ಸೋಮವಾರಪೇಟೆ, ಮಾ. ೫: ತಾಲೂಕಿನ ಕೂತಿ ಗ್ರಾಮದಲ್ಲಿ ಕಾಡಾನೆಗಳು ಫಸಲಿಗೆ ಬಂದ ಬೆಳೆಗಳನ್ನು ನಾಶಪಡಿಸಿದ್ದು ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈಗಾಗಲೇ ಭತ್ತದ ಫಸಲು ನಷ್ಟವಾಗಿದ್ದು, ಇದೀಗ ಕಾಡಾನೆ ಧಾಳಿಯಿಂದ ಕಾಫಿ ಗಿಡ, ಮೆಣಸು, ಫಸಲಿಗೆ ಬಂದಿದ್ದ ಬಾಳೆ ಗಿಡವನ್ನು ಸಂಪೂರ್ಣ ನಾಶಪಡಿಸಿವೆ. ಕಾಡಾನೆ ಧಾಳಿ ಕುರಿತು ಹಲವು ವರ್ಷಗಳಿಂದ ಇಲಾಖೆಗೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಆನೆ ಹಾವಳಿ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕೆಂದು ಬೆಳೆ ನಷ್ಟ ಅನುಭವಿಸಿದ ಕೃಷಿಕರಾದ ಡಿ. ಎಸ್. ಸೋಮಶೇಖರ್, ಪ್ರದೀಪ್ ಕುಮಾರ್ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.