ಮಡಿಕೇರಿ, ಮಾ. ೧೧: ಮಂಜಿನ ನಗರಿ ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ನಗರಸಭೆ ವತಿಯಿಂದ ರೂ.೧೫.೫೦೦ ಲಕ್ಷಕ್ಕೆ ವಾಹನ ನಿಲುಗಡೆ ಶುಲ್ಕ ವಸೂಲಾತಿಗೆ ಗುತ್ತಿಗೆ ನೀಡಲಾಗಿದೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ರಾಜಾಸೀಟ್ ಬಳಿ ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ಸಲುವಾಗಿ ಗುತ್ತಿಗೆದಾರರಿಂದ ಟೆಂಡರ್ ಆಹ್ವಾನಿಸಲಾಗಿ ಈ ಬಾರಿ ಮಡಿಕೇರಿಯ ಶೇಷಪ್ಪ ಅವರಿಗೆ ಟೆಂಡರ್ ಮಂಜೂರಾಗಿದೆ. ಕೇವಲ ರೂ.೧೫.೫೦೦ಲಕ್ಷಕ್ಕೆ ಶೇಷಪ್ಪ ಅವರಿಗೆ ಈ ಗುತ್ತಿಗೆ ಲಭಿಸಿದೆ. ಈ ಹಿಂದೆ ೨೦೧೬-೧೭ನೇ ಸಾಲಿನಲ್ಲಿ, ಅಂದರೆ ಐದು ವರ್ಷಗಳ ಹಿಂದೆಯೇ ರೂ.೨೫ಲಕ್ಷಕ್ಕೆ ಗುತ್ತಿಗೆಗೆ ನೀಡಲಾಗಿತ್ತು. ಇದೀಗ ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದರೂ ಗುತ್ತಿಗೆಯ ಮೊತ್ತ ಕಡಿಮೆಯಾಗಿದ್ದು, ನಗರಸಭೆಯ ಆದಾಯವೂ ಕಡಿಮೆಯಾದಂತಾಗಿದೆ.
ಎಲ್ಲೆಲ್ಲಿ ಪಾರ್ಕಿಂಗ್..?
ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು ರಾಜಾಸೀಟ್ ಉದ್ಯಾನವನ ಬಳಿಯಿಂದ ಶ್ರೀ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದವರೆಗೆ, ಇತ್ತ ಗಾಂಧಿ ಮೈದಾನದಲ್ಲಿರುವ ರಂಗಮAಟಪದ ಹಿಂದಿರುವ ಪುಟಾಣಿ ರೈಲು ಉದ್ಯಾನವನದ ಬೇಲಿಯವರೆಗೆ ನಿಲುಗಡೆಗೊಳ್ಳುವ ವಾಹನಗಳಿಂದ ಮಾತ್ರ ಶುಲ್ಕ ಸಂಗ್ರಹಿಸಬೇಕಿದೆ. ಅದೂ ಕೂಡ ರಸ್ತೆಯ ಒಂದು ಬದಿ ನಿಲುಗಡೆಗೊಳ್ಳುವ ವಾಹನಗಳಿಗೆ. ಕುಂದುರುಮೊಟ್ಟೆ ದೇವಾಲಯದ ನಂತರ ಆಕಾಶವಾಣಿ ರಸ್ತೆ, ಕೆಳಭಾಗದಲ್ಲಿರುವ ರಸ್ತೆಗಳ ಬದಿ ನಿಲ್ಲಿಸುವ ವಾಹನಗಳಿಂದ ಶುಲ್ಕ ಸಂಗ್ರಹಿಸುವAತಿಲ್ಲ. ಇತ್ತ ರಂಗಮAದಿರದಿAದ ಗಾಂಧಿ ಮಂಟಪವರೆಗೆ ನಿಲುಗಡೆಗೊಳ್ಳುವ ವಾಹನಗಳಿಂದ ಸಂಗ್ರಹಿಸುವAತಿಲ್ಲ.
