ಮಡಿಕೇರಿ, ಮಾ. ೬: ಕೇರಳದ ಶಂಕರಾಚಾರ್ಯ ಪೀಠದ ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಮಂಗಳವಾರ ಸಂಜೆ ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡಿದರು. ಕೊಡಗಿಗೆ ಬರುವ ಮುನ್ನ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದು ನೇರವಾಗಿ ಭಾಗಮಂಡಲ ತಲುಪಿದರು. ಭಾಗಮಂಡಲ ದಲ್ಲಿ ಭಗಂಡೇಶ್ವರ ದೇವರ ಪೂಜೆಯಲ್ಲಿ ಪಾಲ್ಗೊಂಡು ತಲಕಾವೇರಿಗೆ ಭೇಟಿ ನೀಡಿ ಪುಣ್ಯ ಕೊಳದಲ್ಲಿ ಸ್ನಾನ ಮಾಡಿ ಕಾವೇರಿಗೆ ಸಲ್ಲಿಸಲಾದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಕಾವೇರಿ ಜನ್ಮಸ್ಥಳಕ್ಕೆ ಆಗಮಿಸಿ ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದುದಾಗಿ ಸ್ವಾಮೀಜಿ ನುಡಿದರು. ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಾಗೂ ಕೃಷಿ ಬೆಳೆಗಳಿಗೆ ನೀರಿಲ್ಲದೆ ರೈತರ ಸಂಕಷ್ಟ ನಿವಾರಣೆಯಾಗಲು ವರುಣ ದೇವರ ಕೃಪೆ ದೊರಕಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ದೇಶದ ಏಳಿಗೆಗಾಗಿ ಮನಃಪೂರ್ವಕವಾಗಿ ಪ್ರಾರ್ಥಿಸಿರು ವುದಾಗಿ ತಿಳಿಸಿದರು. ಬಳಿಕ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಸ್ವಾಮೀಜಿ ಯವರು ಭಾಗಮಂಡಲಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಾÀರ್ಪತ್ತೇಗಾರ್ ರಾಯ್ ಪೊನ್ನಣ್ಣ, ಅರ್ಚಕ ಹರೀಶ್ ಪೂಂಚೆತ್ತಾಯ ಮತ್ತಿತರರ ನೇತೃತ್ವದಲ್ಲಿ ಪೂರ್ಣಕುಂಭÀ ಗೌರವದೊಂದಿಗೆ ಸ್ವಾಗತಿಸಲಾಯಿತು. ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ತಲಕಾವೇರಿಗೆ ಆಗಮಿಸಿದ ಅವರನ್ನು ಅಲ್ಲಿನ ಪಾರ್ಪತ್ತೇಗಾರ್ ಮಹೇಶ್ ಮತ್ತು ಅರ್ಚಕ ಪ್ರಶಾಂತಾಚಾರ್ ಅವರು ಬರಮಾಡಿಕೊಂಡರು.
ಭಾಗಮಂಡಲದಲ್ಲಿ ನಡೆ ಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ತ್ರಿವೇಣಿ ಸಂಗಮದಲ್ಲಿ ನೀರು ಕಡಿಮೆಯಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡರೆ ಬಳಿಕ ಭಕ್ತರು ಸಂಗಮದಲ್ಲಿ ಸ್ನಾನ ಮಾಡಬಹುದಾಗಿದೆ ಎಂದು ಗುತ್ತಿಗೆದಾರರು ಮಾಹಿತಿಯಿತ್ತಿದ್ದಾರೆ.