ಚೆಯ್ಯAಡಾಣೆ, ಮಾ. ೧: ಎಡಪಾಲ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಎಡಪಾಲ ಸೂಪರ್ ಲೀಗ್ ಫುಟ್ಬಾಲ್ ಪಂದ್ಯದಲ್ಲಿ ದಿ ಟೈಗರ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ಬುಗಂಬೊ ತಂಡ ರನ್ನರ್ಸ್ಗೆ ತೃಪ್ತಿ ಪಟ್ಟುಕೊಂಡಿದೆ. ಮೊದಲಾರ್ಧ ಹಾಗೂ ದ್ವಿತೀಯಾರ್ಧದಲ್ಲಿ ತಂಡಗಳು ಸಮಬಲದ ಹೋರಾಟ ನಡೆಸಿದವು. ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಂತರ ನಡೆದ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ರಶೀದ್ ಮಾಲೀಕತ್ವದ ದಿ ಟೈಗರ್ಸ್ ತಂಡ ನೌಷೀರ್ ಮಾಲೀಕತ್ವದ ಬುಗಂಬೊ ತಂಡವನ್ನು ೨-೧ ಗೋಲಿನಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಕರಿಸಿತು.

ಪಂದ್ಯ ಪುರುಷ ಹಾಗೂ ಚಿನ್ನದ ಶೂ(ಗೋಲ್ಡನ್ ಬೂಟ್)ಅನ್ನು ದಿ ಟೈಗರ್ಸ್ ತಂಡದ ಉಸ್ಮಾನ್, ಬೆಸ್ಟ್ ಸ್ಟೆçöÊಕರ್ ಆಗಿ ಬುಗಂಬೊ ತಂಡದ ಶಮಾಲ್, ಬೆಸ್ಟ್ ಗೋಲ್‌ಕಿಪರ್ ಆಗಿ ಆರ್.ಎಂ. ಫ್ರೆಂಡ್ಸ್ ತಂಡದ ನವಾಫ್, ಬೆಸ್ಟ್ ಡಿಫೆಂಡರ್ ಆಗಿ ಬುಗಂಬೊ ತಂಡದ ಯುನಸ್, ಎನರ್ಜಿಗ್ ಪ್ಲೇಯರ್ ಆಗಿ ಎಂಬಾಪೇ ತಂಡದ ಆಜ್ಮಿಲ್, ಪ್ಲೇಯರ್ ಮೇಕರ್ ಆಗಿ ದಿ ಟೈಗರ್ಸ್ ತಂಡದ ಅಪ್ಲಲ್ ಪ್ರಶಸ್ತಿ ಪಡೆದುಕೊಂಡರು.

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವೈದ್ಯ ಡಾ. ಬಾದುಷಾ, ಕೊಡಗು ಮುಸ್ಲಿಂ ಕ್ರಿಕೆಟ್ ಕಪ್ ಸ್ಥಾಪಕ ರಶೀದ್ ಕುಪ್ಪೋಡಂಡ, ಇಪಿಎಲ್ ಸ್ಥಾಪಕ ಹನೀಫ್ ಮತಿತ್ತರರು ಉಪಸ್ಥಿತರಿದ್ದರು.