ವಿಶೇಷ ವರದಿ: ಎಸ್.ಎಂ ಮುಬಾರಕ್

ಸಿದ್ದಾಪುರ, ಮಾ. ೩ : ಬಿಸಿಲಿನ ತಾಪಮಾನದಿಂದ ಕಾಡಿನಲ್ಲಿ ನೀರು ಆಹಾರ ಇಲ್ಲದೆ ಪರಿತಪಿಸುತ್ತಿರುವ ಪ್ರಾಣಿಗಳು ನಾಡಿನತ್ತ ಮುಖ ಮಾಡಿ ಕಾಫಿ ತೋಟಗಳಲ್ಲಿ ಠಿಕಾಣಿ ಹೂಡಿ ಕೃಷಿ ಪಸಲು ನಾಶ ಮಾಡುತ್ತಿರುವುದು ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿವೆ.

ಕೊಡಗು ಜಿಲ್ಲೆಯಲ್ಲಿ ವನ್ಯಮೃಗ ಮಾನವ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿ ಕಂಡು ಬರುತ್ತಿದ್ದು, ಪ್ರಾಣಿಗಳು ಹಾಗೂ ಮಾನವರ ಸಾವು ನೋವುಗಳು ಸಂಭವಿಸುತ್ತಲೇ ಇದೆ.

ದುಬಾರೆ ಹಾಗೂ ದೇವಮಚ್ಚಿ ಅರಣ್ಯದಲ್ಲಿ ಹೆಚ್ಚಾಗಿ ತೇಗದ ಮರಗಳು ಬೆಳೆದು ನಿಂತಿರುವುದರಿAದ ಆಹಾರ, ನೀರಿನ ಕೊರತೆ ಹಿನ್ನೆಲೆ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುವದು ಕಂಡುಬರುತ್ತಿದೆ.

ಸುಡುತ್ತಿರುವ ಸೂರ್ಯನ ಬಿಸಿಲಿನ ತಾಪಕ್ಕೆ ಭೂಮಿಯ ಒಳಗೆ ಪತರಗುಟ್ಟುತ್ತಿದೆ. ಅದರಲ್ಲೂ ಪ್ರಸ್ತುತ ಬಿಸಿಲಿನ ತಾಪಕ್ಕೆ ಹೈರಾಣಾಗಿರುವ ಕಾಡು ಪ್ರಾಣಿಗಳು ಆಹಾರ ಹಾಗೂ ನೀರಿಗಾಗಿ ನಾಡಿನತ್ತ ಲಗ್ಗೆ ಇಡುತ್ತಿದ್ದು, ಸ್ಥಳೀಯರು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ. ಪ್ರಾಣಿ ಪಕ್ಷಿಗಳು ಹಾಗೂ ವನ್ಯ ಪ್ರಾಣಿಗಳ ದಾಹ ನೀಗಿಸುತ್ತಿದ್ದ ಅರಣ್ಯದೊಳಗಿನ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ತೋಡು ಕೆರೆಗಳು ನೀರಿಲ್ಲದೇ ಒಣಗಲಾರಂಭಿಸಿವೆ. ಇದರಿಂದಾಗಿ ಮಾಲ್ದಾರೆ, ಕರಡಿಗೋಡು, ತಿತಿಮತಿ, ಚೆನ್ನಯ್ಯನಕೋಟೆ ಗ್ರಾಮಗಳಿಗೆ ಹೊಂದಿಕೊAಡಿರುವ ದುಬಾರೆ, ದೇವ ಮಚ್ಚಿ ಮೀಸಲು ಅರಣ್ಯ ಪ್ರದೇಶದಲ್ಲಿ ಸರಿ ಸುಮಾರು ೧೫ ಕೆರೆಗಳ ಪೈಕಿ ಬಹುತೇಕ ಕೆರೆಗಳು ನೀರಿಲ್ಲದೆ ಖಾಲಿಯಾಗುತ್ತಿವೆ. ಬಿಸಿಲ ಬೇಗೆಗೆ ಕೆರೆ ಬರಿದಾಗಿದ್ದು ಕೆರೆಯಲ್ಲಿನ ಜಲಚರಗಳು ಹಾಗೂ ಪ್ರಾಣಿ ಸಂಕುಲಗಳಿಗೂ ನೀರಿನ ಭವಣೆ ಎದುರಾಗಿದೆ.

