ಮಡಿಕೇರಿ, ಮಾ. ೭: ಬಿಸಿಲ ತಾಪದಿಂದ ನಲುಗುತ್ತಿರುವ ಈ ಸಂದರ್ಭದಲ್ಲಿ ನಿನ್ನೆ ಸಂಜೆ ಪೊನ್ನಂಪೇಟೆ ತಾಲೂಕಿನ ಹಲವೆಡೆ ವರ್ಷದ ಮೊದಲ ಮಳೆಯ ಸಿಂಚನವಾಗಿದ್ದು, ಜನತೆಯಲ್ಲಿ ಒಂದಷ್ಟು ಸಂತಸದೊAದಿಗೆ ಆಶಾಭಾವನೆ ಮೂಡಿದೆ. ಕೋತೂರು, ನಾಲ್ಕೇರಿ, ಲಕ್ಕುಂದ ವ್ಯಾಪ್ತಿಯಲ್ಲಿ ೨೦ ರಿಂದ ೩೦ ಸೆಂಟ್ಗಳಷ್ಟು ಮಳೆಯಾಗಿರುವ ಕುರಿತು ವರದಿಯಾಗಿದೆ. ಹರಿಹರ ವಿಭಾಗದಲ್ಲೂ ಒಂದಷ್ಟು ಸಿಂಚನವಾಗಿದೆ. ಪ್ರಸ್ತುತ ಮಾರ್ಚ್ ಎರಡನೇ ವಾರ ಮುಂದುವರೆಯುತ್ತಿದ್ದು, ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಪ್ರಸಕ್ತ ವರ್ಷ ಬಹುತೇಕ ಜಲಮೂಲಗಳು ಬರಿದಾಗುತ್ತಿದ್ದು, ಜನತೆಯಲ್ಲಿ ಆತಂಕದ ಸನ್ನಿವೇಶ ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಮಳೆಯ ಸಿಂಚನವಾಗಿರುವುದು ಒಂದಷ್ಟು ನೆಮ್ಮದಿಯೊಂದಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗುವ ಆಶಾಭಾವನೆ ಮೂಡಿಸಿದೆ.