ಮಡಿಕೇರಿ, ಮಾ. ೩: ಅನೆದಾಳಿಗೆ ತುತ್ತಾಗಿ ವೃದ್ಧನೋರ್ವ ಪ್ರಾಣಕಳೆದು ಕೊಂಡ ಘಟನೆ ನಗರದ ಹೊರವಲಯದ ನಿಶಾನಿ ಬೆಟ್ಟದಲ್ಲಿ ನಡೆದಿದೆ.
೨ನೇ ಮೊಣ್ಣಂಗೇರಿ ನಿವಾಸಿ ಕುಡಿಯರ ಅಪ್ಪಚ್ಚ (೫೮) ಮೃತ ದುರ್ದೈವಿ. ಗ್ರಾಮದಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಅಪ್ಪಚ್ಚ ತಾ. ೨ ರಂದು ಗಾಳಿಬೀಡಿಗೆ ಆಗಮಿ ಸುತ್ತಿದ್ದ ಸಂದರ್ಭ ಆನೆ ದಾಳಿ ನಡೆಸಿರಬಹುದು ಎಂದು ಶಂಕಿಸ ಲಾಗಿದೆ. ಮೃತ ಅಪ್ಪಚ್ಚ ಚಾರಣಿಗರಿಗೆ ಊಟದ ವ್ಯವಸ್ಥೆ ಮಾಡುತ್ತ ಮಾರ್ಗದರ್ಶನ ನೀಡುವ ಕೆಲಸ ಮಾಡುತಿದ್ದರು. ಜೊತೆಗೆ ಕೂಲಿ ಕೆಲಸದಲ್ಲಿಯೂ ತೊಡಗಿಸಿ ಕೊಂಡಿದ್ದರು.
ಇಂದು ಮುಂಜಾನೆ ನಿಶಾನಿ ಬೆಟ್ಟಕ್ಕೆ ಪ್ರವಾಸಿಗರು ಚಾರಣಕ್ಕೆ ತೆರಳಿದ ಸಂದರ್ಭ ಮೃತದೇಹ ಕಂಡುಬAದಿದ್ದು, ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂ ತರಿಸಲಾಗಿದೆ. ಘಟನಾ ಸ್ಥಳದಲ್ಲಿ ಆನೆ ಹೆಜ್ಜೆ ಗುರುತು ಪತ್ತೆಯಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಬೀಡುಬಿಟ್ಟಿರುವ ಆನೆಗಳನ್ನು ಕಡಮಕೊಲ್ಲಿ ಅರಣ್ಯ ಪ್ರದೇಶಕ್ಕೆ ಅಟ್ಟಲು ಕ್ರಮವಹಿಸ ಲಾಗುವುದು. ಜೊತೆಗೆ ಸೋಲಾರ್ ದೀಪ ಅಳವಡಿಕೆಗೆ ಕ್ರಮವಹಿಸ ಲಾಗುವುದು ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.