ಮಡಿಕೇರಿ, ಮಾ. ೧೧: ಕುಂಜಿಲಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಹಬ್ಬ ಇದೇ ತಾ. ೧೪ರಂದು ನಡೆಯಲಿದೆ. ಅಂದು ಮುಂಜಾನೆ ತಕ್ಕಮುಖ್ಯಸ್ಥರ ಮನೆಯಿಂದ ಭಂಡಾರ ಸಹಿತ ದೇವಿಯ ಬನದಲ್ಲಿ ಸೇರಿ ಬಾಳೆಹಿಟ್ಟು ಹಾಗೂ ತೆಂಗಿನಕಾಯಿ ಒಡೆಯುವುದರ ಮೂಲಕ ನೈವೇದ್ಯ ಅರ್ಪಣೆ, ಮಧ್ಯಾಹ್ನ ೧೨.೪೫ ಗಂಟೆಗೆ ಊರಿನ ಭಕ್ತರು ತೆಂಗಿನಕಾಯಿಯೊAದಿಗೆ ಎತ್ತು ಪೋರಾಟ ಸಮೇತ ಬನಕ್ಕೆ ಆಗಮಿಸಿ ಭಂಡಾರ ಕಾಣಿಕೆ, ಹರಕೆ ಒಪ್ಪಿಸಿದ ನಂತರ ತೆಂಗಿನಕಾಯಿ ನೈವೇದ್ಯ ನಡೆಯುತ್ತದೆ ಎಂದು ದೇವಿಯ ಭಂಡಾರ ತಕ್ಕರಾದ ಕುಡುವಂಡ ಉತ್ತಪ್ಪ ತಿಳಿಸಿದ್ದಾರೆ.