ಮಡಿಕೇರಿ, ಮಾ. ೧೦: ನಿಸ್ವಾರ್ಥದ ನೆಲೆವೀಡಾಗಿ ಹೆಸರಾಗಿದ್ದ ಭಾರತದಲ್ಲಿ ಇತ್ತೀಚಿಗೆ ಸ್ವಾರ್ಥ ಪರತೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ವಾರ್ಥ ಮನೋಭಾವನೆ ದೂರಮಾಡಿ ನಗು ಮುಖದೊಂದಿಗೆ ಸೇವೆಗೆ ಮುಂದಾಗುವAತೆ ವಿದ್ವಾಂಸ ಶಿವಮೊಗ್ಗದ ಜಿ.ಎಸ್. ನಟೇಶ್ ಹೇಳಿದರು.

ಮಡಿಕೇರಿ ಬಳಿಯ ಕಗ್ಗೋಡ್ಲು ಗ್ರಾಮದ ಕೂರ್ಗ್ ಅಂಬರ ರೆಸಾರ್ಟ್ನಲ್ಲಿ ಆಯೋಜಿತ ಲಯನ್ಸ್ ಸಂಸ್ಥೆಯ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೇವೆ ಮಾಡುವವರು ಮನಸ್ಸಿನಾಳದಿಂದ ಸಮಧಾನಚಿತ್ತರಾಗಿ ಇತರರಿಗೆ ಉಪಕಾರ ಮಾಡಲು ಮುಂದಾಗಬೇಕೆAದು ಅಭಿಪ್ರಾಯಪಟ್ಟರು.

ಲಯನ್ಸ್ ಸಂಸ್ಥೆಯ ಮಾಜಿ ಗವರ್ನರ್ ಜಿ. ಶ್ರೀನಿವಾಸ್ ಮಾತನಾಡಿ, ಭಾರತೀಯರು ಸೇವಾಮನೋಭಾವನೆಯನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುಹೆಚ್ಚಾಗಿ ಬೆಳೆಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಭಾರತೀಯರ ಸೇವಾ ಗುಣ ಪ್ರಶಂಸೆಗೆ ಪಾತ್ರವಾಗುತ್ತಿದೆ ಎಂದರು.

ಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ಮಡಿಕೇರಿಯ ಲಯನ್ಸ್ ಸಂಸ್ಥೆಗೆ ೫೯ ವರ್ಷಗಳ ಇತಿಹಾಸವಿದ್ದು, ಲಯನ್ಸ್ ವಲಯದಲ್ಲಿ ೧೪ ಕ್ಲಬ್‌ಗಳ ಮೂಲಕ ೫೦೭ ಸದಸ್ಯರಿದ್ದಾರೆ. ಕೊಡಗು ಜಿಲ್ಲೆ ಲಯನ್ಸ್ ಸಂಸ್ಥೆಗೆ ಮೂರು ಗವರ್ನರ್‌ಗಳನ್ನು ನೀಡಿದೆ ಎಂದು ಮಾಹಿತಿ ನೀಡಿದರು.

ಲಯನ್ಸ್ ವಲಯದ ಪ್ರಥಮ ಮಹಿಳೆ ಪ್ರಿಯಾ ನವೀನ್ ಸಮಾವೇಶ ಉದ್ಘಾಟಿಸಿದರು. ಲಯನ್ಸ್ ಸಂಸ್ಥೆಯ ಗವರ್ನರ್ ಮೆಲ್ವಿನ್ ಡಿಸೋಜ, ಮಡಿಕೇರಿ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ನಟರಾಜ್ ಕೆಸ್ತೂರ್, ಖಜಾಂಜಿ ಎನ್.ಬಿ. ರವಿ, ಸಮ್ಮೇಳನ ಸಮಿತಿ ಖಜಾಂಚಿ ಕೆ.ಎ. ಬೊಳ್ಳಪ್ಪ ಸೇರಿದಂತೆ ಲಯನ್ಸ್ ಸಂಸ್ಥೆಯ ವಿವಿಧ ಪದಾಧಿಕಾರಿಗಳು, ವಲಯ ಮುಖಂಡರು ವೇದಿಕೆಯಲ್ಲಿದ್ದರು.

ಇದೇ ಸಂದರ್ಭ ಮಡಿಕೇರಿಯ ಹಿರಿಯ ವೈದ್ಯ ಡಾ. ಎಂ.ಜಿ. ಪಾಟ್ಕರ್, ಬಾಲಾಜಿ ಕಶ್ಯಪ್, ಪೊಲೀಸ್ ಸಿಬ್ಬಂದಿ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನ ಸಮಿತಿ ಅಧ್ಯಕ್ಷ ಎಂ.ಎ. ನಿರಂಜನ್ ಸ್ವಾಗತಿಸಿ, ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಧುಕರ್ ಶೇಠ್ ವಂದಿಸಿದರು. ಕೆ.ಮಧುಕರ್, ಮಾಧುರ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಡಿಕೇರಿ ಲಯನ್ಸ್ ಸಂಸ್ಥೆಯ ಮಹಿಳೆಯರು ಸ್ವಾಗತ ಗೀತೆ ಹಾಡಿದರು.