ಮಡಿಕೇರಿ, ಮಾ. ೧೧: ಪ್ರತಿಷ್ಠಿತ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆ ಪ್ರಕ್ರಿಯೆಗಳು ಬಿರುಸು ಪಡೆದುಕೊಂಡಿದ್ದು, ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯದಿದ್ದರು. ರಾಜಕೀಯ ಪಕ್ಷಗಳ ಬೆಂಬಲಿತರು ಸ್ಪರ್ಧಿಸುವುದರಿಂದ ಸಹಜವಾಗಿ ಅತ್ಯಂತ ಕೌತುಕವನ್ನು ಈ ಚುನಾವಣೆ ಮೂಡಿಸಿದೆ.

೧೦೨ ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್‌ನ ಮುಂದಿನ ಆಡಳಿತ ಮಂಡಳಿ ಚುನಾವಣೆ ತಾ. ೧೭ ರಂದು ನಡೆಯಲಿದ್ದು, ಅಂತಿಮವಾಗಿ ೨೫ ಮಂದಿ ಕಣದಲ್ಲಿದ್ದಾರೆ. ಇಂದು ಐವರು ತಮ್ಮ ಉಮೇದುವಾರಿಕೆ ವಾಪಸ್ಸು ತೆಗೆದುಕೊಳ್ಳುವ ಮೂಲಕ ಕಣದಿಂದ ಹಿಂದೆ ಸರಿದಿದ್ದಾರೆ.

ಚುನಾವಣಾ ಕಣದಲ್ಲಿ ಯರ‍್ಯಾರು?

ಮಡಿಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಎಂ. ತಮ್ಮಯ್ಯ, ಕೆ.ಎಸ್. ಪೂವಯ್ಯ, ಎನ್.ಎ. ಬಸಪ್ಪ, ಸತೀಶ್ ಕಾಂಗೀರ, ಹೊಸೂರು ಸತೀಶ್, ವೀರಾಜಪೇಟೆ ತಾಲೂಕು ಕ್ಷೇತ್ರದಿಂದ ಕೆ.ಬಿ. ಅರುಣ, ಚಿಮ್ಮಣಮಾಡ ಎಸ್. ಗಣಪತಿ, ಪಟ್ರಪಂಡ ಬಿ. ನಾಣಯ್ಯ, ಪೂಳಂಡ ಪೆಮ್ಮಯ್ಯ, ಹೆಚ್.ಎಂ. ರಮೇಶ್, ಸೋಮವಾರಪೇಟೆ ತಾಲೂಕಿನಿಂದ ಎನ್.ಎಂ. ಉತ್ತಪ್ಪ, ಕೆ.ಎಸ್. ದಿನೇಶ್, ಹೆಚ್.ಕೆ. ಮಾದಪ್ಪ, ಎಸ್.ಸಿ.ಶರತ್ ಶೇಖರ್, ಹೆಚ್.ಆರ್. ಸುರೇಶ್, ಕೆ.ಕೆ. ಹೇಮಂತ್ ಕುಮಾರ್ ಕಣದಲ್ಲಿದ್ದಾರೆ.

ಪಟ್ಟಣ ಸಹಕಾರ ಬ್ಯಾಂಕ್ ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಕನ್ನಂಡ ಎ ಸಂಪತ್, ನೆಲ್ಲಮಕ್ಕಡ ಪಿ. ಮುತ್ತಣ್ಣ, ಟಿ.ಆರ್. ಶರವಣ ಕುಮಾರ್, ಮಹಿಳಾ ಸಹಕಾರ ಕ್ಷೇತ್ರಗಳಿಗೆ ಕೆ.ಕೆ. ಚಂದ್ರಿಕಾ, ವೈ.ಪಿ. ಜಲಜಾಕ್ಷಿ, ಲೀಲಾ ಮೇದಪ್ಪ, ಸುಮ ಸುದೀಪ್ ನಡುವೆ ಸ್ಪರ್ಧೆ ಇದೆ. ಪ್ರಾಥಮಿಕ ಪತ್ತಿನ ವ್ಯವಸಾಯ ಸಂಘ, ಧವಸ ಭಂಡಾರ, ಪಟ್ಟಣ ಬ್ಯಾಂಕ್, ಕೃಷಿಯೇತ್ತರ ಪತ್ತಿನ ಸಹಕಾರ ಸಂಘ, ಮಹಿಳಾ ಸಹಕಾರ ಸಂಘ ಹೊರತುಪಡಿಸಿ ಇತರ ಸಹಕಾರ ಸಂಘಗಳ ಕ್ಷೇತ್ರಕ್ಕೆ ಹಾಲಿ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹಾಗೂ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿಗೆ ಸ್ವಪಕ್ಷೀಯರೇ ರೆಬಲ್

