ಸಿದ್ದಾಪುರ, ಮಾ. ೧: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಕಾಡ್ಗಿಚ್ಚಿನಿಂದ ವನ್ಯಜೀವಿಗಳು ಹಾಗೂ ಪರಿಸರಕ್ಕೆ ಆಗುವ ಅನಾಹುತಗಳ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕ ಆಯೋಜಿಸಲಾಗಿತ್ತು.

ಕುಶಾಲನಗರದ ಜನಸಾಮಾನ್ಯರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಇವರ ನೇತೃತ್ವದಲ್ಲಿ ಕಲಾವಿದರು ಬೀದಿ ನಾಟಕ ಪ್ರದರ್ಶಿಸಿದರು. ಕುಶಾಲನಗರ ವಲಯದ ದುಬಾರೆ ಮೀಸಲು ಪ್ರದೇಶದ ಅರಣ್ಯ ಅಧಿಕಾರಿ ಆರ್.ಎಫ್.ಓ. ರತನ್ ಕುಮಾರ್ ಮಾರ್ಗದರ್ಶನದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಾಲ್ದಾರೆ ಉಪವಲಯ ಅರಣ್ಯ ಅಧಿಕಾರಿ ಬೋಪ್ಪಣ್ಣ, ಗಸ್ತು ವನಪಾಲಕ ಮಣಿಕಂಠ, ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಗ್ರಾ.ಪಂ. ಮಾಜಿ ಸದಸ್ಯ ಗಣೇಶ, ಮಾಲ್ದಾರೆ ಶಾಲಾ ಮುಖ್ಯ ಶಿಕ್ಷಕಿ ಈಶ್ವರಿ, ಅಂಬೇಡ್ಕರ್ ಸೇನಾ ಸಮಿತಿಯ ಸತೀಶ್, ಆರ್.ಆರ್.ಟಿ. ಸಿಬ್ಬಂದಿಗಳಾದ ಶಶಿ, ಸ್ಥಳೀಯರಾದ ಹಮೀದ್, ಗಫೂರ್ ಹಾಗೂ ಮಾಲ್ದಾರೆ ಶಾಲಾ ಮಕ್ಕಳು ಹಾಜರಿದ್ದರು.