೆ ವಿಶೇಷ ಅನುದಾನ ರೂ. ೩ ಲಕ್ಷ, ವೆಚ್ಚದ ಕಾಮಗಾರಿಗೆ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.

ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುವಂತೆ ಸಾರ್ವಜನಿಕರು ನೋಡಿಕೊಳ್ಳಬೇಕು ಎಂದು ಪೊನ್ನಣ್ಣ ಹೇಳಿದರು.

ಕಾಮಗಾರಿಗಳಿಗೆ ಭೂಮಿಪೂಜೆ ಸಂದರ್ಭ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ವಿಧಾನಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯAಡ ವೀಣಾ ಅಚ್ಚಯ್ಯ, ಚೆಪ್ಪುಡೀರ ಅರುಣ್ ಮಾಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪುರಸಭೆ ಮುಖ್ಯಾಧಿಕಾರಿ ಚಂದ್ರ ಕುಮಾರ್, ಅಭಿಯಂತರ ರಾಮಣಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರಾಧ್ಯಕ್ಷ ಮಾದಂಡ ತಿಮ್ಮಯ್ಯ, ವೀರಾಜಪೇಟೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಅಬ್ದುಲ್ ಸಲಾಂ, ಕಾಂಗ್ರೆಸ್‌ನ ಪ್ರಮುಖರಾದ ಗೋಪಾಲಕೃಷ್ಣ ಕಾಮತ್, ಕೆ.ಬಿ. ಶಾಂತಪ್ಪ, ಪುರಸಭೆ ಸದಸ್ಯರುಗಳಾದ, ಮತೀನ್, ರಾಜೇಶ್ ಪದ್ಮನಾಭ, ರಜನಿಕಾಂತ್, ಮತ್ತಿತರರು ಉಪಸ್ಥಿತರಿದ್ದರು.ಹಂಚಿನಹಳ್ಳಿ ಡಾಂಬರೀಕರಣಕ್ಕೆ ಚಾಲನೆ ಐಗೂರು: ರೂ. ೧೦ ಲಕ್ಷ ವೆಚ್ಚದಲ್ಲಿ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ. ಗ್ರಾಮದ ಹಂಚಿನಹಳ್ಳಿ ರಸ್ತೆಯ ಡಾಂಬರೀ ಕರಣ ಕಾರ್ಯಕ್ರಮಕ್ಕೆ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಮಂತರ್, ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಹಂತ ಹಂತವಾಗಿ ಪೂರ್ಣ ಗೊಳಿಸಲಾಗುವುದು. ಅಪೂರ್ಣವಾದ ರಸ್ತೆಗಳ ಕ್ರಿಯಾಯೋಜನೆಯನ್ನು ತಯಾರಿಸಲು ಸ್ಥಳದಲ್ಲಿದ್ದ ಅಭಿಯಂತರರಾದ ಶರತ್ ಅವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿ, ನಿವೇಶನ, ಮತ್ತು ವಿದ್ಯುತ್ ಕಂಬ ಅಳವಡಿಕೆಗೆ ಕೋರಿದರು.

ಹರದೂರು ಗ್ರಾ.ಪಂ. ಅಧ್ಯಕ್ಷೆ ಉಷಾ, ಉಪಾಧ್ಯಕ್ಷ ಸಲೀಂ ಹೊಸತೋಟ, ಸದಸ್ಯರಾದ ಬೋಜಮ್ಮ, ಕೆ.ಆರ್.ಐ.ಡಿ.ಎಲ್. ಅಭಿಯಂತರ ಶರತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಲಾರೆನ್ಸ್, ಬೆಳೆಗಾರರಾದ ಎಂ.ಟಿ. ವಿಜೇಂದ್ರ, ರೋಹಿತ್, ಚಿದಾನಂದ, ಬೋಪಯ್ಯ, ಚಂಗಪ್ಪ ಮತ್ತು ಗೌತಮ್ ಶಿವಪ್ಪ ಉಪಸ್ಥಿತರಿದ್ದರು.

ಯಡವಾರೆ-ಯಡವನಾಡು ರಸ್ತೆ ಅಭಿವೃದ್ಧಿಗೆ ಚಾಲನೆಐಗೂರು : ಶಾಸಕರ ಮಳೆ ಪರಿಹಾರ ನಿಧಿ ಅನುದಾನದಡಿ ರೂ. ೧೦ ಲಕ್ಷ ವೆಚ್ಚದಲ್ಲಿ ಯಡವಾರೆ ಗ್ರಾಮದಿಂದ ಯಡವನಾಡು ರಸ್ತೆಯನ್ನು ಸಂಪರ್ಕಿಸುವ ಸುಮಾರು ೫೦೦ ಮೀಟರ್ ಅಂತರದ ರಸ್ತೆ ಅಭಿವೃದ್ಧಿಗೆ ಶಾಸಕ ಮಂತರ್ ಗೌಡ ಚಾಲನೆ ನೀಡಿದರು.

