*ಸಿದ್ದಾಪುರ, ಮಾ. ೧೨: ನಂಜರಾಯಪಟ್ಟಣ ಗ್ರಾ.ಪಂ ವ್ಯಾಪ್ತಿಯ ದುಬಾರೆ ಕಾವೇರಿ ನದಿಯಲ್ಲಿ ಗಣಪತಿಯ ಕಲ್ಲಿನ ಮೂರ್ತಿ ಪತ್ತೆಯಾಗಿದೆ. ರ‍್ಯಾಫ್ಟಿಂಗ್ ಗೈಡ್‌ಗಳಿಗೆ ಈ ಮೂರ್ತಿ ದೊರೆತಿದ್ದು, ಮಳೆಗಾಲದ ಸಂದರ್ಭ ನೀರಿನಲ್ಲಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ನದಿಯಲ್ಲಿ ನೀರಿನ ಮಟ್ಟ ಕುಸಿದಿರು ವುದರಿಂದ ಮೂರ್ತಿ ಪತ್ತೆಯಾಗಿದೆ. ಮುಕ್ಕಾಲು ಅಡಿ ಎತ್ತರದ ಮೂರ್ತಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ, ಸದ್ಯಕ್ಕೆ ರ‍್ಯಾಫ್ಟಿಂಗ್ ಕಚೇರಿಯಲ್ಲಿಟ್ಟು ಪೂಜಿಸಲಾಗುತ್ತಿದೆ. ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷ ಸಿ.ಎಲ್.ವಿಶ್ವ, ಸದಸ್ಯ ಮಾವೋಜಿ ರಕ್ಷಿತ್ ಹಾಗೂ ಗ್ರಾಮಸ್ಥ ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.