ಮಡಿಕೇರಿ, ಮಾ. ೩: ಮಕ್ಕಳಲ್ಲಿ ಅಂಗವೈಕಲ್ಯತೆ ತಪ್ಪಿಸುವ ನಿಟ್ಟಿನಲ್ಲಿ ಪಲ್ಸ್ ಪೋಲಿಯೋ ಹಾಕಿಸುವ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.
ಜಿಲ್ಲೆಯಲ್ಲಿ ಒಟ್ಟು ೪೬೪ ಬೂತ್ಗಳಲ್ಲಿ ಪೋಲಿಯೋ ಹಾಕಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಜನಸಂದಣಿ ಇರುವ ಪ್ರದೇಶ ಮತ್ತು ಬಸ್ ನಿಲ್ದಾಣಗಳು ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ೩೧ ಟ್ರಾನ್ಸಿಟ್ ಬೂತ್ ಗಳನ್ನು ಸ್ಥಾಪಿಸಲಾಗಿತ್ತು. ಜೊತೆಗೆ ಮಡಿಕೇರಿ ತಾಲೂಕಿನಲ್ಲಿ ೧ ಸಂಚಾರಿ ತಂಡದ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯಲ್ಲಿ ೦-೫ ವರ್ಷ ದೊಳಗಿನ ಮಕ್ಕಳ ಒಟ್ಟು ೩೬,೫೯೫ ಗುರುತಿಸಲಾಗಿತ್ತು. ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ೩೨,೨೬೧ ಮಕ್ಕಳು ಹಾಗೂ ನಗರ ಪ್ರದೇಶದಲ್ಲಿ ೪,೩೩೪ ಮಕ್ಕಳನ್ನು ಗುರುತಿಸಲಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ೮೯೦ ವಲಸೆ ಪ್ರದೇಶಗಳನ್ನು ಗುರುತಿಸಿದ್ದು, ಒಟ್ಟು ವಲಸಿಗರ ಜನಸಂಖ್ಯೆ ೨೪,೦೨೧ ಇದ್ದು, ಇವರಲ್ಲಿ ೦-೫ ವರ್ಷ ದೊಳಗಿನ ಒಟ್ಟು ೩೧೪೩ ಮಕ್ಕಳನ್ನು ಗುರುತಿಸಲಾಗಿದೆ. ಸ್ಥಿರ ವಾಸಿತ ವಲಸಿಗರ ೩೫೦ ಪ್ರದೇಶ ಗಳನ್ನು ಗುರುತಿಸಲಾಗಿದ್ದು, ಒಟ್ಟು ಜನಸಂಖ್ಯೆ ೨,೬೬,೭೭೦ ಇದ್ದು, ಇವರಲ್ಲಿ ೦-೫ ವರ್ಷದೊಳಗಿನ ೧೪,೪೬೦ ಮಕ್ಕಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ೩೫,೪೮೪ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಶೇ. ೯೬.೯೬ ಗುರಿ ಸಾಧಿಸಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ೭,೪೮೮ ಮಕ್ಕಳಿಗೆ (೯೫.೬೦%), ಸೋಮವಾರಪೇಟೆ ತಾಲೂಕಿನಲ್ಲಿ ೧೧,೦೪೧ ಮಕ್ಕಳಿಗೆ (೯೮.೪೫%), ವೀರಾಜಪೇಟೆ ತಾಲೂಕಿನಲ್ಲಿ ೧೩,೦೫೫ ಮಕ್ಕಳಿಗೆ (೯೬.೨೬%) ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ಲಸಿಕೆ ನೀಡಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶಗಳಲ್ಲಿ ಲಸಿಕೆ ನೀಡಲು ಅವಶ್ಯಕತೆ ಇರುವ ಕಡೆಗಳಲ್ಲಿ ತರಬೇತಿಯಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಕಾರ್ಯನಿರ್ವಹಿಸಿದರು.
ಮಡಿಕೇರಿಯಲ್ಲಿ ಚಾಲನೆ
‘ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್ ಅವರು ಚಾಲನೆ ನೀಡಿದರು.
ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಲಸಿಕಾ ವಿಭಾಗದಲ್ಲಿ (ಜಿಲ್ಲಾಸ್ಪತ್ರೆ) ಶಿಶುವಿಗೆ ಪೋಲಿಯೋ ಹನಿ ನೀಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ವಿಕಲತೆ ತಪ್ಪಿಸುವಲ್ಲಿ ೧೯೯೫ರಿಂದ ಪೋಲಿಯೋ ಹನಿ ನೀಡುತ್ತಾ ಬರಲಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್ ಮಾತನಾಡಿ, ೫ ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಬೇಡ ಎಂದು ಕೋರಿದರು.
ಜಿಲ್ಲಾ ಶಸ್ತçಚಿಕಿತ್ಸಕ ಡಾ. ನಂಜುAಡಯ್ಯ ಮಾತನಾಡಿ, ಭಾರತವು ಈಗಾಗಲೇ ಪೋಲಿಯೋ ಮುಕ್ತ ವಾಗಿದೆ. ಆದರೂ ಹತ್ತಿರದ ರಾಷ್ಟçಗಳಲ್ಲಿ ಪೋಲಿಯೋ ಕಾಣಿಸಿಕೊಂಡಿರು ವುದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಐದು ವರ್ಷ ದೊಳಗಿನ ಮಗುವಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆನಂದ್ ಮಾತನಾಡಿ ಪೋಲಿಯೋ ಹನಿ ಕೊಡಿಸು ವುದರಿಂದ ಮಕ್ಕಳಿಗೆ ಅಂಗವಿಕಲತೆ ಬರುವುದಿಲ್ಲ. ಆದ್ದರಿಂದ ಕಡ್ಡಾಯ ವಾಗಿ ಕೊಡಿಸಬೇಕು. ಇದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮಾತನಾಡಿ, ಈಗಾಗಲೇ ರಾಷ್ಟçದಲ್ಲಿ ಪೋಲಿಯೋ ಮುಕ್ತವಾ ಗಿದ್ದರೂ ಸಹ ನೆರೆ ರಾಷ್ಟçಗಳಲ್ಲಿ ೧೨ ಮಂದಿಗೆ ಪೋಲಿಯೋ ಬಾಧೆ ಕಾಣಿಕೊಂಡಿರುವುದರಿAದ ಅಗತ್ಯ ಮುನ್ನೆಚ್ಚರ ವಹಿಸಲಾಗಿದೆ ಎಂದರು. ವೈರಸ್ ತಡೆಯಲು ಅತ್ಯಂತ ಸುರಕ್ಷಿತ ವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ರವೀಂದ್ರ ರೈ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ ಅವರು ಮಾತನಾಡಿದರು. ಆರ್ ಸಿಎಚ್ ಅಧಿಕಾರಿ ಡಾ.ಮಧುಸೂದನ, ತಾಲೂಕು ವೈದ್ಯಾಧಿಕಾರಿ ಡಾ.ಚೇತನ್, ಅರವಳಿಕೆ ತಜ್ಞರಾದ ಡಾ.ಧನಂಜಯ ಮೇದಪ್ಪ, ಡಾ.ಸಲ್ಮಾ, ಡಾ.ಹರ್ಷ, ಶ್ರೀನಾಥ್, ಶ್ರೀನಿವಾಸ್, ಪಾಲಕ್ಷ, ಭವಾನಿ, ದೇಚಮ್ಮ, ದೇವರಾಜು, ಇತರರು ಇದ್ದರು.