ಮಡಿಕೇರಿ, ಮಾ. ೭: ಜಿಲ್ಲೆಯ ಹಿರಿಯ ಸಾಹಿತಿ, ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಕಟ್ರತನ ಲಲಿತ ಅಯ್ಯಣ್ಣ ಅವರು ಬರೆದಿರುವ ಕಥೆಯೊಂದು ಮಂಗಳೂರು ವಿಶ್ವ ವಿದ್ಯಾನಿಲಯದ ಪಠ್ಯಕ್ರಮದಲ್ಲಿ ಅಳವಡಿಕೆಯಾಗಿದೆ.

ಲಲಿತ ಅವರು ಬರೆದಿರುವ ಕಡಲಾಳದ ಮುತ್ತುಗಳು ಕಥಾ ಸಂಕಲನದಲ್ಲಿನ ಬೇಟೆ ಕಥೆ ಮಂಗಳೂರು ವಿಶ್ವ ವಿದ್ಯಾನಿಲಯದ ದ್ವಿತೀಯ ಬಿಎಸ್‌ಸಿ ಕನ್ನಡದ ವಿಜ್ಞಾನ ಮಂಗಳ-೪ರ ಶ್ರೀಸಾಮಾನ್ಯನ ಬದುಕು ವಿಭಾಗದಲ್ಲಿ ಪಠ್ಯವಾಗಿ ಅಡಕಗೊಂಡಿದೆ. ಈಗಾಗಲೇ ಜಿಲ್ಲೆಯ ಸಾಹಿತಿಗಳಾದ ಕಿಗ್ಗಾಲು ಗಿರೀಶ್, ಸ್ಮಿತಾ ಅಮೃತರಾಜ್, ಕೆ.ಕೆ. ಸುನಿತಾ, ರೇವತಿ ರಮೇಶ್, ಸಹನ ಕಾಂತಬೈಲು ಅವರುಗಳ ಬರಹಗಳು ವಿವಿಧ ಪಠ್ಯಕ್ರಮದಲ್ಲಿ ಅಳವಡಿಕೆ ಯಾಗಿದ್ದು, ಇದೀಗ ಆರನೆಯದ್ದಾಗಿ ಲಲಿತಾ ಅವರ ಕಥೆ ಸೇರಿಕೊಂಡಿದೆ. ಕೊಡಗಿನ ಸಾಹಿತಿಗಳ ಬರಹಗಳು ನಾಡಿನ ಎಲ್ಲೆಡೆ ಪಸರಿಸುತ್ತಿರುವದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.

-ಸಂತೋಷ್