ಮಡಿಕೇರಿ, ಮಾ. ೫: ಹಾಕಿ ಕ್ರೀಡೆಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ನಡೆಯುತ್ತಿದ್ದು, ಕಳೆದ ಕೆಲವಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ರತಿಷ್ಠಿತ ಹಾಕಿ ಪಂದ್ಯಾವಳಿಯೊAದು ಕೊಡಗಿನಲ್ಲಿ ಮತ್ತೆ ಪುನರಾರಂಭಗೊಳ್ಳುತ್ತಿದೆ. ಇದು ಕೊಡಗಿನ ಹಾಕಿ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದ್ದರೆ ಕ್ರೀಡಾಪಟುಗಳಿಗೆ ಉತ್ತಮವಾದ ಅವಕಾಶವಾಗಲಿದೆ. ನೆಸ್ಲೆ ಸಂಸ್ಥೆ ಹಾಗೂ ಸ್ಕಂದ ಕಾಫಿ ಸಂಸ್ಥೆಯ ಸಹಕಾರದೊಂದಿಗೆ ಕೆಲವು ವರ್ಷಗಳ ಹಿಂದೆ ನಿರಂತರವಾಗಿ ವಾರ್ಷಿಕವಾಗಿ ನೆಸ್ಲೆ ಕೊಡಗು ಕಪ್ ಹಾಕಿ ಪಂದ್ಯಾವಳಿ ಜರುಗುತ್ತಿತ್ತು. ಕೂರ್ಗ್ ಹಾಕಿ ಅಸೋಸಿಯೇಷನ್ ಸಂಸ್ಥೆö(ಸಿ.ಎಚ್.ಎ) ಕೊಡಗಿನಲ್ಲಿ ಅಧಿಕೃತ ಸಂಸ್ಥೆಯಾಗಿದ್ದ ಸಂದರ್ಭದಲ್ಲಿ ಈ ಪಂದ್ಯಾವಳಿ ನಡೆದುಕೊಂಡು ಬರುತ್ತಿತ್ತು.

