ಮಡಿಕೇರಿ, ಮಾ. ೯ : ಪ್ರಸ್ತುತ ಪಂಜಾಬ್‌ನ ಜಲಂದರ್‌ನ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಟಿ.ಪಿ. ದಿನೇಶ್ ಕರ್ನಲ್ ಹುದ್ದೆಗೆ ಬಡ್ತಿ ಹೊಂದಿದ್ದಾರೆ. ಇವರು ಹುಬ್ಬಳ್ಳಿಯ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ. ಬಿ.ಎಸ್. ಪದವಿ ಪಡೆದು ಭಾರತೀಯ ಭೂಸೇನೆಗೆ ಆಯ್ಕೆ ಆಗಿದ್ದರು. ಕಾರ್ಗಿಲ್‌ನ ಮಿಲಿಟರಿ ಆಸ್ಪತ್ರೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಮೂಲತಃ ಕಾರುಗುಂದ ಗ್ರಾಮದವರಾಗಿದ್ದು, ಮೈಸೂರಿನ ಹೂಟಗಳ್ಳಿಯಲ್ಲಿ ನೆಲೆಸಿರುವ ತೆಕ್ಕಡೆ ಪೂಣಚ್ಚ ಹಾಗೂ ಧರ್ಮಾವತಿ (ಬೇಬಿ) ದಂಪತಿಯ ಪುತ್ರ.