ಮಡಿಕೇರಿ, ಮಾ. ೧೧: ತಾ. ೩ ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ದಿವಂಗತ ಧರ್ಮರವರ ೩ನೇ ವರ್ಷದ ಜ್ಞಾಪಕಾರ್ಥವಾಗಿ ನಡೆದ ಲೀಗ್ ಮಾದರಿಯ ವಾಲಿಬಾಲ್ ಪಂದ್ಯದಲ್ಲಿ ಮನ್ವಿಕ್ ಫ್ರೆಂಡ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ ಟೀಮ್ ೧೪ ಅಶೋಕಪುರ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು,
೩ನೇ ಸ್ಥಾನವನ್ನು ದ್ರೋಣ ಸ್ಪೋರ್ಟ್ಸ್ ಕ್ಲಬ್ ಪಡೆದು ಕೊಂಡರೆ, ೪ನೇ ಸ್ಥಾನವನ್ನು ತುಶಾಂತ್ ಫ್ರೆಂಡ್ಸ್ ಪಡೆದು ಕೊಂಡಿತು. ಒಟ್ಟು ೯ ತಂಡಗಳು ಟ್ರೋಫಿಗಾಗಿ ಸೆಣಸಾಡಿ ದ್ದವು, ಕ್ರೀಡಾಕೂಟದಲ್ಲಿ ವೈಯಕ್ತಿಕ ಬಹುಮಾನವಾಗಿ ಬೆಸ್ಟ್ ಆಲ್ ರೌಂಡರ್ ಮನ್ವಿತ್ ಫ್ರೆಂಡ್ಸ್ ತಂಡದ ಜಮೀರ್, ಬೆಸ್ಟ್ ಪಾಸಾರ್ ಆಗಿ ಟೀಮ್ ೧೪ ತಂಡದ ಹಂಝ, ಬೆಸ್ಟ್ ಅಟ್ಯಾಕೆರ್, ಸುಬೈರ್, ಬೆಸ್ಟ್ ಡಿಫೆನ್ಸ್ ಶರೀಫ್ ಬಚ್ಚ, ಬೆಸ್ಟ್ ಬ್ಲಾಕರ್ ಸುಹಾಸ್, ಪಂದ್ಯದ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಹಂಝ ಪಡೆದುಕೊಂಡರು. ತೀರ್ಪುಗಾರರಾಗಿ ಅಮೃತ್ ಹಾಗೂ ರಾಜೇಶ್ ಕಾರ್ಯನಿರ್ವಹಿಸಿದ್ದರು. ಆಯೋಜಕರಾಗಿ ರವಿಕುಮಾರ್, ನಂದೀಶ್, ರಾಜೇಶ್, ಪಿಕ, ರಮೇಶ್ ಪಾಲ್ಗೊಂಡಿದ್ದರು.