ರಾಷ್ಟçಕ್ಕೆ ಸಾಕಷ್ಟು ಹಾಕಿ ಪ್ರತಿಭೆಗಳನ್ನು ನೀಡಿರುವ ಕೊಡಗನ್ನು ವಿಶೇಷವಾಗಿ ಪರಿಗಣಿಸಿ ನೆಸ್ಲೆ ಇಂಡಿಯಾ ಸಂಸ್ಥೆ ಹಲವು ಲಕ್ಷ ವೆಚ್ಚದಲ್ಲಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಈ ಪಂದ್ಯಾವಳಿ ಆಯೋಜಿಸಲು ಸಹಕಾರ ನೀಡಿತ್ತು. ಸತತವಾಗಿ ೨೧ ವರ್ಷಗಳ ಕಾಲ ಈ ಪಂದ್ಯಾವಳಿ ಕೊಡಗಿನಲ್ಲಿ ನಿರಂತರವಾಗಿ ಜರುಗಿತ್ತು. ಇದಾದ ಬಳಿಕ ೨೦೧೧-೧೨ರ ಸಂದರ್ಭದಲ್ಲಿ ರಾಷ್ಟçದಲ್ಲಿ ಹಾಕಿಯ ಅಧಿಕೃತ ಸಂಸ್ಥೆಯಲ್ಲಿ ಮಹತ್ತರ ಬದಲಾವಣೆ ಉಂಟಾಗಿದ್ದು ಹಾಕಿ ಇಂಡಿಯಾ ಸಂಸ್ಥೆಗೆ ಅಧಿಕೃತ ಮಾನ್ಯತೆ ದೊರೆತಿತ್ತು. ಈ ಸಂದರ್ಭದಲ್ಲಿ ಆದ ಬದಲಾವಣೆಗಳ ಪರಿಣಾಮದಿಂದಾಗಿ ರಾಜ್ಯದಲ್ಲಿ ಹಾಕಿ ಕರ್ನಾಟಕ ಸಂಸ್ಥೆ, ಕೊಡಗಿನಲ್ಲಿ ಸಿ.ಎಚ್.ಎ ಬದಲಾಗಿ ಹಾಕಿ ಕೂರ್ಗ್ ಸಂಸ್ಥೆ ಅಧಿಕೃತವಾಯಿತು. ಈ ಸಂದರ್ಭದ ಗೊಂದಲದ ಕಾರಣದಿಂದಾಗಿ ‘ನೆಸ್ಲೆ ಕೊಡಗು ಕಪ್’ ಪಂದ್ಯಾವಳಿಯೂ ಸ್ಥಗಿತಗೊಂಡAತಾಗಿತ್ತು. ಇದೀಗ ಹಾಕಿ ಕೂರ್ಗ್ ಸಂಸ್ಥೆಗೆ ಹೊಸದಾಗಿ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಈ ತಂಡ ಪ್ರತಿಷ್ಠಿತ ಪಂದ್ಯಾವಳಿಯ ಪುನರಾರಂಭಕ್ಕೆ ನಡೆಸಿದ ಪ್ರಯತ್ನ ಸಫಲವಾಗಿದೆ. ನೆಸ್ಲೆ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸೀನಿಯರ್ ಬಿಸ್‌ನೆಸ್ ಕನ್ಸಲ್ಟೆಂಟ್ ಆಗಿರುವ ಕರ್ತಮಾಡ ವಿಕ್ರಂ ಸುಬ್ಬಯ್ಯ ಇವರ ಸಂಬAಧಿ ಮಾಪಂಗಡ ಅಶೋಕ್ ಅವರುಗಳ ಸಹಕಾರದೊಂದಿಗೆ ನೆಸ್ಲೆ ಇಂಡಿಯಾದೊAದಿಗೆ ವ್ಯವಹರಿಸಿದ ಪರಿಣಾಮ ಮತ್ತೆ ನೆಸ್ಲೆ ಇಂಡಿಯಾ ಪ್ರಾಯೋಜಕತ್ವ ನೀಡಲು ಮುಂದೆ ಬಂದಿದೆ. ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ|| ಎ.ಬಿ. ಸುಬ್ಬಯ್ಯ ಸೇರಿದಂತೆ ಹಲವರು ಇದರಲ್ಲಿ ಪ್ರಯತ್ನ ನಡೆಸಿದ್ದಾರೆ.

ಇದೀಗ ‘ನೆಸ್ ಕೆಫೆ ಕೊಡಗು ಕಪ್’

ನೆಸ್ಲೆ ಇಂಡಿಯಾ ಪ್ರಾಯೋಜಕತ್ವದಲ್ಲಿ ಹಾಕಿ ಕೂರ್ಗ್ನ ಮೂಲಕ ಇದೀಗ ನೆಸ್ಲೆ ಕೊಡಗು ಕಪ್ ನೆಸ್‌ಕೆಫೆ ಕೊಡಗು ಕಪ್ ಹೆಸರಿನಲ್ಲಿ ಮರುಚಾಲನೆ ಪಡೆಯುತ್ತಿದ್ದು, ಮುಂದೆ ವರ್ಷಂಪ್ರತಿ ಈ ಪ್ರತಿಷ್ಠಿತ ಪಂದ್ಯಾವಳಿ ಮುಂದುವರಿಯಲಿದೆ.

ಪ್ರಮುಖರಿಂದ ಮಾಹಿತಿ

ನೆಸ್‌ಕೆಫೆ ಕೊಡಗು ಕಫ್ ಕುರಿತಾಗಿ ಹಾಕಿ ಕೂರ್ಗ್ನ ಪದಾಧಿಕಾರಿಗಳು ನಗರದಲ್ಲಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಪಳಂಗAಡ ಲವಕುಮಾರ್, ಉಪಾಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಅಮ್ಮಂಡಿರ ಕೆ. ಚೇತನ್ ಅವರುಗಳು ವಿವರವಿತ್ತರು. ಹಾಕಿ ಕೂರ್ಗ್ ನಡೆಸುವ ಜಿಲ್ಲಾ ಹಾಕಿ ಲೀಗ್‌ನಲ್ಲಿ ಮೊದಲ ಎಂಟು ಸ್ಥಾನ ಗಳಿಸಿರುವ (ಟಾಪ್ ೮) ತಂಡಗಳು ಈ ಬಾರಿಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಇದೇ ಮಾರ್ಚ್ ೧೫ರಿಂದ ೧೭ರತನಕ ಕಾಕೋಟುಪರಂಬು ಮೈದಾನದಲ್ಲಿ ನೆಸ್‌ಕೆಫೆ ಕೊಡಗು ಕಪ್ ಜರುಗಲಿದೆ.