ಅನೇಕ ಕೆರೆಗಳು ಖಾಲಿಯಾಗಿದ್ದು ಕೆರೆಗಳನ್ನು ಹೊಳೆತ್ತಿ ಅಭಿವೃದ್ಧಿ ಪಡಿಸಿದಲ್ಲಿ ವನ್ಯ ಪ್ರಾಣಿಗಳಿಗೆ ನೀರು ಸಂಗ್ರಹಣೆಯಾಗಲಿದೆ.

ಆಹಾರದ ಕೊರತೆ : ಬಿಸಿಲಿನ ಕಾವು ದಿನೇದಿನೇ ಏರುತ್ತಿದ್ದು, ಸರಿಯಾಗಿ ಮಳೆ ಇಲ್ಲದೇ ಅರಣ್ಯದಲ್ಲಿರುವ ಕೆರೆಯಲ್ಲಿ ನೀರು ಬತ್ತಿರುವ ಪರಿಣಾಮ ಕಾಡು ಪ್ರಾಣಿಗಳಿಗೆ ಕುಡಿಯುವ ನೀರು ಹಾಗೂ ಆಹಾರದ ಕೊರತೆ ಉಂಟಾಗಿದೆ. ಜಿಲ್ಲೆಯ ಸಿದ್ದಾಪುರ, ಕರಡಿಗೋಡು ಹಾಗೂ ಮಾಲ್ದಾರೆ ಗ್ರಾಮಗಳಲ್ಲಿ ಕಾಡಾನೆ, ಹುಲಿ, ಚಿರತೆ, ಕಾಡು ಕೋಣ, ಜಿಂಕೆ, ಕಾಡುಹಂದಿ, ಮೊದಲಾದ ಪ್ರಾಣಿಗಳು ಆಹಾರ ನೀರು ಆರಸಿಕೊಂಡು ಬಂದು ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಫಸಲು ನಾಶ: ಪ್ರತಿ ವರ್ಷ ಮಾರ್ಚ್ನಿಂದ ಜುಲೈವರೆಗೆ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಹೆಚ್ಚಿರುತ್ತದೆ. ವಲಸೆ ಹೋದ ಕಾಡಾನೆಗಳು ಹಿಂದಿರುಗುವುದರ ಜತೆಗೆ ಕಾಡಿನಲ್ಲಿ ಆಹಾರ ಅಲಭ್ಯತೆಯಿಂದ ಕಾಡಾನೆಗಳು ನಿತ್ಯ ಕಾಡಿನಿಂದ ತೋಟಕ್ಕೆ ಬಂದು ಹೋಗುವ ಬದಲು ತೋಟಗಳಲ್ಲಿಯೇ ಬೀಡು ಬಿಡುತ್ತವೆ.

ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುವ ಸಾಧ್ಯತೆಯಿದ್ದು ಕಾಡಿನಲ್ಲಿ ಈಗ ಬಿಸಿಲಿನ ತಾಪ ಹೆಚ್ಚಾಗಿದ್ದು, ಇದರಿಂದ ಅಲ್ಲಿನ ಕೆರೆ-ಕೊಳ್ಳಗಳು ಬತ್ತಿ ಅನೆಗಳಿಗೆ ನೀರಿನ ಸಮಸ್ಯೆ ಎದುರಾಗುತ್ತದೆ. ಇದರಿಂದಾಗಿ ಕಾಫಿ ತೋಟಗಳಲ್ಲಿ ಇರುವ ಕರೆ ನೀರು ಮತ್ತು ಹಲಸಿನಕಾಯಿಗಳನ್ನು ಹುಡುಕಿ ಬರುತ್ತಿರುವ ಕಾಡಾನೆಗಳು ಕಾಫಿ ಗಿಡ, ಬಾಳೆ, ತೆಂಗು ಮುಂತಾದ ಕೃಷಿ ಫಸಲುಗಳನ್ನು ನಾಶಪಡಿಸುತ್ತಿದೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ. ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ಕಾಡಾನೆಗಳು ದಾಟುವ ಸಮಯದಲ್ಲಿ ಕಾರ್ಮಿಕರು, ಶಾಲಾಮಕ್ಕಳು, ವಾಹನ ಸವಾರರು ಭಯದಿಂದ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಹುಲಿ, ಚಿರತೆ, ಕಾಡುಕೋಣ ಮುಂತಾದ ಪ್ರಾಣಿಗಳು ಮಾಲ್ದಾರೆ, ಕರಡಿಗೋಡುವಿನ ಕೆಲವು ತೋಟಗಳಲ್ಲಿ ಬೀಡು ಬಿಟ್ಟಿವೆ. ಕಾಡಾನೆಗಳನ್ನು ಅರಣ್ಯ ಇಲಾಖೆಯವರು ಕಾಡಿನತ್ತ ಓಡಿಸಿದರೂ ಅವು ಒಂದೆರಡು ದಿನಗಳಲ್ಲಿ ಮರಳಿ ಕಾಫಿ ತೋಟದತ್ತ ಬರುತ್ತಿವೆ.

