ಸುಂಟಿಕೊಪ್ಪ, ಮಾ. ೭: ಸಮೀಪದ ಗದ್ದೆಹಳ್ಳದ ಚೆಟ್ಟಳ್ಳಿ ರಸ್ತೆ ಬದಿಯ ಗದ್ದೆಯಲ್ಲಿ ನವಜಾತ ಶಿಶುವಿನ ಮೃತದೇಹವೊಂದು ಇಂದು ಸಂಜೆ ಪತ್ತೆಯಾಗಿದೆ. ನವಜಾತ ಶಿಶುವನ್ನು ಗದ್ದೆಯ ಬದಿಯಲ್ಲಿ ಗುಂಡಿ ತೋಡಿ ಮುಚ್ಚಲಾಗಿತ್ತು. ಇದೇ ಸ್ಥಳದಲ್ಲಿ ಹೊಸ ಮನೆ ಕಟ್ಟಲು ಅಶ್ರಫ್ ಎಂಬವರು ಅಡಿಪಾಯ ಹಾಕಿದ್ದು, ಅಡಿಪಾಯವನ್ನು ವೀಕ್ಷಿಸಲು ತೆರಳಿದ್ದ ಅವರಿಗೆ ಅಡಿಪಾಯದ ಬಳಿ ನವಜಾತ ಶಿಶುವಿನ ಮೃತದೇಹ ಕಂಡುಬAದಿದ್ದು, ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಠಾಣಾಧಿಕಾರಿ ಶ್ರೀಧರ, ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.