ಸಿದ್ದಾಪುರ, ಮಾ. ೧೧: ನೆಲ್ಲಿಹುದಿ ಕೇರಿ ಶ್ರೀ ಸತ್ಯನಾರಾಯಣ ದೇವಾಲ ಯಕ್ಕೆ ಸೇರಿದ ಜಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾಫಿ ಗಿಡಗಳು ಹಾಗೂ ಕರಿಮೆಣಸು ಬಳ್ಳಿಗಳು ಹಾನಿಯಾ ಗಿರುವ ಘಟನೆ ನಡೆದಿದೆ.
ಸೋಮವಾರ ಮಧ್ಯಾಹ್ನ ವೇಳೆ ಶ್ರೀ ಸತ್ಯನಾರಾಯಣ ದೇವಾಲಯದ ಪೋದಮ್ಮ ಗುಡಿಯ ಬಳಿ ಇರುವ ಜಾಗದಲ್ಲಿ ಬೆಂಕಿ ಹಬ್ಬಿದ ಕೂಡಲೇ ವಿಚಾರ ತಿಳಿದು ದೇವಾಲಯದ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ನಂತರ ಬೆಂಕಿಯನ್ನು ನಂದಿಸಿದರು. ಬೆಂಕಿ ವ್ಯಾಪಿಸಿ ದೇವಾಲಯ ಜಾಗದ ಸಮೀ ಪದ ಮನು ಎಂಬವರ ಕಾಫಿ ತೋಟ ದಲ್ಲಿದ್ದ ಕರಿಮೆಣಸು ಬಳ್ಳಿಗಳು ಬೆಂಕಿ ಯಿಂದ ಸುಟ್ಟು ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶ್ರೀ ಸತ್ಯನಾರಾ ಯಣ ದೇವಾಲಯದ ಅಧ್ಯಕ್ಷರಾದ ಟಿ.ಜಿ. ಚಂದ್ರಶೇಖರ್ ಹಾಗೂ ಪದಾಧಿಕಾರಿಗಳು ಹಾಜರಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.