ಸಿದ್ದಾಪುರ, ಮಾ. ೬: ಕಾಫಿ ತೋಟದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ೧೦೦ ಕೆ.ಜಿ. ಕರಿಮೆಣಸು ಕಳ್ಳತನ ಮಾಡಿದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ದಾಪುರ ಸಮೀಪದ ಟಾಟಾ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿದ್ದ ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದ ನಿವಾಸಿ ಎಚ್.ಕೆ. ಕಾರ್ಯಪ್ಪ ಬಂಧಿತ ಆರೋಪಿ. ಸಂಸ್ಥೆಯ ಗೋದಾಮಿನಲ್ಲಿ ಇಟ್ಟಿದ್ದ ನೂರು ಕೆಜಿ ಕರಿಮೆಣ ಸನ್ನು ಕಳವು ಮಾಡಿ ಶೌಚಾಗೃಹದಲ್ಲಿ ಇಟ್ಟಿದ್ದ. ಈ ಬಗ್ಗೆ ಸ್ಥಳೀಯ ಕಾರ್ಮಿಕರು ತೋಟದ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದು ತೋಟದ ವ್ಯವಸ್ಥಾಪಕ ಸಂಪತ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನೂರು ಕೆ.ಜಿ. ಕರಿಮೆಣಸನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