ಗೋಣಿಕೊಪ್ಪಲು, ಮಾ. ೭: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ೧೩ ಕೋಟಿಗೂ ಅಧಿಕ ಅನುದಾನವನ್ನು ಶಾಸಕ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ರಾದ ಎ.ಎಸ್. ಪೊನ್ನಣ್ಣ ತಂದಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಕಳೆದ ೨ ತಿಂಗಳ ಹಿಂದೆ ಬೈಪಾಸ್ ಕೈತೋಡು ತಡೆಗೋಡೆ ನಿರ್ಮಾಣಕ್ಕೆ ೯ ಕೋಟಿ, ಅರುವ ತ್ತೊಕ್ಕಲು ಸೇತುವೆ ನಿರ್ಮಾಣಕ್ಕೆ ೧೫ ಲಕ್ಷ ಹಾಗೂ ಸಾರ್ವಜನಿಕರ ಬಹು ಬೇಡಿಕೆಯಾಗಿದ್ದ ಗೋಣಿಕೊಪ್ಪ ಬಸ್ ನಿಲ್ದಾಣಕ್ಕೆ ೨ ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಇದೀಗ ೧.೨೦ ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದು, ಸ್ವಾತಂತ್ರö್ಯ ಹೋರಾಟ ಗಾರರ ಭವನ ಅಭಿವೃದ್ಧಿಗೆ ೩೦ ಲಕ್ಷ, ಕೊಡವ ಸಮಾಜ ಅಭಿವೃದ್ಧಿಗೆ ೨೫ ಲಕ್ಷ, ಗ್ರಾ.ಪಂ. ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ೩೦ ಲಕ್ಷ, ಜುಮಾ ಶಾಫಿ ಮಸೀದಿ ಅಭಿವೃದ್ಧಿಗೆ ೨೫ ಲಕ್ಷ ಸೇರಿದಂತೆ ಅಟೋ ನಿಲ್ದಾಣ ಹಾಗೂ ಕಾರು ನಿಲ್ದಾಣದ ಮೇಲ್ಛಾವಣಿಗೆ ೧೦ ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಇವುಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಹಾಗೂ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಲಭ್ಯ ವಾಗುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾ ರರಿಗೆ ನಿರ್ದೇಶನ ನೀಡಿದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ತಲಾ ೩೦ ಲಕ್ಷ ರೂ. ಅನುದಾನ ಒದಗಿಸಿದೆ. ಅದರಂತೆ ಗೋಣಿಕೊಪ್ಪ ಗ್ರಾಪಂ ವ್ಯಾಪ್ತಿಗೆ ಸಣ್ಣ ನೀರಾವರಿ ಇಲಾಖೆಯಿಂದ ಕೀರೆ ಹೊಳೆಗೆ ತಡೆಗೋಡೆ ನಿರ್ಮಾಣಕ್ಕೆ ೯ ಕೋಟಿ ಬಸ್ ನಿಲ್ದಾಣ ಕಾಮಗಾರಿಗೆ ೨ ಕೋಟಿ ರೂ. ಅನುದಾನ ಸೇರಿದಂತೆ ಒಟ್ಟು ೧೩ ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಿಸಿಸಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಯುವ ಕಾಂಗ್ರೆಸ್ ಅಧ್ಯಕ್ಷ ನಾಮೇರ ಅಂಕಿತ್, ಕಾಂಗ್ರೆಸ್ ಪಕ್ಷದ ಹಿರಿಯರಾದ ಕೊಳ್ಳಿಮಾಡ ಅಜೀತ್ ಅಯ್ಯಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಎಂ. ಮಂಜುಳಾ, ಸದಸ್ಯರಾದ, ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಬಿ. ಎನ್. ಪ್ರಕಾಶ್, ರಾಮದಾಸ್, ಶರತ್ ಕಾಂತ್, ಪ್ರಗತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಲ್ಲಂಡ ಪ್ರಕಾಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ವಿಕ್ಟರ್, ಪ್ರಮುಖರಾದ ಸಾದಲಿ, ರಾಜಶೇಖರ್, ಶಿವಾಜಿ, ಎ.ಜೆ. ಬಾಬು, ರಮಾವತಿ, ಶಾಂತೆಯAಡ ಮಧು ಮಾಚಯ್ಯ, ಧನಲಕ್ಷಿö್ಮ, ಕರ್ಣರಾಜ್, ಅಬ್ದುಲ್ ಸಮ್ಮದ್, ರಸಿಯಾ, ಯಾಶ್ಮೀನ್, ಸುನೀತಾ, ಧನ್ಯ, ಬಡಾವಣೆಗಳ ಅಧ್ಯಕ್ಷರು ಮತ್ತು ನಿವಾಸಿಗಳು, ವಾಹನ ಚಾಲಕರ ಪದಾಧಿಕಾರಿಗಳು ಸೇರಿದಂತೆ ಗೋಣಿಕೊಪ್ಪ ಗ್ರಾ.ಪಂ. ಪಿಡಿಓ ತಿಮ್ಮಯ್ಯ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

-ಹೆಚ್.ಕೆ. ಜಗದೀಶ್