ಗೋಣಿಕೊಪ್ಪಲು, ಮಾ. ೭: ಅತ್ಯಂತ ರೋಚಕತೆಯಿಂದ ಕೂಡಿದ್ದ ಅಂತಿಮ ಹಣಾಹಣಿಯಲ್ಲಿ ನ್ಯೂ ಸ್ಟೆçöÊರ್ಸ್ ತಂಡವು ಎ.ಎಲ್.ಸಿ ತಂಡವನ್ನು ಮಣಿಸುವ ಮೂಲಕ ವಿಶು ಕ್ರಿಕೆಟ್ ಕಪ್ನ್ನು ತನ್ನದಾಗಿಸಿ ಕೊಂಡಿತು. ರನ್ನರ್ ಅಪ್ಗೆ ಎಎಲ್ಸಿ ತಂಡ ತೃಪ್ತಿ ಪಟ್ಟುಕೊಂಡಿತು.
ಕೊಡಗು ಹಿಂದೂ ಮಲೆಯಾಳಿ ಸಮಾಜ, ಕರ್ನಾಟಕ ನಾಯಕ್ ಸೊಸೈಟಿ ವತಿಯಿಂದ ಗೋಣಿಕೊಪ್ಪ ಲುವಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ೪ ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ವಿಶು ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೬ ತಂಡಗಳು ಪ್ರಶಸ್ತಿಗಾಗಿ ತೀವ್ರ ಸೆಣಸಾಟ ನಡೆಸಿದವು. ಅಂತಿಮವಾಗಿ ನ್ಯೂ ಸ್ಟೆçöÊರ್ಸ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಒಂದು ಲಕ್ಷ ನಗದು ಬಹುಮಾನದೊಂದಿಗೆ ಪಾರಿತೋಷಕ ವನ್ನು ಎತ್ತಿ ಹಿಡಿಯಿತು. ಗೋಣಿಕೊಪ್ಪ ಲುವಿನ ಮತ್ತೊಂದು ತಂಡ ಎಎಲ್ಸಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ೫೦ ಸಾವಿರ ನಗದು ಬಹುಮಾನ ದೊಂದಿಗೆ ಪ್ರಶಸ್ತಿಯನ್ನು ಪಡೆಯಿತು.
ಅಂತಿಮ ಪಂದ್ಯಾವಳಿ ವೀಕ್ಷಣೆಗೆ ನಿರೀಕ್ಷೆಗೂ ಮೀರಿ ಮೈದಾನದ ಸುತ್ತಲೂ ಕ್ರೀಡಾಭಿಮಾನಿಗಳು ನೆರೆದಿದ್ದರು. ಕೊಡಗು ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಅಮೃತ್ ರಾಜನ್ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಿದ ಕ್ರೀಡಾ ಸಂಚಾಲಕ ವೇಣು ಕಣ್ಣನ್, ವಿ.ವಿ. ಅರುಣ್ಕುಮಾರ್, ಸಂತೋಷ್ ಪಿಟ್ಟೆ ಹಾಗೂ ವಿ.ಎನ್. ರೀನಾ ರವರನ್ನು ಆಯೋಜಕರು ಹಾಗೂ ದಾನಿಗಳಾದ ಮೀನು ಉಂಬಯಿ ರವರು ಸನ್ಮಾನಿಸಿ, ಗೌರವಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ ಎಲ್ಲಾ ಸಮಾಜ ಬಾಂಧವರು ಉತ್ತಮ ರೀತಿಯಲ್ಲಿ ಸಮಾಜದ ಒಗ್ಗಟ್ಟನ್ನು ಮೂಡಿಸಲು ಕ್ರೀಡೆಯ ಮೂಲಕ ಶ್ರಮಿಸುತ್ತಿದ್ದಾರೆ. ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಸೇರಿಸಿಕೊಂಡು ಕ್ರೀಡೆಯ ಮೂಲಕ ಸಾಮರಸ್ಯ ಕಾಪಾಡುತ್ತಿರುವುದು ಉತ್ತಮ ಬೆಳವಣಿಗೆ. ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿ ನಡೆಯು ವಂತಾಗಬೇಕು. ಇದರಿಂದ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಾಗಲು ಸಾಧ್ಯ ಎಂದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಗೋಣಿಕೊಪ್ಪಲುವಿನ ಶಾಲಾ ಮೈದಾನದಲ್ಲಿ ಇಲ್ಲಿಯ ತನಕ ಹಲವು ಸಮಾಜಗಳು ಕ್ರೀಡೆಗಳನ್ನು ನಡೆಸಿ ಯಶಸ್ವಿಯಾಗಿವೆ. ಹಿಂದೂ ಮಲಯಾಳಿ ಸಮಾಜವು ವಿಭಿನ್ನ ರೀತಿಯಲ್ಲಿ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಿ ಜನರನ್ನು ಆಕರ್ಷಿಸಿದೆ. ಉತ್ತಮ ನಗದು ಬಹುಮಾನ ದೊಂದಿಗೆ ಪಾರಿತೋಷಕವೂ ನೀಡುತ್ತಿರುವುದು ಶ್ಲಾಘನೀಯ ಎಂದರು. ವೀರಾಜಪೇಟೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ರೀಡಾ ಚಟುವಟಿಕೆಗಳು ಇತ್ತೀಚೆಗೆ ಕೊಡಗಿನಲ್ಲಿ ಹೆಚ್ಚಿನ ಪ್ರಖ್ಯಾತಿಯನ್ನು ಪಡೆಯುತ್ತಿವೆ. ಕೊಡಗಿನಲ್ಲಿ ಕ್ರೀಡೆಗೆ ವಿಶೇಷವಾದ ಗೌರವವಿರುವುದು ಇದಕ್ಕೆ ಸಾಕ್ಷಿ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಅಂಚೆ ಕಚೇರಿಯ ನಿವೃತ್ತ ಪೋಸ್ಟ್ ಮಾಸ್ಟರ್ ಕೆ. ರಘು ಮಾತನಾಡಿದರು. ವೇದಿಕೆಯಲ್ಲಿ ಬಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಬೋಪಣ್ಣ, ಗೋಣಿಕೊಪ್ಪ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಶ್ರೀಪ್ರಿಯ, ಕರ್ನಾಟಕ ನಾಯರ್ ಸೊಸೈಟಿ ಸರ್ವಿಸ್ನ ಅಧ್ಯಕ್ಷ ಪಿ.ಜಿ. ಪವಿತ್ರನ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಸಮಾಜದ ಸರಳ ಮಣಿಲಾಲ್ ಪ್ರಾರ್ಥಿಸಿ, ಎಂ.ಎಸ್. ಸುಬ್ರಮಣಿ, ಸ್ವಾಗತಿಸಿ, ಆಸಿಫ್, ಶರ್ಫುದ್ದೀನ್, ಜ್ಯೋತಿ ಅರುಣ್ ನಿರೂಪಿಸಿ ವಕೀಲರಾದ ಕೆ.ಬಿ. ಸಂಜೀವ್ ವಂದಿಸಿದರು. ಸಮಾರಂಭದಲ್ಲಿ ಕೆಎನ್ಎಸ್ಎಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೆಹೆಚ್ಎಂಎಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕೆಎನ್ಎಸ್ಎಸ್ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕೆಹೆಚ್ಎಂಎಸ್ ಯೂತ್ ವಿಂಗ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.
- ಹೆಚ್.ಕೆ. ಜಗದೀಶ್