ನಾಪೋಕ್ಲು, ಮಾ ೯: ನದಿ ಮತ್ತು ನದಿ ಮೂಲಗಳಿಂದ ಪಂಪ್ ಸೆಟ್ ಬಳಸಿ ನೀರು ತೆಗೆಯುವುದನ್ನು ಕೊಡಗು ಜಿಲ್ಲಾಡಳಿತ ನಿಷೇಧಿಸಿದ್ದು ಕಾಫಿ ಬೆಳೆಗಾರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಹಿಂಪಡೆಯಬೇಕೆAದು ಒತ್ತಾಯಿಸಿ ಬಿಜೆಪಿ ಕೃಷಿ ಮೋರ್ಚಾ ಮತ್ತು ಕಾಫಿ ಬೆಳೆಗಾರರು ನಾಪೋಕ್ಲು ಉಪ ತಹಶೀಲ್ದಾರ್ ಸುನಿಲ್ ಕುಮಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಜಿಲ್ಲಾ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಚಾಳಿಯಂಡ ಜಗದೀಶ್ ಮಾತನಾಡಿ, ಕೊಡಗಿನಲ್ಲಿ ಕಾಫಿ ಬೆಳೆಯನ್ನು ನಂಬಿಕೊAಡು ಹೆಚ್ಚಿನ ಸಂಖ್ಯೆಯ ಬೆಳೆಗಾರರು ಹಾಗೂ ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ವರ್ಷಕ್ಕೆ ಒಂದು ಬಾರಿ ಕಾಫಿ ತೋಟಕ್ಕೆ ನೀರು ಹಾಯಿಸುವ ಸಮಯ ಇದಾಗಿದೆ. ಆದರೆ ಇದೀಗ ಜಿಲ್ಲಾಡಳಿತ ದಿಢೀರ್ ಆಗಿ ನದಿ ಮೂಲಗಳಿಂದ ನೀರು ತೆಗೆಯದಂತೆ ಆದೇಶ ಹೊರಡಿಸಿದ್ದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ ಎಂದರು.

ಕಾಫಿ ಬೆಳೆಗಾರರ ಒಕ್ಕೂಟದ ಹೋಬಳಿ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ ಗಿಡಗಳಿಗೆ ನೀರು ಹಾಯಿಸದಿದ್ದರೆ ಮುಂದಿನ ವರ್ಷ ಫಸಲು ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದೆ. ಅತಿ ಹೆಚ್ಚು ತೆರಿಗೆ ತಂದು ಕೊಡುವ ವಾಣಿಜ್ಯ ಬೆಳೆ ಕಾಫಿ. ಇದರಿಂದ ಆಗುವ ನಷ್ಟ ದೇಶದ ಆರ್ಥಿಕ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳಬಹುದು. ಆದ್ದರಿಂದ ಜಿಲ್ಲಾಡಳಿತ ಆದೇಶವನ್ನು ಹಿಂಪಡೆಯಬೇಕೆAದು ಅವರು ಒತ್ತಾಯಿಸಿದರು. ಕಾಫಿ ತೋಟಗಳು ತನ್ನದೇ ಆದ ಕೊಡುಗೆಯನ್ನು ನೀಡುತ್ತಿವೆ. ಅಂತರ್ಜಲ ಕಾಪಾಡಲು ಬತ್ತದ ಗದ್ದೆಗಳನ್ನು ಉಳಿಸಿಕೊಳ್ಳ ಬೇಕಾಗಿದೆ. ಭತ್ತ ಬೆಳೆಯುವ ರೈತರಿಗೆ ಸಹಾಯಧನ ನೀಡಬೇಕು ಎಂದರು.

