ಮಡಿಕೇರಿ, ಮಾ.೬: ಲಯನ್ಸ್ ಇಂಟರ್ ನ್ಯಾಷನಲ್ ವತಿಯಿಂದ ತಾ.೯ರಂದು ಕಗ್ಗೋಡ್ಲುವಿನಲ್ಲಿ ಪ್ರಾಂತೀಯ ಸಮ್ಮೇಳನ ಏರ್ಪಡಿಸಲಾಗಿದೆ. ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಲಯನ್ಸ್ನ ಮಡಿಕೇರಿ ತಾಲೂಕು ಅಧ್ಯಕ್ಷ ಮದುಕರ್ ಶೇಠ್, ಕಗ್ಗೋಡ್ಲು ಸಮೀಪದ ಕೂರ್ಗ್ ಅಂಬರದಲ್ಲಿ ಸಂಜೆ ೪ ಗಂಟೆಗೆ ಲಯನ್ಸ್ ಇಂಟರ್ ನ್ಯಾಷನಲ್ ೮ರ ಅಧ್ಯಕ್ಷ ಅಂಬೆಕಲ್ ನವೀನ್, ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ.

ಕಾರ್ಯಕ್ರಮದಲ್ಲಿ ೧೪ ಪ್ರಾಂತೀಯ ಲಯನ್ಸ್ ಸಂಸ್ಥೆಯ ಸದಸ್ಯರು, ಪ್ರಾಂತೀಯ ಅಧ್ಯಕ್ಷರು, ಮಾಜಿ ಹಾಗೂ ಹಾಲಿ ರಾಜ್ಯಪಾಲರುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಲಯನ್ಸ್ ಇಂಟರ್ ನ್ಯಾಷನಲ್ ೮ರ ಅಧ್ಯಕ್ಷ ಅಂಬೇಕಲ್ ನವೀನ್ ಮಾತನಾಡಿ, ಜಿಲ್ಲೆಯಲ್ಲಿ ೫೦೦ಕ್ಕೂ ಅಧಿಕ ಲಯನ್ಸ್ ಸದಸ್ಯರಿದ್ದಾರೆ. ಅಂದಿನ ಸಮ್ಮೇಳನದಲ್ಲಿ ಲಯನ್ಸ್ನ ವಾರ್ಷಿಕ ಕಾರ್ಯಕ್ರಮಗಳನ್ನು ಸದಸ್ಯರಿಗೆ ತಿಳಿಸಲಾಗುವುದು. ಅಂದು ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ವಾಗ್ಮಿ ಜಿ.ಎಸ್.ನಟೇಶ್, ಲಯನ್ಸ್ ಜಿಲ್ಲಾ ರಾಜ್ಯಪಾಲ ಜಿ.ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರಾಮಪ್ಪ, ಬಾಲಾಜಿ ಕಶ್ಯಪ್, ಡಾ.ಎಂ.ಜಿ. ಪಾಟ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಸಂಸ್ಥೆಯ ಮುಖ್ಯ ಸಲಹೆಗಾರ ಪಿ.ಪಿ.ಸೋಮಣ್ಣ, ಪ್ರಾಂತೀಯ ಸಮ್ಮೇಳನದ ಖಜಾಂಚಿ ಕೆ.ಎ. ಬೊಳ್ಳಪ್ಪ, ಸಹ ಕಾರ್ಯದರ್ಶಿ ಮದನ್, ನಿರ್ದೇಶಕ ದಾಮೋಧರ್ ಉಪಸ್ಥಿತರಿದ್ದರು.