ಮಡಿಕೇರಿ, ಮಾ. ೬: ಪ್ರತಿಷ್ಠಿತ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿ.ಸಿ.ಸಿ)ನ ಮುಂದಿನ ಆಡಳಿತ ಮಂಡಳಿ ಚುನಾವಣೆಯ ಬಿಸಿ ಏರುತ್ತಿದೆ. ಮಾರ್ಚ್ ೧೭ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ತಾ.೬ರಿಂದ ಆರಂಭಗೊAಡಿದೆ. ಮೊದಲ ದಿನವೇ ಆರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇದು ಪಕ್ಷ ಆಧಾರಿತವಾದ ಚುನಾವಣೆ ಅಲ್ಲವಾದರೂ ಪ್ರಮುಖ ಪಕ್ಷಗಳಾದ ಬಿ.ಜೆ.ಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸ್ಪರ್ಧೆ ನಿರೀಕ್ಷಿತವಾಗಿದೆ.

ಜಿಲ್ಲೆಯ ಬಹುತೇಕ ಸಹಕಾರ ಸಂಘಗಳಲ್ಲಿ ಬಿಜೆಪಿ ಬೆಂಬಲಿತರೇ ಅಧಿಕವಾಗಿದ್ದು, ಸಹಜವಾಗಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯದ ಮಟ್ಟಿಗೆ ಬಿಜೆಪಿ ಪಕ್ಷ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆದರೆ ಅಸಮಾಧಾನಿತರು ಬಂಡಾಯವಾಗಿ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕಿನ ತಲಾ ೩ ನಿರ್ದೇಶಕ ಸ್ಥಾನ ಹಾಗೂ ಜಿಲ್ಲಾ ಮಟ್ಟದಲ್ಲಿ ಒಂದು ನಿರ್ದೇಶಕ ಸ್ಥಾನ, ಒಂದು ಮಹಿಳಾ ಸ್ಥಾನ ಧವಸಭಂಡಾರಗಳ ಮೂಲಕ ಒಂದು ಸ್ಥಾನ ಹಾಗೂ ಕೃಷಿಯೇತರ ಸಂಘಗಳ ಮೂಲಕ ಒಂದು ಸ್ಥಾನ ಸೇರಿ ಒಟ್ಟು ೧೩ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ‘ಶಕ್ತಿ’ಗೆ ತಿಳಿದು ಬಂದAತೆ, ವೀರಾಜಪೇಟೆ ತಾಲೂಕಿನ ಹೊಟ್ಟೇಂಗಡ ಎಂ. ರಮೇಶ್, ಕುಞಂಗಡ ಅರುಣ್ ಭೀಮಯ್ಯ ಹಾಗೂ ಪಟ್ರಪಂಡ ರಘು ನಾಣಯ್ಯ ಅವರುಗಳು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ. ತಾ.೬ರಂದು ಈ ಮೂರು ಮಂದಿಯೂ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮಡಿಕೇರಿ ತಾಲೂಕಿನಿಂದ ಬಿಜೆಪಿ ಪಕ್ಷದ ಮೂಲಕ ಕೇಟೋಳಿರ ಹರೀಶ್ ಪೂವಯ್ಯ, ಹೊಸೂರು ಸತೀಶ್ ಹಾಗೂ ಕಾಂಗೀರ ಸತೀಶ್, ಮೂಲಕ ಒಂದು ಸ್ಥಾನ ಸೇರಿ ಒಟ್ಟು ೧೩ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ‘ಶಕ್ತಿ’ಗೆ ತಿಳಿದು ಬಂದAತೆ, ವೀರಾಜಪೇಟೆ ತಾಲೂಕಿನ ಹೊಟ್ಟೇಂಗಡ ಎಂ. ರಮೇಶ್, ಕುಞಂಗಡ ಅರುಣ್ ಭೀಮಯ್ಯ ಹಾಗೂ ಪಟ್ರಪಂಡ ರಘು ನಾಣಯ್ಯ ಅವರುಗಳು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ. ತಾ.೬ರಂದು ಈ ಮೂರು ಮಂದಿಯೂ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮಡಿಕೇರಿ ತಾಲೂಕಿನಿಂದ ಬಿಜೆಪಿ ಪಕ್ಷದ ಮೂಲಕ ಕೇಟೋಳಿರ ಹರೀಶ್ ಪೂವಯ್ಯ, ಹೊಸೂರು ಸತೀಶ್ ಹಾಗೂ ಕಾಂಗೀರ ಸತೀಶ್, ಸಾಧ್ಯತೆಗಳು ಹೆಚ್ಚಿರುವುದಾಗಿ ಹೇಳಲಾಗಿದ್ದು, ಬಂಡಾಯದ ಬಿಸಿ ಕಂಡು ಬರುತ್ತಿದೆ.