ತಂಡಗಳು

ಬೊಟ್ಯತ್‌ನಾಡ್ ಕುಂದ, ಈಶ್ವರ ಯೂತ್ ಕ್ಲಬ್ ಬೇಗೂರು, ಕೋಣನಕಟ್ಟೆ ಇಲೆವೆನ್, ಮಲ್ಮ ಕಕ್ಕಬ್ಬೆ, ಎಂ.ಆರ್.ಎಫ್. ಮೂರ್ನಾಡು, ಬ್ಲೇಜ್ ಮೂರ್ನಾಡು, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ (ಕಾಲ್ಸ್) ಹಾಗೂ ಬೇರಳಿನಾಡು ಕಂಡAಗಾಲ ತಂಡಗಳು ಈ ಬಾರಿ ಪಾಲ್ಗೊಳ್ಳುತ್ತಿವೆ.

ಅತಿಥಿ ಆಟಗಾರರಿಗೆ ಅವಕಾಶ

ಪ್ರತಿ ತಂಡ ಐದು ಮಂದಿ ಅತಿಥಿ ಆಟಗಾರರನ್ನು ತಮ್ಮ ತಂಡದ ಪರವಾಗಿ ಕರೆಸಿಕೊಳ್ಳಲು ಅವಕಾಶವಿದೆ. ದೇಶದ ಪ್ರಖ್ಯಾತ ಆಟಗಾರರು ಅತಿಥಿ ಆಟಗಾರರಾಗಿ ವಿವಿಧ ತಂಡಗಳ ಪರ ಆಡಲಿದ್ದು, ಎಲ್ಲಾ ತಂಡಗಳು ಈ ಆಟಗಾರರ ಹೆಸರನ್ನು ಸದ್ಯಕ್ಕೆ ಗೌಪ್ಯವಾಗಿ ಇಟ್ಟಿವೆ. ಉದ್ಘಾಟನೆ ಸಂದರ್ಭ ಹಾಕಿ ಕೂರ್ಗ್ನ ಪ್ರಮುಖರು, ಜನಪ್ರತಿನಿಧಿಗಳು, ಇನ್ನಿತರ ಪ್ರಮುಖರೊಂದಿಗೆ ಸೀನಿಯರ್ ಬಿಸಿನೆಸ್ ಕನ್ಸಲ್ಟೆಂಟ್ ಕರ್ತಮಾಡ ವಿಕ್ರಂ ಸುಬ್ಬಯ್ಯ, ಬೆಳೆಗಾರ ಕಂಡ್ರತAಡ ಸುಬ್ರಮಣಿ, ನೆಸ್ಲೆ ಇಂಡಿಯಾದ ಸಿ.ಇ.ಓ ಸುರೇಶ್ ನಾರಾಯಣನ್, ನೆಸ್‌ಕೆಫೆ ಕಾಫಿಯ ನಿರ್ದೇಶಕ ಸುನೆಯಾನ್ ಮಿತ್ರ ಪಾಲ್ಗೊಳ್ಳಲಿದ್ದಾರೆ.

ಈ ಪಂದ್ಯಾವಳಿಯ ಕುರಿತ ಹೆಚ್ಚಿನ ಮಾಹಿತಿಗೆ ೯೯೮೦೫೨೩೪೪೩ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹಾಕಿ ಕೂರ್ಗ್ ಪ್ರಮುಖರು ತಿಳಿಸಿದರು. ಗೋಷ್ಠಿಯಲ್ಲಿ ಹಾಕಿ ಕೂರ್ಗ್ನ ನಿರ್ದೇಶಕಿ ಪೊಡನೋಳಂಡ ರೇಷ್ಮಾ ಉಪಸ್ಥಿತರಿದ್ದರು.