ಕಾಡ್ಗಿಚ್ಚು ತಡೆಗೆ ಕ್ರಮ: ಬೇಸಿಗೆಯಲ್ಲಿ ಕಾಡಿನಲ್ಲಿ ಬೆಂಕಿ ಅನಾಹುತ ವಾಗದಿರಲೆಂದು ಅರಣ್ಯ ಇಲಾಖೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದೆ. ದುಬಾರೆ ಮೀಸಲು ಅರಣ್ಯ ಪ್ರದೇಶ ಹಾಗೂ ತಿತಿಮತಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಸಂಭವಿಸುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಜನವರಿ ತಿಂಗಳಲ್ಲಿ ಬೆಂಕಿ ರೇಖೆ (ಫೈರ್ ಲೈನ್) ರಚಿಸಿದೆ. ಅರಣ್ಯದಿಂದ ಹಾದು ಹೋಗುವ ಹೆದ್ದಾರಿ ಸೇರಿದಂತೆ ಅರಣ್ಯದೊಳಗೆ ಹಾದು ಹೋಗುವ ರಸ್ತೆಗಳ ೧೦ ಮೀಟರ್ ಅಗಲದಲ್ಲಿ ಕುರುಚಲು ಕಾಡು ಒಣ ಎಲೆಗಳನ್ನು ತೆರೆವುಗೊಳಿಸಿ ಸ್ವಚ್ಛಗೊಳಿಸುವ ಮೂಲಕ ಅಗ್ನಿ ರೇಖೆಯನ್ನು ಗುರುತಿಸಲಾಗಿದೆ.ತಿತಿಮತಿ, ಮಾಲ್ದಾರೆ ವ್ಯಾಪ್ತಿಯಲ್ಲಿ ಇದಕ್ಕಾಗಿ ಹೆಚ್ಚು ವಾಚರ್‌ಗಳನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಮಾಲ್ದಾರೆ ಸುತ್ತಮುತ್ತಲಿನ ಅರಣ್ಯ ವ್ಯಾಪ್ತಿಯಲ್ಲಿ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಆವರಿಸಿ ಅರಣ್ಯ ಬೆಂಕಿಗಾಹುತಿಯಾಗಿದ್ದವು. ಅಂತಹ ಘಟನೆಗಳು ಮರುಕಳಿಸದಂತೆ ಅತಿ ಸೂಕ್ಷö್ಮ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಕ್ಯಾಮೆರಾ ಹಾಗೂ ಡ್ರೋನ್‌ಗಳ ಬಳಕೆ ಮಾಡಲಾಗುತ್ತಿದೆ. ವಲಯಕ್ಕೊಂದರAತೆ ಜೀಪ್, ಟ್ಯಾಂಕರ್, ಸ್ಪೆçÃಯರ್, ಪವರ್ ಕಟಿಂಗ್ ಯಂತ್ರ ಮತ್ತು ಕ್ಯೂ ಆರ್ ಟಿ ವಾಹನ, ವಾಕಿ ಟಾಕಿ, ಹೀಗೆ ಎಲ್ಲವನ್ನು ಅರಣ್ಯ ಇಲಾಖೆ ಸಜ್ಜಾಗಿರಿಸಿಕೊಂಡಿದೆ.

