ಸೋಮವಾರಪೇಟೆ, ಮಾ. ೫: ಭಾರತೀಯ ಜನತಾ ಪಾರ್ಟಿ ಹಾಗೂ ಯುವ ಮೋರ್ಚಾದ ವತಿಯಿಂದ ಪಟ್ಟಣದಲ್ಲಿ ತಿರಂಗ ಪಾದಯಾತ್ರೆ ಕಾರ್ಯಕ್ರಮ ನಡೆಯಿತು.

ಇಲ್ಲಿನ ಕಕ್ಕೆಹೊಳೆ ಜಂಕ್ಷನ್‌ನಿAದ ರಾಷ್ಟçಧ್ವಜದೊಂದಿಗೆ ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರಮುಖ ಮಾರ್ಗದಲ್ಲಿ ಜಾಥಾ ನಡೆಸಿದರು. ರಾಷ್ಟç ಮೊದಲು ಎಂಬ ಘೋಷಣೆ ಯೊಂದಿಗೆ ಸಾಗಿದ ಕಾರ್ಯಕರ್ತರು, ರಾಷ್ಟçದ ಬಾಹ್ಯ ಮತ್ತು ಆಂತರಿಕ ಭದ್ರ ತೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಬದ್ಧತೆ ಮರೆತಿದೆ ಎಂದು ಆರೋಪಿಸಿದರು.

ದೇಶದ ವಿರುದ್ಧದ ಮಾನಸಿಕತೆ ಯನ್ನು ಹೊಂದಿರುವ ಕಿಡಿಗೇಡಿಗಳನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸಭೆ ನಡೆಸಿ ಸುಭದ್ರ ಭಾರತ ಹಾಗೂ ಸುರಕ್ಷಿತ ಕರ್ನಾಟಕಕ್ಕಾಗಿ ಪಣತೊಡಬೇಕೆಂದು ಸಂಕಲ್ಪ ಮಾಡಿದರು.

ತಿರಂಗ ಪಾದಯಾತ್ರೆಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಅಧ್ಯಕ್ಷ ಗೌತಮ್ ಗೌಡ, ಪ್ರಮುಖರಾದ ವಿ.ಕೆ. ಲೋಕೇಶ್, ಭುವನೇಂದ್ರ, ಅನಂತ್‌ಕುಮಾರ್, ಅಜೀಶ್‌ಕುಮಾರ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಪ್ರಮುಖರಾದ ಶ್ರೀನಿಧಿ ಲಿಂಗಪ್ಪ, ಎಸ್.ಆರ್. ಸೋಮೇಶ್, ಜೀವನ್, ಮಲ್ಲಾಜಿರ ಪ್ರವೀಣ್, ರೂಪ ಸತೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.