ಮರು ಟೆಂಡರ್ಗೆ ಕ್ರಮ
ಇನ್ನುಳಿದಂತೆ ತೀರಾ ಕಿಷ್ಕಿಂಧೆಯಿAದ ಕೂಡಿರುವ ಹಳೆ ಖಾಸಗಿ ಬಸ್ ನಿಲ್ದಾಣದಿಂದ ಇಂದಿರಾಗಾAಧಿ ವೃತ್ತದವರೆಗಿನ ರಸ್ತೆ, ಕಾಲೇಜು ರಸ್ತೆ ಹಾಗೂ ಅಂಚೆ ಕಚೇರಿ ಎದುರು, ನಗರಸಭೆ ಕಚೇರಿ ಎದುರಿನ ರಸ್ತೆಗಳಲ್ಲಿ ನಿಲುಗಡೆಗೊಳ್ಳುವ ವಾಹನಗಳಿಗೆ ಶುಲ್ಕ ವಿಧಿಸುವ ಸಂಬAಧ ಈ ವರೆಗೆ ಆರು ಬಾರಿ ಟೆಂಡರ್ ಕರೆಯಲಾಗಿದ್ದರೂ ಈವರೆಗೆ ಯಾರೂ ಭಾಗವಹಿಸದ ಕಾರಣ ಮರು ಟೆಂಡರ್ ಆಹ್ವಾನಿಸಲು ನಗರಸಭೆ ತೀರ್ಮಾನಿಸಿದೆ.
ಒಪ್ಪಿಗೆ ಮೇರೆಗೆ ಗುತ್ತಿಗೆ
ರಾಜಾಸೀಟ್ ಬಳಿ ವಾಹನ ನಿಲುಗಡೆಗೆ ಶುಲ್ಕ ಸಂಗ್ರಹಿಸುವ ಸಂಬAಧ ಆರು ಬಾರಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಯಾರೂ ಭಾಗವಹಿಸಿರಲಿಲ್ಲ. ಇದೀಗ ಆರನೇ ಬಾರಿಗೆ ಬಂದ ಸಿಂಗಲ್ ಟೆಂಡರ್ ಅನ್ನು ಜಿಲ್ಲಾಧಿಕಾರಿಗಳ ಅನುಮತಿಗೆ ಕಳುಹಿಸಿದ ಮೇರೆಗೆ ಜಿಲ್ಲಾಧಿಕಾರಿಗಳು ನಗರಸಭೆ ಆಡಳಿತ ಮಂಡಳಿ ಸಭೆಯಲ್ಲಿ ಅನುಮತಿ ಪಡೆದು ಅಂಗೀಕರಿಸುವAತೆ ಸೂಚಿಸಿದ್ದರು. ಅದರಂತೆ ನಗರಸಭೆ ಆಡಳಿತ ಮಂಡಳಿ ಸಭೆ ನಡೆಸಿ ಒಪ್ಪಿಗೆ ಪಡೆದು ಅಂಗೀಕರಿಸಿ ಶೇಷಪ್ಪ ಅವರಿಗೆ ರೂ. ೧೫.೫೦೦ ಲಕ್ಷಕ್ಕೆ ಗುತ್ತಿಗೆ ನೀಡಲಾಗಿದೆ.
-ಅನಿತಾ ಪೂವಯ್ಯ, ಅಧ್ಯಕ್ಷರು, ನಗರಸಭೆ.
ಗಾಂಧಿ ಮೈದಾನದಲ್ಲಿ ಇಲ್ಲ
ರಾಜಾಸೀಟ್ ಬಳಿಯ ರಸ್ತೆ ಬದಿಯಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶವಿದೆ. ಆದರೆ, ಪಕ್ಕದಲ್ಲಿಯೇ ಇರುವ ಗಾಂಧಿ ಮೈದಾನದಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ. ಒಂದು ವೇಳೆ ನಿಲುಗಡೆ ಮಾಡಿದಲ್ಲಿ ದಂಡ ವಿಧಿಸಲು ನಗರಸಭೆ ತೀರ್ಮಾನಿಸಿದೆ.