ಗ್ರಾಮೀಣ ಭಾಗಗಳಲ್ಲಿ ರಸ್ತೆಗಳನ್ನು ದುರಸ್ತಿಗೊಳಿಸುವ ಸಂದರ್ಭದಲ್ಲಿ ಆ ಭಾಗದ ಜನರು ರಸ್ತೆಯ ಬದಿಗಳಲ್ಲಿರುವ ಮರಗಳನ್ನು ತೆರೆವುಗೊಳಿಸಿ ಇಲಾಖೆ ಜೊತೆ ಕೈಜೋಡಿಸಬೇಕೆಂದು ಇದೇ ಸಂದರ್ಭ ಶಾಸಕರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಗ್ರಾ.ಪಂ. ಅಧ್ಯಕ್ಷ ಜಿ.ಕೆ. ವಿನೋದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಅಭಿಯಂತರರಾದ ಶರತ್ ಗ್ರಾಂ.ಪA. ಸದಸ್ಯರಾದ ಪ್ರಮೋದ್ ರಾಜೇಶ್, ಪೂರ್ಣಿಮಾ, ಅಶೋಕ್ ,ಸಬಿತಾ ಚೆನ್ನಕೇಶವ, ಭರತ್, ಲಾರೆನ್ಸ್, ಕೃಷ್ಣಪ್ಪ, ಅಪ್ಪಚ್ಚು, ಮುತ್ತಪ್ಪ, ಹೊನ್ನಪ್ಪ, ಧರ್ಮಪ್ಪ, ಮತ್ತು ವಿಶ್ವನಾಥ ಅರಸು ಭಾಗವಹಿಸಿದ್ದರು. ಅಗತ್ಯವಾದಲ್ಲಿ ಬೈಪಾಸ್ ವ್ಯವಸ್ಥೆ - ಪೊನ್ನಣ್ಣವೀರಾಜಪೇಟೆ: ಪಟ್ಟಣದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಚಾಲನೆ ನೀಡಿದರು.

ಗ್ರಾಮೀಣ ಮತ್ತು ನಗರಾಭಿವೃಧ್ದಿ ಇಲಾಖೆ ವತಿಯಿಂದ ಮಂಜೂರಾದ ರೂ. ೧೫.೫೦ ಕೋಟಿಗಳ ಅನುದಾನದ ಪೈಕಿ ದೊಡ್ಡಟ್ಟಿ ಚೌಕಿಯಿಂದ ಕಾವೇರಿ ಕಾಲೇಜಿನವರಗೆ ಎರಡು ಬದಿ ಪುಟ್‌ಪಾತ್ ಅಭಿವೃದ್ದಿ ರಸ್ತೆಗಳಿಗೆ ಮಾರ್ಕಿಂಗ್, ಬೀದಿ ದೀಪ ಮತ್ತು ಇಂಟರ್‌ಲಾಕ್ ಕಾಮಗಾರಿಗೆ ರೂ. ೫.೭೪ ಕೋಟಿ ರೂಪಾಯಿಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ವೀರಾಜಪೇಟೆ ಪಟ್ಟಣದಲ್ಲಿ ಸ್ವಯಂಪ್ರೇರಿತವಾಗಿ ರಸ್ತೆ ಅಗಲೀಕರಣಕ್ಕೆ ಸಹಕರಿಸಬೇಕು. ಅನಿವಾರ್ಯ ವಾದರೆ ಖಾಸಗಿ ಬಸ್ ನಿಲ್ದಾಣದಿಂದ ಮೂರ್ನಾಡು ರಸ್ತೆಯವರಗೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಅಗಲೀಕರಣಕ್ಕೆ ಪ್ರತಿಯೊಬ್ಬರೂ ಸಹಕರಿಸಿದರೆ ಎಲ್ಲರಿಗೂ ಅನೂಕೂಲವಾಗಲಿದೆ ಎಂದು ಎ.ಎಸ್. ಪೊನ್ನಣ್ಣ ಹೇಳಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯAಡ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ರಾಮಣ್ಣ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ನಗರಾಧ್ಯಕ್ಷ ಮಾದಂಡ ತಿಮ್ಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವೀರಾಜಪೇಟೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಅಬ್ದುಲ್ ಸಲಾಂ, ಹಿರಿಯ ಕಾಂಗ್ರೆಸ್ ಪ್ರಮುಖ ಗೋಪಾಲಕೃಷ್ಣ ಕಾಮತ್, ಕೆ.ಬಿ ಶಾಂತಪ್ಪ, ಪುರಸಭೆ ಸದಸ್ಯ ಮತೀನ್, ಮತ್ತಿತರರು ಉಪಸ್ಥಿತರಿದ್ದರು.

