ಕುಶಾಲನಗರ, ಮಾ, ೭: ಅರಣ್ಯ ವಸತಿ ಮತ್ತು ವಿಹಾರ ಧಾಮ ಜಂಗಲ್ ಲಾಡ್ಜ್ ವತಿಯಿಂದ ಖಾಸಗಿ ಸಂಸ್ಥೆಯೊAದಿಗೆ ಹಾರಂಗಿ ಜಲಾಶಯದಲ್ಲಿ ಗುರುವಾರ ಬೆಳಿಗ್ಗೆ ಚಾಲನೆಗೊಳ್ಳಬೇಕಾಗಿದ್ದ ವಾಟರ್ ಸ್ಪೋರ್ಟ್ಸ್ ಸಾಹಸಿ ಕ್ರೀಡಾ ಚಟುವಟಿಕೆ ಕಾರ್ಯಕ್ರಮ ದಿಢೀರನೆ ರದ್ದುಗೊಂಡು ಮುಂದೂಡಲಾಗಿದೆ.
ಸುಮಾರು ೧.೫ ಕೋಟಿ ರೂಗಳ ವೆಚ್ಚದಲ್ಲಿ ಹಾರಂಗಿ ಜಲಾಶಯದ ಆವರಣದಲ್ಲಿರುವ ಆನೆ ಕ್ಯಾಂಪ್ ಬಳಿ ಜಲ ಕ್ರೀಡೆ ನಡೆಸಲು ಎಲ್ಲ ರೀತಿಯಲ್ಲಿ ಪೂರ್ವಸಿದ್ಧತೆ ತಯಾರಿ ನಡೆದಿತ್ತು.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಮೂಲಕ ಖಾಸಗಿ ಸಂಸ್ಥೆಯೊAದಿಗೆ ಸಹಭಾಗಿತ್ವದಲ್ಲಿ ಜಲ ಕ್ರೀಡೆ, ಸಾಹಸಿ ಕ್ರೀಡೆಗಳನ್ನು ಆರಂಭಿಸುವ ಸಂಬAಧವಾಗಿ ಗುರುವಾರ ಬೆಳಿಗ್ಗೆ ಜಿಲ್ಲೆಯ ಇಬ್ಬರು ಶಾಸಕರ ಉಪಸ್ಥಿತಿಯಲ್ಲಿ ಚಾಲನೆ ನೀಡಲು ಸಿದ್ಧತೆ ನಡೆದ ಬೆನ್ನಲ್ಲೇ ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಕಾರ್ಯಕ್ರಮ ದಿಢೀರನೆ ಮುಂದೂಡಲಾಗಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೆ ಜಲ ಸಾಹಸ ಕ್ರೀಡೆಯ ಬಗ್ಗೆ ಸಮಗ್ರ ಮಾಹಿತಿ ನೀಡದೆ ಕೇವಲ ಆಮಂತ್ರಣ ಮಾತ್ರ ನೀಡಲಾಗಿತ್ತು. ಜೊತೆಗೆ ಸ್ಥಳೀಯರಿಂದ ಹಾರಂಗಿ ಅಣೆಕಟ್ಟಿನಲ್ಲಿ ಇಂತಹ ಕ್ರೀಡೆಗಳನ್ನು ಆಯೋಜಿಸಿದಲ್ಲಿ ನದಿ ನೀರಿನ ಗುಣಮಟ್ಟ ಮತ್ತು ಅಪಾಯದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಮಂತರ್ ಗೌಡ ಅವರು ಶಕ್ತಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸಂಬAಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ನಂತರ ಚಾಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
(ಮೊದಲ ಪುಟದಿಂದ) ಹಾರಂಗಿ ಹಿನ್ನೀರಿನಲ್ಲಿ ಮತ್ತು ಅಣೆಕಟ್ಟು ಆವರಣದಲ್ಲಿ ಬೋಟ್ಗಳು, ಸಾಹಸ ಕ್ರೀಡೆಗಳು ಮತ್ತಿತರ ಚಟುವಟಿಕೆಗಳನ್ನು ನಡೆಸಿಕೊಂಡು ಬರುವ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆ ಸಹಭಾಗಿತ್ವದೊಂದಿಗೆ ಜಂಗಲ್ ಲಾಡ್ಜ್ ಎಲ್ಲಾ ಪೂರ್ವ ತಯಾರಿಯನ್ನು ನಡೆಸಿತ್ತು.