ಜಿಲ್ಲಾಮಟ್ಟದ ಆದರೆ ಇತರೆ ಸಂಘಗಳ ಮೂಲಕ ಇರುವ ಮತ್ತೊಂದು ನಿರ್ದೇಶಕ ಸ್ಥಾನಕ್ಕೆ ಬಿಜೆಪಿಯಿಂದ ಹಾಲಿ ಅಧ್ಯಕ್ಷ ಬಾಂಡ್ ಗಣಪತಿ ಹಾಗೂ ಹಾಲಿ ನಿರ್ದೇಶಕ ಮನು ಮುತ್ತಪ್ಪ ನಡುವೆ ಸ್ಪರ್ಧೆಯಿದ್ದು, ಈ ಇಬ್ಬರ ಪ್ರಬಲ ಒತ್ತಡದಿಂದಾಗಿ ಪಕ್ಷ ಈ ಸ್ಥಾನಕ್ಕೆ ಯಾರನ್ನೂ ಘೋಷಣೆ ಮಾಡಿಲ್ಲ ಎನ್ನಲಾಗಿದೆ. ಆದರೆ ಹಾಲಿ ಅಧ್ಯಕ್ಷ ಬಾಂಡ್ ಗಣಪತಿ ಈ ಸ್ಥಾನಕ್ಕೆ ಮೊದಲ ದಿನವೇ ಉಮೇದುವಾರಿಕೆ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಸಲ್ಲಿಸಿರುವ ಬೆಳವಣಿಗೆ ಕಂಡು ಬಂದಿದೆ. ಇನ್ನುಳಿದಂತೆ ಜಿಲ್ಲಾ ಮಹಿಳಾ ನಿರ್ದೇಶಕ ಸ್ಥಾನಕ್ಕೆ ಲೀಲಾ ಮೇದಪ್ಪ ಹಾಗೂ ಇತರೆ ಸಂಘಗಳ ಮೂಲಕ ಇರುವ ನಿರ್ದೇಶಕ ಸ್ಥಾನಕ್ಕೆ ಟಿ.ಆರ್. ಪುರುಷೋತ್ತಮ್ ತಾ.೬ರಂದು ನಾಮಪತ್ರ ಸಲ್ಲಿಸಿದ್ದು, ಮೊದಲ ದಿನ ಒಟ್ಟು ೬ ಮಂದಿ ಉಮೇದುವಾರಿಕೆ ಸಲ್ಲಿಸಿದಂತಾಗಿದೆ.

ನಾಮಪತ್ರ ಸಲ್ಲಿಕೆಗೆ ತಾ.೯ ಕೊನೆಯ ದಿನವಾಗಿದೆ. ಈ ಅವಧಿಯೊಳಗೆ ಇನ್ನೆಷ್ಟು ಮಂದಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂಬ ಕುತೂಹಲ ಒಂದೆಡೆಯಾದರೆ ಬಿಜೆಪಿ ಪಕ್ಷದವರಲ್ಲೇ ಇನ್ನೆಷ್ಟು ಮಂದಿ ಸ್ಪರ್ಧೆಗೆ ಮುಂದಾಗಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಮೂಲಕ ಯರ‍್ಯಾರು ಕಣಕ್ಕೆ ಇಳಿಯಬಹುದು ಎಂಬ ಕೌತುಕ ಮತ್ತೊಂದೆಡೆಯಾಗಿದೆ. ಸದ್ಯದ ಮಾಹಿತಿಯಂತೆ ಎಲ್ಲಾ ಸ್ಥಾನಗಳಿಗೂ ಚುನಾವಣೆ ಬಹುತೇಕ ಖಚಿತ ಎಂದು ತಿಳಿದು ಬಂದಿದೆ.