ರೂ. ೪೦ ಲಕ್ಷ ಕಾಮಗಾರಿಗೆ ಶಿಲಾನ್ಯಾಸಗೋಣಿಕೊಪ್ಪಲು: ಕ್ಷೇತ್ರದ ಪ್ರತಿ ಪಂಚಾಯಿತಿಯ ಅಭಿವೃದ್ದಿಗಾಗಿ ಸರ್ಕಾರದ ವತಿಯಿಂದ ಮೊದಲ ಹಂತದಲ್ಲಿ ಅನುದಾನವನ್ನು ಒದಗಿಸಿದ್ದೇನೆ. ಮುಂದೆ ಹಂತಹAತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ದೇವಸ್ಥಾನ ಹಾಗೂ ಆಟದ ಮೈದಾನದ ಅಭಿವೃದ್ದಿಗೆ ರೂ. ೪೦ ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದು ಈ ಕಾಮಗಾರಿಗಳಿಗೆ ಶಾಸಕ ಪೊನ್ನಣ್ಣ ಭೂಮಿ ಪೂಜೆ ನೇರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖ್ಯಸ್ಥರಾದ ಬೊಳ್ಳಂಡ ಗಿರೀಶ್, ಬಲ್ಯಾಟಂಡ ಕುಟ್ಟಯ್ಯ ನಾಯಕಂಡ ಕುಂಞÂಣ್ಣ, ಕಾದಿರ ಉಮೇಶ್, ಬೊಳಕಾರಂಡ ಕುಟುಂಬಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಊರಿನ ಪ್ರಮುಖರು ಹಾಜರಿದ್ದರು.

ಬೇಂಗೂರಿನಲ್ಲಿ ಭೂಮಿಪೂಜೆಕಡಂಗ: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬೇಂಗೂರು ಗ್ರಾಮದ ಶೀ ಕಡಪಾಲಪ್ಪ ದೇವಾಸ್ಥಾನ ಸನ್ನಿಧಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು. ಸುಮಾರು ೯೦ ಲಕ್ಷ ವೆಚ್ಚದ ಕಾಮಗಾ ರಿಗೆ ಚಾಲನೆ ನೀಡಿ ಕಡಪಾಲಪ್ಪ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ನಾಪೋಕ್ಲು ವಲಯ ಅಧ್ಯಕ್ಷ ಕುಂಚೆಟ್ಟಿರ ರಮೇಶ, ಪಂಚಾಯಿತಿ ಅಧ್ಯಕ್ಷೆ ಪಟ್ಟಮಾಡ ಮಿಲನ್ ಮುತ್ತಣ್ಣ, ಸದ್ಯರುಗಳಾದ ಬಷೀರ್, ಬಡ್ಡಿರ ಸೋಮಣ್ಣ ಸೇರಿದಂತೆ ಇನ್ನಿತರರಿದ್ದರು. ರೂ.೯.೨೬ ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆಮಡಿಕೇರಿ : ಪಾರಾಣೆ, ಬೆಟ್ಟಗೇರಿ, ಬೇಂಗೂರು ಚೇರಂಬಾಣೆ, ಚೆಟ್ಟಿಮಾನಿ ಕುಂದಚೇರಿ, ಭಾಗಮಂಡಲ, ಅಯ್ಯಂಗೇರಿ, ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರೂ.೯.೨೬ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಅಭಿವೃದ್ದಿಯಲ್ಲಿ ಹಿಂದುಳಿದಿರುವ ವೀರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಪಡಿಸಿ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟçದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪ ತೊಟ್ಟಿದ್ದೇನೆ ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿದರು.

ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಉಮೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷÀ ತೆನ್ನಿರ ಮೈನಾ, ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್, ವಲಯ ಕಾಂಗ್ರೆಸ್ ಅಧ್ಯಕ್ಷರುಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು, ಡಿಸಿಸಿ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಭಾಗಿಯಾಗಿದ್ದರು.