ಮಡಿಕೇರಿ, ಮಾ. ೧೨: ಕರಡ ಗ್ರಾಮದ ಬೆಟ್ಟ ಸಾಲು ಗಳ ನಡುವೆ ನೆಲೆಸಿದ ಶಕ್ತಿದೇವ ನೆಲೆಯಾದ ಮಲೆತಿರಿಕೆ ದೇವಾಲಯದಲ್ಲಿನ ಮಲೆತಂಬುರಾನ್ ಈಶ್ವರ ದೇವಾಲಯದÀ ವಾರ್ಷಿಕೋತ್ಸವವು ತಾ. ೧೪ರಂದು ಸಂಪ್ರದಾಯ ಬದ್ಧವಾಗಿ ನಡೆಸಲು ಸಿದ್ಧತೆ ನಡೆಯುತ್ತಿದೆ.

ತಾ.೧೩ರಂದು ಕಕ್ಕಬೆ ತೋರಾದ ಕುಡಿಯ ಜನಾಂಗ ಸಿದ್ಧಪಡಿಸಿದ ನೆಟ್ಟಿಪಾಯನ್ನು ದೇವನೆಲೆಯ ಎದುರು ಚಪ್ಪರ ಹಾಕುವರು. ಮಲೆತಿರಿಕೆ ಶಾಸ್ತಾವು, ಮಲೆತಂಬ್‌ರಾನ್ ಜೊತೆಗೆ ಬೆಟ್ಟಸಾಲುಗಳಲ್ಲಿರುವ ತುಂಬೆ ಹೂವಿನ ಪ್ರಿಯವಾದರಿಂದ ತುಂಬೆಮಲೆ ದೇವಯ್ಯನೆಂದು ಕರೆಯುತ್ತಾರೆ. ಈ ವಿಶೇಷನೆಲೆಯಲ್ಲಿ ಒಂದು ರಾತ್ರಿಯೊಳಗೆ ದೇವಾಲಯನಿರ್ಮಾಣ ಮಾಡಬೇಕೆಂಬ ನಿಯಮವಾದ್ದರಿಂದ ಅಂದಿನಿAದ ಇಂದಿನವರೆಗೂ ದೇವಾಲಯ ನಿರ್ಮಾಣವಾಗಿಲ್ಲ. ಈ ಬಾರಿ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.

ತಾ. ೧೪ರ ಬೆಳಗಿನ ಜಾವ ಪಟ್ರಪಂಡ ಕುಟುಂಬದಿAದ ಜೋಡೆತ್ತು ಪೋರಾಟವನ್ನು ದೇವಾಲಯಕ್ಕೆ ಒಪ್ಪಿಸಿದ ನಂತರ ನಾಡಿನವರು ಎತ್ತು ಪೋರಾಟವನ್ನು ದೇವರಿಗೆ ಅರ್ಪಿಸುವರು. ದೇವಾಲಯದ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ದುಡಿಕೊಟ್ಟು ಹಾಡಿ ಮೇದರ ಪರೆಯೊಂದಿಗೆ ಕರಡದ ಭಗವತಿ ದೇವಾಲಯದಿಂದ ದೇವರ ಭಂಡಾರವನ್ನು ತಂದು ದೇವರ ಸನ್ನಿಧಿಗೆ ಒಪ್ಪಿಸುವರು. ಇಲ್ಲಿನ ಸಂಪ್ರದಾಯದAತೆ ವಾರ್ಷಿಕೋತ್ಸವದ ಮುಂಚಿತವಾಗಿ ತಂದAತಹ ಮಣ್ಣಿನ ಕುಯ್ಯಮಡಿಕೆಯನ್ನು ಉತ್ಸವದ ಬೆಳಗಿನ ಜಾವ ಆ ಊರಿನ ತೆರಿಗೆಯವರು ಮಡಕೆಯಲ್ಲಿ ದೇವಾಲಯದ ಸಮೀಪ ಕುಯ್ಯಕ್ಕಿಕೂಳ್ (ಅನ್ನ), ಚೆಕ್ಕೆ ಪಾರ (ಹಲಸಿನ ಹಣ್ಣಿನ ಉಪ್ಪಿನಕಾಯಿ), ಚಪ್ಪೆಪುಟ್ಟ್ ಮಾಡಿ ದೇವರ ಸನ್ನಿಧಿಯಲ್ಲಿ ಅರ್ಪಿಸಿದ ನಂತರವೇ ಉತ್ಸವಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ನೀಡುವ ಸಂಪ್ರದಾಯ ಇಲ್ಲಿನ ವಿಶೇಷವಾಗಿದೆ. ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ದೇವಾಲಯದ ಸಮೀಪ ಅಡುಗೆಮಾಡಿ ಬೋಜನ ಮಾಡುತ್ತಿದ್ದ ಬಗ್ಗೆ ಪ್ರತೀತಿ ಇದೆ.

ಊರಿನ ಹಿರಿಯರು ದೇವರ ಸನ್ನಿಧಿಯಲ್ಲಿ ದುಡಿಕೊಟ್ಟು ಹಾಡನ್ನು ಹಾಡುವಮೂಲಕ ದೇವರನ್ನು ಕೊಂಡಾಡುವರು. ಮಧ್ಯಾಹ್ನ ೧೨ ಗಂಟೆಗೆ ವಿಶೇಷ ಅಲಂಕೃತ ದೇವನೆಲೆಯಲ್ಲಿೆ ವಿಶೇಷ ಮಹಾಪೂಜೆ ಸಲ್ಲಿಸುವರು. ಆಸಂದರ್ಭದಲ್ಲಿ ಹಲವರಿಗೆ ದೇವರು ಮೈಯಿಗೆ ಬರುವ ಮೂಲಕ ಅನುವಾದ ನೀಡುವರು. ನೆರೆದಿದ್ದ ಸಾವಿರಾರು ಭಕ್ತರು ಹರಕೆ ಭಂಡಾರವನ್ನು ಒಪ್ಪಿಸಿ ತೀರ್ಥಪ್ರಸಾದ ಪಾಯಸವನ್ನು ಪಡೆವರು. ಸಂಜೆ ಭಂಡಾರದ ಲೆಕ್ಕಾಚಾರ ಮುಗಿದ ನಂತರ ದೇವ ಭಂಡಾರವನ್ನು ಕರಡ ಭಗವತಿ ನೆಲೆಯಲ್ಲಿ ಒಪ್ಪಿಸುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಗುವುದು.

-ಪುತ್ತರಿರ ಕರುಣ್ ಕಾಳಯ್ಯ