ಬಿಜೆಪಿ ಮಡಿಕೇರಿ ಕೃಷಿ ಮೋರ್ಚಾದ ಉಪಾಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿ ಈ ಆದೇಶದಿಂದ ಕಾಫಿ ಹಾಗೂ ಇತರ ಪರ್ಯಾಯ ಬೆಳೆಗಳನ್ನು ಬೆಳೆಸಿ ಜೀವನ ನಡೆಸುತ್ತಿರುವ ಕೃಷಿಕರಿಗೆ ತೊಂದರೆಯಾಗಿದೆ. ಬೆಳೆಗಾರರು ವರ್ಷಕ್ಕೊಮ್ಮೆ ಸಕಾಲಕ್ಕೆ ಮಳೆ ಬಾರದಿರುವ ಸಂದರ್ಭದಲ್ಲಿ ನದಿ ಹಾಗೂ ನದಿ ಮೂಲಗಳಿಂದ ನೀರು ಹಾಯಿಸಿಕೊಂಡು ಫಸಲನ್ನು ತೆಗೆದು ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ನೀಡಿರುವ ಈ ಆದೇಶವನ್ನು ಹಿಂಪಡೆದುಕೊAಡು ಬೆಳೆಗಾರರ ರಕ್ಷಣೆಗೆ ಮುಂದಾಗ ಬೇಕು ಎಂದರು. ಈ ಆದೇಶ ಹಿಂಪಡೆಯದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಬೆಳೆಗಾರರು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭ ತಾಲೂಕು ಕಾರ್ಯದರ್ಶಿ ನೂರಂಬಾಡ ಉದಯ ಶಂಕರ್, ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಪ್ರತೀಪ ಬಿ.ಎಂ., ಕಾಫಿ ಬೆಳೆಗಾರರಾದ ಕೇಲೇಟಿರ ಸಾಬು ನಾಣಯ್ಯ, ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಪಾಡಿಯಮ್ಮಂಡ ಮಹೇಶ್, ಜೆಪ್ರಿ ಬೆಳ್ಯಪ್ಪ, ಬಾಳೆಯಡ ಮೇದಪ್ಪ, ಅರೆಯಡ ರತ್ನ ಪೆಮ್ಮಯ್ಯ, ಚಿಯಕಪೂವಂಡ ಅಪ್ಪುಚ್ಚು , ಸದಾ, ಕಂಗAಡ ಜಾಲಿ ಪೂವಪ್ಪ, ಕೇಲೇಟಿರ ಬಸಪ್ಪ, ದೊರೆ, ಸೇರಿದಂತೆ ಇನ್ನಿತರ ಬೆಳೆಗಾರರು ಹಾಜರಿದ್ದರು. ಕೊಡಗು ಜಿಲ್ಲೆಯಾದ್ಯಂತ ಇರುವ ನದಿ ಹಾಗೂ ನದಿ ಮೂಲಗಳಿಂದ ಮೋಟಾರ್ ಪಂಪ್ ಸೆಟ್ ಬಳಸಿ ಕೃಷಿ ಚಟುವಟಿಕೆ ಕೈಗೊಳ್ಳಬಾರದು ಎಂದು ಮಾನ್ಯ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಿಂದ ಕಾಫಿ ಬೆಳೆಗಾರರು ತೀವ್ರ ರೀತಿಯ ಸಂಕಷ್ಟ ಎದುರಿಸುವಂತೆ ಆಗಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಯವಕಪಾಡಿ ಗ್ರಾಮದ ಕಾಫಿ ಬೆಳೆಗಾರ ಪಾಂಡAಡ ನರೇಶ್ ಒತ್ತಾಯಿಸಿದರು.