ಅರಣ್ಯ ಸಂರಕ್ಷಣೆ ಮತ್ತು ಕಾಡ್ಗಿಚ್ಚಿನ ಕುರಿತು ಅರಿವು ಮೂಡಿಸುವ ಸಲುವಾಗಿ ಅರಣ್ಯ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಬೀದಿ ನಾಟಕ ಮತ್ತು ಕರ ಪತ್ರಗಳ ಮೂಲಕ ಬೇಸಿಗೆಯಲ್ಲಿ ಅರಣ್ಯದಂಚಿನ ನಿವಾಸಿಗಳು ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ತಿಳಿಸಲಾಗುತ್ತಿದೆ.

ಬೆಂಕಿ ಬಿದ್ದಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತದೆ. ಪ್ರಾಣಿ ಪಕ್ಷಿಗಳು ತಪ್ಪಿಸಿಕೊಳ್ಳಲಾಗದೆ ನೇರವಾಗಿ ಬೆಂಕಿಗೆ ಆಹುತಿಯಾಗುತ್ತದೆ. ಅರಣ್ಯ ಇಲಾಖೆ ಕಾಡಿನಲ್ಲಿ ಇನ್ನಷ್ಟು ಕೆರೆಗಳನ್ನು ನಿರ್ಮಾಣ ಮಾಡಬೇಕಾಗಿದೆ ಹಾಗೂ ಪಕ್ಷಿಗಳಿಗೆ ಉಪಯೋಗವಾಗುವ ಹಣ್ಣು ಹಂಪಲುಗಳ ಮರ ನೆಡಲು ಕ್ರಮ ವಹಿಸಬೇಕಿದೆ.

ಬೇಸಿಗೆಯಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಸ್ವಯಂ ಪ್ರೇರಿತವಾಗಿ ಅಲ್ಲಲ್ಲಿ ತೆರೆದ ಪಾತ್ರೆಗಳಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು ಇಟ್ಟು ದಾಹ ನೀಗಿಸುವ ಕಾರ್ಯ ಮಾಡಬೇಕು ಹಾಗೂ ಕಾಡಿನಲ್ಲಿ ಬೆಂಕಿ ಕಂಡರೆ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕಾಗಿದೆ. ಇದರಿಂದ ಪ್ರಕೃತಿಯ ಜೀವ ಸಂಕುಲ ಉಳಿಯುತ್ತದೆ.

ಪ್ರಕೃತಿ ಹಾಗೂ ಅರಣ್ಯ ಪರಿಸರವನ್ನು ಉಳಿಸಿ ಬೆಳೆಸುವುದರೊಂದಿಗೆ ಪ್ರಾಣಿಗಳ ರಕ್ಷಣೆಗೂ ಮುಂದಾಗಬೇಕಾಗಿದೆ.

ದುಬಾರೆ ಮಾಲ್ದಾರೆ ಅರಣ್ಯ ವ್ಯಾಪ್ತಿಯಲ್ಲಿ ೧೫ ಕೆರೆಗಳ ಪೈಕಿ ಕೆಲವು ಕೆರೆಗಳು ಬತ್ತಿ ಹೋಗಿದೆ. ದುಬಾರೆ ಕಾವೇರಿ ನದಿ ಹತ್ತಿರ ಇರುವುದರಿಂದ ಪ್ರಾಣಿಗಳು ಹೆಚ್ಚಾಗಿ ನದಿ ನೀರನ್ನು ಅವಲಂಬಿಸಿವೆ. ಈಗಾಗಲೇ ಕಾಡ್ಗಿಚ್ಚು ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಹಮ್ಮಿಕೊಂಡು ತಿಳುವಳಿಕೆ ನೀಡಲಾಗಿದೆ. ಕಾಡ್ಗಿಚ್ಚು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿಗಳನ್ನು ಮುಂಜಾಗ್ರತೆ ವಹಿಸಲು ನಿಯೋಜನೆ ಮಾಡಲಾಗಿದೆ ಎಂದು ದುಬಾರೆ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಶಕ್ತಿಗೆ ತಿಳಿಸಿದ್ದಾರೆ.