ಮಡಿಕೇರಿ, ಮಾ. ೬: ಕೆಲ ತಿಂಗಳುಗಳ ಹಿಂದೆ ಸರ್ಕಾರಿ ಬಸ್ ಡಿಕ್ಕಿಯಾಗಿ ಹಾನಿಗೊಳಗಾಗಿದ್ದ ಜನರಲ್ ತಿಮ್ಮಯ್ಯ ಪ್ರತಿಮೆಯ ಮರುಸ್ಥಾಪನೆ ಕಾರ್ಯಕ್ರಮ ತಾ. ೮ರಂದು (ನಾಳೆ) ನಡೆಯಲಿದೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಾನಿಗೊಳಗಾಗಿದ್ದ ಪ್ರತಿಮೆ ಯನ್ನು ಸರಿಪಡಿಸುವ ಕಾರ್ಯ ಮುಗಿದಿದ್ದು, ತಾ. ೮ರಂದು (ನಾಳೆ) ಬೆಳಿಗ್ಗೆ ಮೈಸೂರಿನಿಂದ ಮೆರವಣಿಗೆ ಮೂಲಕ ತರಲಾಗುತ್ತದೆ. ಈ ವೇಳೆ ಮೈಸೂರು ಕೊಡವ ಸಮಾಜದವರು, ಸಂಸದರು, ಶಾಸಕರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯಲ್ಲಿ ಕಾರು ಹಾಗೂ ಬೈಕ್ ಜಾಥಾವು ಇರಲಿದೆ. ಜನರಲ್ ತಿಮ್ಮಯ್ಯ ಅವರ ಜೀವನ ಚರಿತ್ರೆ ಸಾರುವ ಟ್ಯಾಬ್ಲೋ ಇರಲಿದ್ದು, ಕುಶಾಲನಗರ ಗಡಿಯಲ್ಲಿ ಪ್ರತಿಮೆಯನ್ನು ಬರಮಾಡಿಕೊಳ್ಳ ಲಾಗುತ್ತದೆ. ಬಳಿಕ ಮಡಿಕೇರಿ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ಕೊಡಗಿನ ಸಾಂಪ್ರದಾಯಿಕ ವಾಲಗ, ಸಾಂಪ್ರದಾಯಿಕ ಉಡುಪಿನೊಂದಿಗೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಪೊಲೀಸ್ ಇಲಾಖೆ, ಸಾರ್ವಜನಿಕರು ಅದ್ಧೂರಿಯಾಗಿ ಬರಮಾಡಿಕೊಂಡು ತಿಮ್ಮಯ್ಯ ವೃತ್ತÀದವರೆಗೆ ಮೆರವಣಿಗೆ ನಡೆಸಲಾಗುತ್ತದೆ ಎಂದು ಮುತ್ತಪ್ಪ ಮಾಹಿತಿಯಿತ್ತರು. ಮಧ್ಯಾಹ್ನ ೧೨.೩೦ ಗಂಟೆಗೆ ನಿವೃತ್ತ ಏರ್ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪ ಅವರು ಪ್ರತಿಮೆಯನ್ನು ಅನಾವರಣ ಗೊಳಿಸಲಿದ್ದು, ನಿವೃತ್ತ ಸೇನಾಧಿಕಾರಿ ಗಳು ಭಾಗವಹಿಸಲಿದ್ದಾರೆ. ಇದೇ ವೇಳೆ ವೃತ್ತದ ಬಳಿ ಎಲ್ಇಡಿ ಪರದೆಯ ಮೂಲಕ ಜ.ತಿಮ್ಮಯ್ಯ ಅವರ ಜೀವನ ಚರಿತ್ರೆಯನ್ನು ಪ್ರದರ್ಶಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಜಿಲ್ಲಾಡಳಿತ, ನಗರಸಭೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದ ಪ್ರತಿಮೆ ಮರುಸ್ಥಾಪನೆ ಸಾಧ್ಯವಾಗಿದ್ದು, ಮಡಿಕೇರಿ ಕೊಡವ ಸಮಾಜವೂ ಈ ಕಾರ್ಯಕ್ಕೆ ಕೈಜೋಡಿಸುತ್ತಿದೆ ಎಂದು ಹೇಳಿದರು.
ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಜ. ತಿಮ್ಮಯ್ಯ ಪ್ರತಿಮೆ ಮರುಸ್ಥಾಪನೆ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತಾಗಬೇಕು. ಪ್ರತಿಮೆ ಪುನರ್ ಸ್ಥಾಪನೆ ಸಂಬAಧ ಅಗತ್ಯ ಸಿದ್ಧತೆ ನಡೆದಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮಡಿಕೇರಿ ಕೊಡವ ಸಮಾಜದ ನಿರ್ದೇಶಕರಾದ ವಿಜು ದೇವಯ್ಯ, ಅಪ್ಪಣ್ಣ, ಚೊಟ್ಟೆಯಂಡ ಸಂಜು, ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್ ಉಪಸ್ಥಿತರಿದ್ದರು.