ಮಡಿಕೇರಿ, ಮಾ. ೫: ಕಲೆ ಸಾವಿರ ಮಾತು ಹೇಳಬಲ್ಲದು ಮಾತ್ರವಲ್ಲ; ಸಮಾನ ಮನಸ್ಕರನ್ನು ಒಂದುಗೂಡಿಸುವ ಶಕ್ತಿಯನ್ನೂ ಹೊಂದಿದೆ. ನಗರದಲ್ಲಿ ಬೀದಿ ಕಲೆಯನ್ನು ಪರಿಚಯಿಸುವ ಉದ್ದೇಶದಿಂದ, ಮಡಿಕೇರಿಯ ಮೈಂಡ್ ಮತ್ತು ಮ್ಯಾಟರ್ ಎನ್ಜಿಒ, ಕಲಾವಿದೆ ಸ್ನೇಹಾ ಚಕ್ರವರ್ತಿ ಅವರ ಸಹಕಾರದಿಂದ ನಗರದ ವಿವಿಧೆಡೆ ಬಣ್ಣಗಳಿಂದ ಸಿಂಗರಿಸಲಾಗುತ್ತಿದೆ.
ಮೈಂಡ್ ಆ್ಯಂಡ್ ಮ್ಯಾಟರ್ ಒಂದು ಚಾರಿಟಬಲ್ ಟ್ರಸ್ಟ್ ಆಗಿದ್ದು, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನಗಳನ್ನು ಆಯೋಜಿಸುವ ಮೂಲಕ ಶಾಲಾ ಮಕ್ಕಳ ಮಾನಸಿಕ ಸ್ವಾಸ್ಥ್ಯವನ್ನು, ಹಿಂದುಳಿದ ಮಕ್ಕಳಿಗೆ ಆಫ್-ಬೀಟ್ ಶಿಕ್ಷಣವನ್ನು ವಿಸ್ತರಿಸಲು ಗಮನ ಹರಿಸಿದೆ. ಸಂಸ್ಥೆಯ ಕಾರ್ಯಗಳನ್ನು ಉತ್ತೇಜಿಸುವ ಮತ್ತು ನಗರಕ್ಕೆ ಸ್ವಲ್ಪ ರಂಗು ತರುವ ಉದ್ದೇಶದಿಂದ ಮೈಂಡ್ ಆ್ಯಂಡ್ ಮ್ಯಾಟರ್, ಪ್ರಸಿದ್ಧ ಕಲಾವಿದೆ ಸ್ನೇಹಾ ಚಕ್ರವರ್ತಿ ಅವರೊಂದಿಗೆ ನಗರದಲ್ಲಿ ಗೋಡೆಗೆ ಬಣ್ಣಗಳಲ್ಲಿ ಕಲಾ ಚಿತ್ರಗಳನ್ನು ಬಿಡಿಸಲಾಗುತ್ತಿದೆ.
“ಸ್ನೇಹಾ ತನ್ನ ಕಲೆಗೆ ಹೆಸರುವಾಸಿಯಾಗಿರುವ ಕಲಾವಿದೆ. ತನ್ನ ಕಲೆಯ ಮೂಲಕ ಅವರು ವಿವಿಧ ನಗರಗಳ ಸಂಸ್ಕೃತಿಯನ್ನು ‘ಹೈಲೈಟ್’ ಮಾಡುವ ಗುರಿಯನ್ನು ಹೊಂದಿದ್ದಾರೆ. ಅವರು ಮಡಿಕೇರಿಯಿಂದ ತಮ್ಮ ಆರು ತಿಂಗಳ ಕಲಾ ಪ್ರವಾಸವನ್ನು ಪ್ರಾರಂಭಿಸುತ್ತಾರೆ ಮತ್ತು ಹಲವಾರು ಇತರ ಪ್ರದೇಶಗಳಲ್ಲಿ ಬೀದಿ ಕಲೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ”ಎಂದು ಮೈಂಡ್ ಮತ್ತು ಮ್ಯಾಟರ್ನ ಸಂಸ್ಥಾಪಕಿ ದೀಪಿಕಾ ಅಪ್ಪಯ್ಯ ಮಾಹಿತಿ ನೀಡಿದ್ದಾರೆ. ಈ ಹಿಂದೆ ಸ್ನೇಹಾ ಅವರು ಖಾಸಗಿ ಕೆಫೆಯಲ್ಲಿ ಮ್ಯೂರಲ್ ಆರ್ಟ್ ಕಾರ್ಯಾಗಾರವನ್ನು ನಡೆಸಿದ್ದರು, ಇದರಲ್ಲಿ ನಗರದ ಆಶ್ರಯ ಮನೆಗಳ ಮಕ್ಕಳು ಭಾಗವಹಿಸಿದ್ದರು ಎಂದು ಅವರು ವಿವರಿಸಿದರು. “ಆಶ್ರಯ ಮನೆಗಳ ಮಕ್ಕಳಿಗೆ ಭಿತ್ತಿಚಿತ್ರಗಳು ಮತ್ತು ಕಲೆಯನ್ನು ಪರಿಚಯಿಸಲು ನಾವು ಸಣ್ಣ ಕಾರ್ಯಾಗಾರವನ್ನು ಆಯೋಜಿಸಿದ್ದೇವೆ. ನಗರವನ್ನು ಬಣ್ಣಗಳಿಂದ ಚಿತ್ರಿಸುವುದರ ಜೊತೆಗೆ, ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಮನಸ್ಸು ಮತ್ತು ವಿಷಯವನ್ನು ಉತ್ತೇಜಿಸುವ ಗುರಿಯನ್ನು ನಾವು ಹೊಂದಿದ್ದೇವೆ, ”ಎಂದು ಅವರು ಹೇಳಿದರು. ಜನಪ್ರಿಯ ಪ್ರವಾಸಿ ತಾಣವಾದ ರಾಜಾಸೀಟ್ಗೆ ಹೊಂದಿಕೊAಡAತೆ ತಡೆಗೋಡೆಯ ಮೇಲೆ ಚಿತ್ರಿಸಲು ಸಂಸ್ಥೆಯು ಸಿಎಂಸಿ ಮತ್ತು ಕಲಾವಿದೆಯೊಂದಿಗೆ ಕೈಜೋಡಿಸಿದೆ. - ಜಿ.ಆರ್. ಪ್ರಜ್ಞಾ