ವೀರಾಜಪೇಟೆ, ಮಾ. ೩: ಕೇರಳ ರಾಜ್ಯದ ವಿವಿಧೆಡೆಗಳಿಂದ ಸಂಗ್ರಹಿಸಿದ ತ್ಯಾಜ್ಯಗಳನ್ನು ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ವಶಕ್ಕೆ ಪಡೆದು ದಂಡÀ ವಿಧಿಸಿದ ಘಟನೆ ಗಡಿ ಭಾಗವಾದ ಮಾಕುಟ್ಟದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದ ನಿವಾಸಿ ಭೈರ ಜಿ. (೩೬) ತನ್ನ ವಾಹನದಲ್ಲಿ ಅಕ್ರಮವಾಗಿ ತ್ಯಾಜ್ಯ ತುಂಬಿ ರಾಜ್ಯಕ್ಕೆ ಸಾಗಾಟ ಮಾಡುವ ವೇಳೆ ಸೆರೆಸಿಕ್ಕಿದ್ದಾನೆ.
ಇಂದು ಮುಂಜಾನೆ ಕೊಡಗು - ಕೇರಳ ಗಡಿಭಾಗವಾದ ಮಾಕುಟ್ಟ ಅರಣ್ಯ ತಪಾಸಣೆ ಕೇಂದ್ರದಲ್ಲಿ ಎಂದಿನAತೆ ವಾಹನ ತಪಾಸಣೆ ಮಾಡುವ ವೇಳೆಯಲ್ಲಿ ಅಶೋಕ್ ಲೈಲ್ಯಾಂಡ್ ದೋಸ್ತ್ (ಕೆಎ ೧೦-೯೫೮೪) ವಾಹನದಲ್ಲಿದ್ದ ವಸ್ತುಗಳಿಗೆ ಯಾವುದೇ ಪರವಾನಗಿ ಇಲ್ಲದೆ ಸಾಗಾಟ ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಮಾಡುತ್ತಿರುವ ತ್ಯಾಜ್ಯ ವಸ್ತುಗಳು ತುಂಬಿರುವ ಚೀಲಗಳು ಪತ್ತೆಯಾಗಿವೆೆ. ಕೇರಳ ರಾಜ್ಯದ ಕಣ್ಣೂರು ಭಾಗದ ವಿವಿಧೆಡೆಗಳಿಂದ ಸಂಗ್ರಹವಾದ ತ್ಯಾಜ್ಯವನ್ನು ಕೊಳ್ಳೇಗಾಲಕ್ಕೆ ಸಾಗಿಸುತ್ತಿರುವುದಾಗಿ ಚಾಲಕ ತನಿಖೆಯ ವೇಳೆ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾನೆ.
ಅಕ್ರಮ ತ್ಯಾಜ್ಯ ಸಾಗಾಟ ಮಾಡುವುದು ಕಾನೂನು ಬಾಹಿರವಾಗಿರುವುದರಿಂದ ವೀರಾಜಪೇಟೆ ಬೇಟೋಳಿ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲಾಯಿತು. ಪಂಚಾಯಿತಿ ಅಧಿಕಾರಿ ಆದೇಶದ ಮೇರೆಗೆ ದಿನೇಶ್ ಅವರು ಸ್ಥಳಕ್ಕೆ ಆಗಮಿಸಿ ರೂ. ೧೦೦೦ ದಂಡ ವಿಧಿಸಲಾಯಿತು. ವಶಕ್ಕೆ ಪಡೆದ ವಾಹನವನ್ನು ಮರಳಿ ಕೇರಳ ರಾಜ್ಯಕ್ಕೆ ಕಳುಹಿಸಲಾಯಿತು. ವಲಯ ಅರಣ್ಯ ಅಧಿಕಾರಿಗಳಾದ ಸುಹಾನ ಹರೀಶ್ ಅತ್ತಾವರ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯ ಅಧಿಕಾರಿ ಚಂದ್ರಶೇಖರ, ಮಹಾದೇವ, ಹುರುಳಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