ಕೂಡಿಗೆ, ಮಾ. ೭: ಜಿಲ್ಲಾಡಳಿತ, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ವತಿಯಿಂದ ಸಂವಿಧಾನದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಕುಶಾಲನಗರದಿಂದ ಕೂಡಿಗೆಗೆ ಆಗಮಿಸಿದ ಜಾಥಾದ ರಥವನ್ನು ಕೂಡಿಗೆ ಕೃಷಿ ಕ್ಷೇತ್ರದ ಮುಖ್ಯ ದ್ವಾರದಲ್ಲಿ ಸ್ವಾಗತಿಸಲಾಯಿತು. ಶಾಲಾ ಪ್ರಾಂಶುಪಾಲ ಪ್ರಕಾಶ್ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲ ಕೆ. ಪ್ರಕಾಶ್ ನೆರವೇರಿಸಿ ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣಾ ಕುಮಾರ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್, ಸೋಮವಾರಪೇಟೆ ಜೆ.ಸಿ. ನಿಕಟ ಪೂರ್ವ ಅಧ್ಯಕ್ಷೆ ರುಬಿನಾ, ಪೋಷಕರ ಪರಿಷತ್ತಿನ ಸದಸ್ಯರಾದ ಅಂಬಿಕಾ, ಮಂಜುನಾಥ, ವಸತಿ ಗೃಹದ ಮೇಲ್ವಿಚಾರಕ ಜಗದೀಶ್, ಮತ್ತಿತರರು ಹಾಜರಿದ್ದರು.