ನಾಪೋಕ್ಲುವಿನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಫಿ ಕೃಷಿಯು ಪುಟ್ಟ ಜಿಲ್ಲೆಯಾದ ಕೊಡಗಿನ ಬೆಳೆಗಾರರ ಜೀವನಾಡಿಯಾಗಿದೆ. ರೈತರು ಮಾರ್ಚ್ ತಿಂಗಳಲ್ಲಿ ಮಳೆ ಸಿಗದಿದ್ದರೆ ನೀರಾವರಿ ಮೂಲಕ ತಮ್ಮ ಕಾಫಿ ಗಿಡ ಹಾಗೂ ಇಳುವರಿಯನ್ನು ರಕ್ಷಿಸಿಕೊಂಡು ತಮ್ಮ ಜೀವನವನ್ನು ನಡೆಸುತ್ತಾರೆ. ಕಾಫಿ ಉದ್ದಿಮೆ ಲಕ್ಷಗಟ್ಟಲೆ ಆರ್ಥಿಕ ವಹಿವಾಟನ್ನು ನೀಡುತ್ತಿದೆ. ಲಕ್ಷಾಂತರ ಕಾರ್ಮಿಕರು ಕಾಫಿ ಕೃಷಿಯನ್ನು ಅವಲಂಬಿಸಿ ತಮ್ಮ ಜೀವನವನ್ನು ಸಾಗಿಸುತ್ತಾರೆ. ಕೊಡಗಿನ ಆರ್ಥಿಕ ಪರಿಸ್ಥಿತಿಯು ಈ ಕಾಫಿ ಕೃಷಿಯನ್ನು ನಂಬಿದೆ ದೇಶದ ಆರ್ಥಿಕ ಪರಿಸ್ಥಿತಿಗೂ ಕಾಫಿ ಕೃಷಿಯು ಉದ್ಯಮ ಹಲವು ವರ್ಷಗಳಿಂದ ಕೈಜೋಡಿಸುತ್ತಾ ಬಂದಿದೆ. ಪ್ರತಿಯೊಬ್ಬ ರೈತರು ಮಳೆ ಇಲ್ಲದಿದ್ದರೆ ಕೇವಲ ೧೦ ರಿಂದ ೧೫ ದಿನಗಳವರೆಗೆ ಮಾತ್ರ ನೀರನ್ನು ಬಳಸುತ್ತಾರೆ. ಅದು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ. ಒಂದೆಡೆ ಜಿಲ್ಲೆಯ ಹಲವು ರೆಸಾರ್ಟುಗಳು ಜಲಮೂಲಗಳನ್ನು ತಿರುಗಿಸಿದ್ದು, ಪಶ್ಚಿಮಘಟ್ಟ ಭಾಗದಲ್ಲಿ ಎಕರೆಗÀಟ್ಟಲೆ ಕಾಫಿ ಗಿಡಗಳನ್ನು ಕಡಿದು ವಾಣಿಜ್ಯೋದ್ಯಮಿಗಳು ಕಟ್ಟಡಗಳನ್ನು ಕಟ್ಟುವಂತೆ ಅನುಮತಿ ನೀಡಿದ್ದು ರೈತರ ವಿಷಯದಲ್ಲಿ ಮಾತ್ರ ಈ ರೀತಿ ಧೋರಣೆ ತಳೆದಿರುವುದು ಸರಿಯಲ್ಲ ಎಂದರು.

ಮತ್ತೋರ್ವ ಕಾಫಿ ಬೆಳೆಗಾರ ಅಂಜಪರವAಡ ಚೋಮಣಿ ಮಾತನಾಡಿ ಸರ್ಕಾರದ ಸುತ್ತೋಲೆ ಪ್ರಕಾರ ರೈತರು ಹೊಳೆ, ನದಿ ಮೂಲಗಳಿಂದ ನೀರು ಹಾಯಿಸು ವಂತಿಲ್ಲ. ಸರ್ಕಾರ ವ್ಯವಸಾಯ ಮಾಡಲು ಅವಕಾಶ ಕಲ್ಪಿಸಿ ಕೊಡಲಿ. ಇದರಿಂದ ರೈತರಿಗೂ, ಜಾನುವಾರು ಗಳಿಗೂ ಪ್ರಯೋಜನವಾಗುತ್ತದೆ. ಕೊಡಗಿನಾದ್ಯಂತ ಕಾಫಿ ಕೃಷಿ ಜನರ ಜೀವನಾಡಿ. ಇಳುವರಿ ಹೆಚ್ಚಿಸಿಕೊಳ್ಳಲು ನೀರಿನ ಮೂಲಗಳನ್ನು ರೈತರು ಬಳಸುತ್ತಿದ್ದಾರೆ. ಹಲವು ವರ್ಷಗಳಿಂದ ಕೊಡಗಿನ ಬೆಳೆಗಾರರು ಪ್ರಕೃತಿಯನ್ನು ಪೋಷಿಸಿ ಕೊಂಡು ಬರುತ್ತಿದ್ದು ಜಿಲ್ಲೆಯಲ್ಲಿ ಶೇಕಡ ೯೦ರಷ್ಟು ಭತ್ತದ ಗದ್ದೆ ನಶಿಸಿದೆ. ಅದೇ ಪರಿಸ್ಥಿತಿ ಕಾಫಿ ಕೃಷಿಗೂ ಬರಲಿದೆ. ಆದುದರಿಂದ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯವಕಪಾಡಿ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಡಕಡ ಸುರೇಶ್ ಬೆಳ್ಯಪ್ಪ, ಕುಂಜಿಲ ಗ್ರಾಮದ ಕಾಫಿ ಬೆಳೆಗಾರ ಮೊಹಮ್ಮದ್ ಹಾಜಿ, ಸತ್ಯಶೋಧನಾ ಸಮಿತಿ ಸದಸ್ಯ ಕೇಟೋಳಿರ ಸನ್ನಿ ಸೋಮಣ್ಣ ಪಾಲ್ಗೊಂಡಿದ್ದರು.