ಸೋಮವಾರಪೇಟೆ ಕ್ಷೇತ್ರದಿಂದ ಮಾತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ಬಯಸಿದ್ದಾರೆ. ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧಿಸಿರುವ ಬಿಜೆಪಿ ಬೆಂಬಲಿತರಿಗೆ ಸ್ವಪಕ್ಷೀಯರೇ ಎದುರಾಳಿಯಾಗಿದ್ದಾರೆ. ಜಿಲ್ಲೆಯ ಬಹುತೇಕ ಸಹಕಾರ ಸಂಘಗಳಲ್ಲಿ ಬಿಜೆಪಿ ಬೆಂಬಲಿತರು ಸ್ಪಷ್ಟಬಹುಮತ ಇರುವ ಹಿನ್ನೆಲೆ ಸೋಮವಾರಪೇಟೆ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳ ಬೆಂಬಲಿತರು ಸ್ಪರ್ಧೆ ಮಾಡುತ್ತಿಲ್ಲ ಎಂಬುದು ಗೊತ್ತಿರುವ ಸತ್ಯವಾಗಿದೆ. ಆದರೆ, ಬಿಜೆಪಿ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗದ ಹಿನ್ನೆಲೆ ಕಿಲನ್ ಗಣಪತಿ ಅವಿರೋಧ ಆಯ್ಕೆ

ಧವಸ ಭಂಡಾರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಗುಮ್ಮಟ್ಟೀರ ಕಿಲನ್ ಗಣಪತಿ ಅವಿರೋಧ ಆಯ್ಕೆಯಾಗುವ ಮೂಲಕ ಆಡಳಿತ ಮಂಡಳಿಗೆ ಕಾಲಿಟ್ಟ ಮೊದಲ ಅಭ್ಯರ್ಥಿಯಾ ಗಿದ್ದಾರೆ. ಎದುರಾಳಿಯಾಗಿ ನಾಮಪತ್ರ ಸಲ್ಲಿಸಿದ್ದ ಮಕ್ಕಂದೂರಿನ ಕುಂಬಗೌಡನ ಪ್ರಸನ್ನ ಇಂದು ಉಮೇದುವಾರಿಕೆ ಹಿಂತೆಗೆದುಕೊAಡ ಪರಿಣಾಮ ಅವಿರೋಧವಾಗಿ ಕಿಲನ್ ಆಯ್ಕೆಗೊಂಡಿದ್ದಾರೆ. ಉಳಿದಂತೆ ಸೋಮವಾರಪೇಟೆ ತಾಲೂಕು ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಡಿ.ಬಿ. ಧರ್ಮಪ್ಪ, ಸಿ.ಎನ್ ಲೋಕೇಶ್, ಕೆ.ಟಿ. ಪರಮೇಶ್, ಇತರ ಸಹಕಾರ ಸಂಘಗಳ ಕ್ಷೇತ್ರಗಳಿಗೆ ಸ್ಪರ್ಧಿಸಿದ್ದ ಟಿ.ಆರ್. ಪುರುಷೋತ್ತಮ್ ನಾಮಪತ್ರ ಹಿಂತೆಗೆದುಕೊAಡು ಕಣದಿಂದ ಹಿಂದೆ ಸರಿದಿದ್ದಾರೆ.

೧೨ ಸ್ಥಾನಕ್ಕೆ ಆಯ್ಕೆ ಬಾಕಿ

ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ಕ್ಷೇತ್ರಗಳಿಗೆ ತಲಾ ೩ ಸ್ಥಾನ, ಪಟ್ಟಣ ಸಹಕಾರ ಬ್ಯಾಂಕ್‌ಗೆ ೧, ಇತರ ಸಹಕಾರ ಸಂಘ ೧, ಮಹಿಳಾ ಕ್ಷೇತ್ರಕ್ಕೆ ೧ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿದೆ. ಈಗಾಗಲೇ ಧವಸ ಭಂಡಾರ ಕ್ಷೇತ್ರದಿಂದ ಕಿಲನ್ ಗಣಪತಿ ಅವಿರೋಧ ಆಯ್ಕೆ ಹೊರತುಪಡಿಸಿ ಒಟ್ಟು ೧೨ ಸ್ಥಾನಗಳಿಗೆ ಅಂತಿಮವಾಗಿ ೨೫ ಮಂದಿ ಕಣದಲ್ಲಿದ್ದಾರೆ. ಪ್ರತಿ ಸಹಕಾರ ಸಂಘಗಳಿAದ ಒಬ್ಬ ಮತದಾನ ಪ್ರತಿನಿಧಿಯಂತೆ ೧೪೪ ಮತದಾರರು ಮತದಾನಕ್ಕೆ ಅರ್ಹರಿದ್ದು, ತಾ. ೧೭ ರಂದು ಮತದಾನ ಮಡಿಕೇರಿಯ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಉನ್ನತಿ ಭವನದಲ್ಲಿ ನಡೆಯಲಿದೆ.