ಸುಂಟಿಕೊಪ್ಪ, ಮಾ. ೭: ಸಮೀಪದ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಿಬಾಣೆ ಗ್ರಾಮದ ಮಾಗಡೂರು ವಿಶ್ವನಾಥ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ತಾ. ೮ರಂದು (ಇಂದು) ವಿಶ್ವನಾಥ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಯಲಿದೆ. ಅಲ್ಲದೆ, ದೇವಾಲಯದಲ್ಲಿ ಗಣಹೋಮ, ಮೃತ್ಯುಂಜಯ ಹೋಮ, ರುದ್ರಾಭಿಷೇಕ, ಇತರೆ ಪೂಜಾ ಕೈಂಕರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ರಸಮಂಜರಿ ನಡೆಯಲಿದೆ.