ಸುಂಟಿಕೊಪ್ಪ, ಮಾ. ೫: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸುಂಟಿಕೊಪ್ಪದಲ್ಲಿ ೨೧ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯ ಕ್ರಮ ನಡೆಯಿತು. ಆಯ್ದ ೮ ಮಂದಿ ಬಡ ಸುಂಟಿಕೊಪ್ಪ ಗದ್ದೆಹಳ್ಳದ ಎಸ್ ಎಸ್ ಇಂಟರ್ನ್ಯಾಷನಲ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಎಂಟು ಮಂದಿ ಬಡ ಮುಸ್ಲಿಂ ಹೆಣ್ಣು ಮಕ್ಕಳಿಗೆ ವಿವಾಹ ಕಾರ್ಯ ನಡೆಯಿತು.
ಸಮುದಾಯದ ಧರ್ಮ ಗುರು ಸೈಯದ್ ಕೆ.ಎಸ್. ಮುಕ್ತಾರ್ ತಂಙಳ್ ಕುಂಬೋಲ್ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು. ವಧುವಿಗೆ ಐದು ಪವನ್ ಚಿನ್ನಾಭರಣ ವಧೂ ವರರಿಗೆ ಹೊಸ ಉಡುಪು ಹಾಗೂ ನೆರೆದ ಸಾರ್ವಜನಿಕರಿಗೆ ಮಧ್ಯಾ ಹ್ನದ ಭೋಜನ ವ್ಯವಸ್ಥೆ ಮಾಡಲಾ ಗಿತ್ತು. ಎಸ್ಎಸ್ ಇಂಟರ್ನ್ಯಾಷನಲ್ ಕಲ್ಯಾಣ ಮಂಟಪದ ಮಾಲೀಕ ಎಂ.ಎA. ಸಾಹೀರ್ ತಮ್ಮ ಕಲ್ಯಾಣ ಮಂಟಪ ವನ್ನು ಈ ಸಾಮೂಹಿಕ ವಿವಾಹ ಸಮಾ ರಂಭಕ್ಕೆ ಉಚಿತವಾಗಿ ಒದಗಿಸಿದರು.
ದಾನಿಗಳ ಸ್ಪಂದನದಿAದ ಈ ಸಮಾ ರಂಭ ಆಯೋಜಿಸಲು ಸಾಧ್ಯವಾ ಯಿತು ಎಂದು ಸಮಿತಿಯ ಕೋಶಾಧಿಕಾರಿ ಅಬ್ದುಲ್ ಲತೀಫ್ ಹಾಜಿ ಹೇಳಿದರು. ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಸಮಾರಂಭದ ವೇದಿಕೆಯಲ್ಲಿ ಅಲ್ಅಮೀನ್ ಸಮಿತಿಯ ಅಧ್ಯಕ್ಷ ಬಿ.ಹೆಚ್. ಅಹಮದ್ ಹಾಜಿ, ಶಂಶುಲ್ ಉಲಮಾ ಎಜುಕೇಶನಲ್ ಟ್ರಸ್ಟ್ ಸಿ.ಪಿ.ಎಂ.ಬಶೀರ್ ಹಾಜಿ, ಕೊಡಗು ಜಿಲ್ಲಾ ನಾಯಿಭ್ ಖಾಝಿ ಅಬ್ದುಲ್ಲಾ ಫೈಝಿ, ಸುಂಟಿಕೊಪ್ಪ ಮುದ್ರರೀಸ್ ಸುನ್ನಿ ಮುಸ್ಲಿಂ ಜಮಾಅತ್ ಉಸ್ಮಾನ್ ಫೈಝಿ, ಗದ್ದೆಹಳ್ಳ ನೂರ್ ಜುಮಾ ಮಸೀದಿ ಖತೀಬ್ ಉಸಾಮಾ ಸಖಾಫಿ, ಕೊಡಗರಹಳ್ಳಿ ಬಾಪು ಹಾಜಿ, ಉಪಸ್ಥಿತರಿದ್ದರು.ದ ಎಂ.ಇ.ಮಹಮ್ಮದ್ ಪ್ರಾಸ್ತಾವಿಕ ನುಡಿಗಳಾನ್ನಾಡಿದರು.