ಸೋಮವಾರಪೇಟೆ, ಮಾ. ೩: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿ ಓದುವ ಅಭಿರುಚಿಯನ್ನು ಬೆಳೆಸುವ ಪ್ರಮುಖ ಗುರಿಯನ್ನು ಹೊಂದಿರುವ 'ಮಕ್ಕಳ ಸಾಹಿತ್ಯ ಸಂಭ್ರಮ' ಕಾರ್ಯಕ್ರಮ ತಾ. ೪ರಂದು (ಇಂದು) ಚನ್ನಬಸಪ್ಪ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಉದ್ಘಾಟನೆಗೊಳ್ಳಲಿದೆ.

ತಾ. ೪ರಿಂದ ೬ರವರೆಗೆ ನಡೆಯುವ ಶಿಬಿರದಲ್ಲಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ೬ ರಿಂದ ೯ ನೇ ತರಗತಿಯ ೧೦೦ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಶಿಬಿರಗಳಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಕಥೆ, ಕವಿತೆ, ನಾಟಕಗಳನ್ನು ವಾಚನ ಮಾಡಲು, ಬರೆಯಲು ಪ್ರೇರೇಪಿಸಲಾಗುತ್ತದೆ.

ಜಿಲ್ಲಾ ಪಂಚಾಯಿತಿ ಕೊಡಗು, ತಾಲೂಕು ಪಂಚಾಯತ್ ಸೋಮ ವಾರಪೇಟೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಆರು ಗ್ರಾಮ ಪಂಚಾಯಿತಿಗಳಾದ ಚೌಡ್ಲು, ಬೇಳೂರು, ಐಗೂರು, ದೊಡ್ಡಮಳ್ತೆ, ನೇರುಗಳಲೆ, ಗಣಗೂರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಶಿಬಿರ ನಡೆಯಲಿದೆ.