ಸಿದ್ದಾಪುರ, ಮಾ. ೭: ಸಿದ್ದಾಪುರದ ಶ್ರೀ ಮುತ್ತಪ್ಪ-ಭಗವತಿ ದೇವಾಲಯದ ವಾರ್ಷಿಕೋತ್ಸವ ತಾ. ೯ ರಿಂದ ೧೩ ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ತಾ. ೯ ರಂದು ಬೆಳಿಗ್ಗೆ ಪಂಚಗವ್ಯ, ೬ ಗಂಟೆಗೆ ಗಣಪತಿ ಹೋಮ ಹಾಗೂ ೧೦ಕ್ಕೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ದೊರಕಲಿದ್ದು, ೧೦.೩೦ಕ್ಕೆ ದೀಪಾರಾದನೆ, ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ನಂತರ ಅನ್ನದಾನ ನಡೆಯಲಿದೆ. ಸಂಜೆ ೬.೫೦ಕ್ಕೆ ಸಂಧ್ಯಾದೀಪ, ಪಂಚಗವ್ಯ, ಮಹಾಪೂಜೆ, ಸಂಜೆ ೬.೫೧ ಕ್ಕೆ ಸಂಧ್ಯಾದೀಪ, ರಂಗಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ತಾ. ೧೦ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೮.೩೦ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ, ಸಂಜೆ ೬.೩೦ಕ್ಕೆ ದೇವರ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ತಾ. ೧೧ ರಂದು ಬೆಳಿಗ್ಗೆ ೬.೩೦ಕ್ಕೆ ಮಹಾಗಣಪತಿ ಹೋಮ, ೮ ರಿಂದ ೧೨ ಗಂಟೆಯವರೆಗೆ ಆಶ್ಲೇಷ ಬಲಿ, ನಾಗಹೋಮ, ಮಹಾಪೂಜೆ, ಅನ್ನಸಂತರ್ಪಣೆ ಸಂಜೆ ೫.೩೦ ಗಂಟೆಗೆ ಕಾವೇರಿ ನದಿಯಲ್ಲಿ ದೇವಿಯ ಸ್ನಾನ, ರಾತ್ರಿ ೮ ಗಂಟೆಗೆ ದೇವಿಯ ನರ್ತನ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ತಾ. ೧೨ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿಹೋಮ, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ, ಸಂಜೆ ೫ ಕ್ಕೆ ಶ್ರೀ ಮುತ್ತಪ್ಪನ ಮಲೆ ಇಳಿಸುವುದು, ರಾತ್ರಿ ೭ ಗಂಟೆಗೆ ಶಾಸ್ತಪ್ಪನ ವೆಳ್ಳಾಟಂ, ರಾತ್ರಿ ೮.೩೦ಕ್ಕೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ೯ ಗಂಟೆಗೆ ವಸೂರಿಮಾಲ ಸ್ನಾನಕ್ಕೆ ಹೊರಡುವುದು, ೯.೩೦ ಅನ್ನಸಂತರ್ಪಣೆ ನಡೆಯಲಿದೆ.

ತಾ. ೧೩ ರಂದು ಪಾತಃಕಾಲ ೫ ಗಂಟೆಗೆ ಗುಳಿಗನ ತೆರೆ, ೬.೩೦ಕ್ಕೆ ಶಾಸ್ತಪ್ಪನ ತೆರೆ, ೭ ಗಂಟೆಗೆ ಮುತ್ತಪ್ಪನ, ತಿರುವಪ್ಪನ ತೆರೆ, ೮ಕ್ಕೆ ಭಗವತಿಯ ತೆರೆ, ೧೧ ಗಂಟೆಗ ವಿಷ್ಣುಮೂರ್ತಿಯ ತೆರೆ ಹಾಗೂ ೧ ಗಂಟೆಗೆ ಅನ್ನದಾನ ನಡೆಯಲಿದೆ.