ಆದರೆ ಜಲಾಶಯದಲ್ಲಿ ಪ್ರವಾಸಿಗರಿಗೆ ಯಾವುದೇ ರೀತಿಯ ಅಪಾಯ ಘಟನೆಗಳು ಸಂಭವಿಸದAತೆ ಎಚ್ಚರ ವಹಿಸಬೇಕಾಗಿದೆ., ಪರಿಸರಕ್ಕೆ ಯಾವುದೇ ರೀತಿಯ ಹಾನಿ ಆಗಬಾರದು, ಯಾವುದೇ
ರೀತಿಯಲ್ಲಿ ಜಲಾಶಯದ ನೀರು ಕಲುಷಿತಗೊಳ್ಳದಂತೆ ಎಚ್ಚರವಹಿಸುವುದು ಈ ಬಗ್ಗೆ ಚರ್ಚಿಸಬೇಕಾಗಿದೆ. ಪರಿಸರಕ್ಕೆ ಪೂರಕವಾಗಿ ಜಲ ಕ್ರೀಡೆ ಚಟುವಟಿಕೆಗಳು ನಡೆಯಬೇಕಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.
ಜಲಾಶಯದಲ್ಲಿ ಬೋಟ್ಗಳ ಚಟುವಟಿಕೆ, ಕ್ರೀಡಾ ಕೇಂದ್ರದ ವ್ಯಾಪ್ತಿ, ಜಲಾಶಯದಲ್ಲಿ ಓಡಾಡುವ ಬೋಟ್ಗಳ ಸಂಖ್ಯೆ ಮತ್ತು ಗಾತ್ರ ಮತ್ತಿತರ ಅಣೆಕಟ್ಟು ಸೂಕ್ಷö್ಮ ಪ್ರದೇಶಗಳ ಸಂಪೂರ್ಣ ಮಾಹಿತಿ ಕಲೆ ಹಾಕುವ ಮೂಲಕ ನಿಯಮಾನುಸಾರ ಚಟುವಟಿಕೆಗೆ ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಾ. ಮಂತರ್ ಗೌಡ ತಿಳಿಸಿದ್ದಾರೆ.
ಹಾರಂಗಿ ಜಲಾಶಯ ಭದ್ರತೆಗೆ ಕಳೆದ ಐದು ವರ್ಷಗಳಿಂದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು ಸಿಬ್ಬಂದಿಗಳು ದಿನದ ೨೪ ಗಂಟೆ ಕಾಲ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಅಣೆಕಟ್ಟೆಯ ಭದ್ರತೆಯ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ .
ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರು ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿದ್ದು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮವಿಲ್ಲದೆ ಅಪಾಯಕಾರಿ ಚಟುವಟಿಕೆಗಳು ನಡೆಯುವುದು ಸರಿಯಲ್ಲ, ಸಾಹಸಿ ಜಲ ಕ್ರೀಡೆ ಸಂದರ್ಭ ಪ್ರವಾಸಿಗರ ರಕ್ಷಣೆ ಕೂಡ ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಲಾಶಯದ ಮೂಲಕ ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಜೊತೆಗೆ ಜಲಾಶಯದ ತಟದಲ್ಲಿರುವ ಗ್ರಾಮಗಳಿಗೂ ಪೂರೈಕೆಯಾಗುತ್ತಿದೆ. ಜಲಾಶಯದಲ್ಲಿ ಪ್ರವಾಸಿಗರ ಒತ್ತಡದಿಂದ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಸಮಸ್ಯೆ ಉಂಟಾಗಲಿದ್ದು ಇದರಿಂದ ಜಲಾಶಯದ ನೀರು ಸಂಪೂರ್ಣ ಕಲುಷಿತಗೊಳ್ಳಲಿದೆ.
ಜೊತೆಗೆ ಜಲಾಶಯದಲ್ಲಿ ಇರುವ ಅಪರೂಪದ ಮಹಶೀರ್, ಮತ್ತಿತರ ಸ್ಥಳೀಯ ಮೀನುಗಳು ಸೇರಿದಂತೆ ಮೊಸಳೆಗಳ ಜಲಚರಗಳ ಸಂತತಿ ನಾಶಗೊಳ್ಳುವ ಆತಂಕ ಇರುವುದಾಗಿ ಅವರು ಹೇಳಿದರು.
ಹಾರಂಗಿ ಜಲಾಶಯದಲ್ಲಿ ಕ್ರೀಡೆಗಳು ಮತ್ತು ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಗುರುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಹಾರಂಗಿ ಜಲಾಶಯದ ಆನೆ ಶಿಬಿರ ವೃಕ್ಷ ಉದ್ಯಾನವನದಲ್ಲಿ ಕಾರ್ಯಕ್ರಮ ಅಂಗವಾಗಿ ಎಲ್ಲಾ ಸಿದ್ಧತೆಗಳು ನಡೆದಿದ್ದವು.
ಈ ಬಗ್ಗೆ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಹಾರಂಗಿ ಅಣೆಕಟ್ಟಿನಲ್ಲಿ ಜಲ ಸಾಹಸ ಕ್ರೀಡೆಗೆ ಎಲ್ಲಾ ನೀತಿ ನಿಯಮಗಳನ್ನು ಅಳವಡಿಸುವ ಮೂಲಕ ಮುಂದಿನ ದಿನಗಳಲ್ಲಿ ಶಾಸಕರ ಸಲಹೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.