ನಾಪೋಕ್ಲು, ಫೆ. ೩: ನಾಪೋಕ್ಲು-ಮೂರ್ನಾಡು ಮುಖ್ಯರಸ್ತೆಯ ಸಮೀಪದಲ್ಲೇ ಇರುವ ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನ ನೂತನವಾಗಿ ನಿರ್ಮಾಣಗೊಂಡಿದೆ. ಪುನರ್ ಪ್ರತಿಷ್ಠಾಪನೆ ಬ್ರಹ್ಮ ಕಲಶೋತ್ಸವದ ಅಂಗವಾಗಿ ಅಂತಿಮ ಹಂತದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ.

ಸುಮಾರು ೧.೫ ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದ್ದು, ಇತಿಹಾಸದ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಪಸ್ಸು ಮಾಡಿದ ದೈವಿಕ ತಾಣ ಇದು ಎಂದು ನಂಬಲಾಗಿದೆ. ಮಹಾಕಾಳಿ, ಮಹಾಲಕ್ಷಿö್ಮ, ಮಹಾಸರಸ್ವತಿ ನೆಲೆ ನಿಂತ ತಾಣ ಇದಾಗಿದೆ. ದೇವಾಲಯವನ್ನು ಕಾರ್ಕಳದಿಂದ ತರಲಾದ ಕಲ್ಲಿನಿಂದಲೇ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿ ಇತ್ತಾಕರ್ಷಕ ಕುಸುರಿ ಕೆಲಸದೊಂದಿಗೆ ಸಂಪೂರ್ಣವಾಗಿ ನಿರ್ಮಿಸಲಾಗಿರು ವುದು ವಿಶೇಷ .

ಗ್ರಾಮದ ಹೆಸರು ಹೊದ್ದೂರು ಎಂದಾಗಿದ್ದು ಋಷಿಮುನಿಗಳ ತಪಶಕ್ತಿಯಿಂದ ಊರಿನ ಜನರ ಮೈಮೇಲೆ ದರ್ಶನ ಬರುತ್ತಿತ್ತು. ದೇವ ಮಹಿಮೆ ಜನರ ಮೇಲೆ ಬಂದ ಊರು ಕೊಡವ ಭಾಷೆಯ ಪೊದ್ದು ನಂತರ ಹೊದ್ದೂರು ಎಂದಾಯಿತು ಎಂದು ಹೇಳಲಾಗುತ್ತಿದೆ.

ಮರಕಡ ಶ್ರೀ ಗುರ ಪರಾಶಕ್ತಿ ಮಠದ ಪರಮಪೂಜ್ಯ ನರೇಂದ್ರನಾಥ ಯೋಗೇಶ್ವರ ಮಹಾಸ್ವಾಮಿಯವರ ಪೂರ್ಣ ಅನುಗ್ರಹದೊಂದಿಗೆ ನಿತಿನ್ ನರೇಂದ್ರನಾಥ ಯೋಗೇಶ್ವರ ಸ್ವಾಮಿ ಮತ್ತು ಮಾತೆ ಶಕುಂತಲಾ ಅಮ್ಮನವರ ದಿವ್ಯ ಮಾರ್ಗದರ್ಶನದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿದೆ.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚೌರಿರ ಕೆ. ಮೇದಪ್ಪ, ದೇವತಕ್ಕರಾಗಿ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯರಾಗಿರುವ ಮಾಜಿ ಸೈನಿಕ, ನಿವೃತ್ತ ಶಿಕ್ಷಕ ಚೌರೀರ ಉದಯ ಸೇರಿದಂತೆ ಸಮಿತಿ ಸದಸ್ಯರು ಗ್ರಾಮಸ್ಥರು ಕಾರ್ಯನಿರ್ವ ಹಿಸುತ್ತಿದ್ದು ಇದೀಗ ದೇವಾಲಯಕ್ಕೆ ಅಳವಡಿಸಿದ್ದ ಶಿಲೆಗಳನ್ನು ಪಾಲಿಶ್, ದೇವಾಲಯದ ಸುತ್ತಲೂ ಇಂಟರ್ಲಾಕ್ ಅಳವಡಿಕೆ, ಗಾರ್ಡನ್ ಪೂರ್ವಭಾವಿ ಸಿದ್ದತೆ ತ್ವರಿತವಾಗಿ ಜರುಗುತ್ತಿದ್ದು ಸುಮಾರು ೧.೫ ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದೆ.

ದೇವಾಲಯದ ಪುನರ್ ಪ್ರತಿಷ್ಠಾಪನೆ ಬ್ರಹ್ಮ ಕಲಶೋತ್ಸವ ಮತ್ತಿತರ ವೈದಿಕ ಕಾರ್ಯಕ್ರಮಗಳು ನೀಲೇಶ್ವರ ಪದ್ಮನಾಭ ತಂತ್ರಿ ಅವರ ಮುಂದಾಳತ್ವದಲ್ಲಿ ಮಾರ್ಚ್ ೭ ಗುರುವಾರದಿಂದ ಮೊದಲಗೊಂಡು ಮಾರ್ಚ್ ೧೪.ವರೆಗೆ ಒಂದು ವಾರಗಳ ಕಾಲ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿAದ ಜರುಗಲಿದೆ.