ಮಡಿಕೇರಿ, ಮಾ. ೫: ಕಳೆದ ಐದು ತಿಂಗಳಿನಿAದ ವೇತನ ಪಾವತಿ ಆಗದೆ ಇರುವುದರಿಂದ ವೇತನ ಪಾವತಿಗೆ ಆಗ್ರಹಿಸಿ ಮಂಗಳೂರು ವಿವಿ ಅಧೀನದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಮೌನ ಪ್ರತಿಭಟನೆ ಐದನೇ ದಿನಕ್ಕೆ ಕಾಲಿರಿಸಿದೆ. ಇಂದು ಕೂಡ ಪ್ರತಿಭಟನೆ ಮುಂದುವರೆದಿದ್ದು ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ತರಗತಿಗೆ ತೆರಳುವಂತೆ ಉಪನ್ಯಾಸಕರ ಮನವೊಲಿಸುವ ಪ್ರಯತ್ನ ಮಾಡಿದರು.
ಕಳೆದ ಐದು ತಿಂಗಳಿನಿAದ ವೇತನ ಪಾವತಿ ಆಗದೆ ಇರುವುದರಿಂದ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರುಗಳು ತರಗತಿ ಬಹಿಷ್ಕರಿಸಿ ಕಳೆದ ಐದು ದಿನಗಳಿಂದ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಇಂದು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸ್ಥಳದಿಂದಲೇ ವಿವಿ ಕುಲಪತಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗ್ಗೆ ವಿವರಣೆ ಪಡೆದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಗತಿಗಳಿಗೆ ಹಾಜರಾಗಿ ಬೋಧನೆ ಮಾಡುವಂತೆ ಉಪನ್ಯಾಸಕರಲ್ಲಿ ಮನವಿ ಮಾಡಿದರಲ್ಲದೆ ಸಮಸ್ಯೆ ಪರಿಹಾರ ಸಂಬAಧ ರಾಜ್ಯಪಾಲರ ಬಳಿ ಕರೆದೊಯ್ಯುವದಾಗಿ ಭರವಸೆ ನೀಡಿದರು. ನಂತರ ಪ್ರಾಂಶು ಪಾಲರೊಂದಿಗೆ ಮಾತನಾಡಿದರು.
ಹಣ ದುರುಪಯೋಗವಾಗಿದೆ : ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಂಸದರು ಕಾಲೇಜಿನ ೬೫ ಮಂದಿ ಉಪನ್ಯಾಸಕರಿಗೆ ೫ ತಿಂಗಳಿನಿAದ ವೇತನ ಪಾವತಿ ಆಗಿಲ್ಲ. ಈ ಬಗ್ಗೆ ಕುಲಸಚಿವರೊಂದಿಗೆ ಮಾತನಾಡಿದ ಸಂದರ್ಭ ವಿವಿಯಲ್ಲಿ ಹಣಕಾಸು ವ್ಯವಸ್ಥೆ ಹದಗೆಟ್ಟಿದೆ ಎಂಬ ಉತ್ತರ ನೀಡಿದ್ದಾರೆ. ಈ ರೀತಿ ಯಾಕೆ ಆಗುತ್ತಿದೆ ಎಂದು ತಿಳಿಯುತ್ತಿಲ್ಲ. ಕಟ್ಟಡಗಳ ನಿರ್ಮಾಣ ಇತರ ವೆಚ್ಚವೆಂದು ಹಣ ಖರ್ಚು ಮಾಡಿ ಬಿಲ್ ಮಾಡುವ ದುರುಪಯೋಗವಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ಸಂಪೂರ್ಣ ಮಾಹಿತಿಯ ವರದಿ ಸಲ್ಲಿಸಲಾಗುವುದೆಂದು ಹೇಳಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ , ಜಿಲ್ಲಾ ವಕ್ತಾರ ಬಿ.ಕೆ ಅರುಣ್ ಕುಮಾರ್, ಮಡಿಕೇರಿ ನಗರ ಅಧ್ಯಕ್ಷ ಉಮೇಶ್ ಸುಬ್ರಮಣಿ, ಕಾರ್ಯದರ್ಶಿ ಬಿ.ಕೆ. ಜಗದೀಶ್, ಕವನ್ ಕಾವೇರಪ್ಪ, ಮಹೇಶ್ ಜೈನಿ, ಇತರರು ಇದ್ದರು.