ಶನಿವಾರಸಂತೆ, ಮಾ. ೭: ಇಲ್ಲಿಗೆ ಸಮೀಪದ ಮಾಲಂಬಿ ಬೆಟ್ಟದ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿದೆ.
ದೇವಾಲಯ ಸಮಿತಿ ವತಿಯಿಂದ ಶಿವರಾತ್ರಿಯಂದು ದೇವಸ್ಥಾನದಲ್ಲಿ ಬೆಳಗ್ಗಿನ ಜಾವ ಸೂರ್ಯೋದಯವಾಗಿ ಸೂರ್ಯನ ಕಿರಣ ಶಿವಲಿಂಗದ ಮೇಲೆ ಬೀಳುತ್ತಿರುವ ಸಮಯದಲ್ಲಿ ಅರ್ಚಕರು ಹಾಲು-ತುಪ್ಪದ ಅಭಿಷೇಕ ಮಾಡುವರು. ನಂತರ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ೭.೩೦ಕ್ಕೆ ಪೂಜಾ ಕೈಂಕರ್ಯ ನಡೆಯಲಿದೆ.
ಸಂಜೆ ೬ ಗಂಟೆಯವರೆಗೆ ಹಣ್ಣುಕಾಯಿ ಸೇವೆ ನಡೆಯಲಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಭಕ್ತರಿಗೆ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಲಿದೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ದೇವಾಲಯ ಸಮಿತಿ ಪದಾಧಿಕಾರಿ ಎಸ್.ಕೆ. ಸದಾಶಿವ ತಿಳಿಸಿದ್ದಾರೆ.