ಸುಂಟಿಕೊಪ್ಪ, ಮಾ. ೧೧: ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಮತ್ತು ಸುಂಟಿಕೊಪ್ಪ ಕೊಡವ ಕೂಟದ ಲೋಪಮುದ್ರೆ ಪೊಮ್ಮಕ್ಕಡ ಸಂಘದ ಸಂಯು ಕ್ತಾಶ್ರಯದಲ್ಲಿ ಅಂರ್ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಸುಂಟಿಕೊಪ್ಪ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಹಿರಿಯ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರು ಉದ್ಘಾಟಿ ಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಸಮಾಜದ ಅಧ್ಯಕ್ಷ ಚೇಂದ್ರಿಮಾಡ ಡಾಲಿ ಕರುಂಬಯ್ಯ ಮತ್ತು ಲೋಪಮುದ್ರ ಪೊಮ್ಮಕ್ಕಡ ಸಂಘದ ಮಾಜಿ ಅಧ್ಯಕ್ಷೆ ಬೊಳಂದAಡ ಸರೋಜಿನಿ ದೇವಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯ ಕ್ರಮದ ಕುರಿತು ವಿಚಾರ ಮಂಡನೆ, ಉಮ್ಮತಾಟ್, ಹಾಸ್ಯಮಂಜರಿ, ವಾಲಗತ್ತಾಟ್ ಪೈಪೋಟಿ ಸೇರಿದಂತೆ ವಿವಿಧ ಮನೋರಂಜನ ಕಾರ್ಯ ಕ್ರಮಗಳು ನಡೆದವು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.